ಗೆಸ್ ಮಾಡಿ: ಇದು ಯಾವ ಕಾರು ಬಲ್ಲಿರೇನು?
ಮೊದಲು ಇಲ್ಲಿ ಪ್ರಕಟಿಸಿರುವ ಚಿತ್ರ ನೋಡಿ. ಇದು ಯಾವ ಕಾರು ಬಲ್ಲಿರೇನು? ನಮಗೆ ಗೊತ್ತಿಲ್ವ, ಇದು ರೇಂಜ್ ರೋವರ್ ಇವೊಕ್ ಅಂತ ನೀವು ಹೇಳಿದ್ರೆ ನಿಮ್ಮ ಉತ್ತರ ತಪ್ಪು. ಯಾಕೆಂದರೆ ಇದು ರೇಂಜ್ ರೋವರ್ ಇವೊಕ್ ಅಲ್ಲ. ಇದು ಮಾಡಿಫೈ ಮಾಡಿರುವ ಟಾಟಾ ಸಫಾರಿ ಕಾರು!
ಮಾಡಿಫೈ ಮಾಡಿರುವ ಟಾಟಾ ಸಫಾರಿ ಕಾರಿಗೆ ಮೂನ್ ರೋವರ್ ಎಂದು ಹೆಸರಿಡಲಾಗಿದೆ. ಇದು ಇವೊಕ್ ಕಾರಿನ ಸರಿಯಾದ ಪರಿಷ್ಕೃತ ಆವೃತ್ತಿಯಲ್ಲ. ಬಹುಮಟ್ಟಿಗೆ ಇವೊಕ್ ಕಾರನ್ನು ಹೋಲುತ್ತದೆ. ಇದನ್ನು ಮಾಡಿಫೈ ಮಾಡಿರುವರು ಯಾರು ಎಂದು ಕೇಳುವಿರಾ?
ಸದ್ಯ ನಮ್ಮ ದೇಶಕ್ಕೆ ರೇಂಜ್ ರೋವರ್ ಇವೊಕ್ ಕಾರನ್ನು ಸಿಬಿಯು ಹಾದಿ ಮೂಲಕ ಆಮದು ಮಾಡಿಕೊಳ್ಳಲಾಗುತ್ತದೆ. ಇದರ ದರ ಸುಮಾರು 52 ಲಕ್ಷ ರು.ನಿಂದ 67 ಲಕ್ಷ ರು.ವರೆಗಿದೆ. ಆದರೆ ಇಷ್ಟು ದುಬಾರಿ ದುಡ್ಡು ಕೊಡದೆ ಟಾಟಾ ಸಫಾರಿಯನ್ನೇ ಇವೊಕ್ ತರಹ ವಿನ್ಯಾಸ ಮಾಡಿಕೊಳ್ಳಬಹುದು ಅನ್ನೋದು ನಮ್ಮ ಪುಕ್ಕಟೆ ಸಲಹೆ.
ದೆಹಲಿಯ ಬಿಗ್ ಡಾಡಿ ಕಸ್ಟಮ್ಸ್ ಕಂಪನಿಯು ಟಾಟಾ ಸಫಾರಿಯನ್ನು ಇವೊಕ್ ತರಹ ಮರುವಿನ್ಯಾಸ ಮಾಡಿಕೊಡುತ್ತದೆ. ಇದಕ್ಕೆ ತಗಲುವ ಆರಂಭಿಕ ವೆಚ್ಚ ಸುಮಾರು 2.5 ಲಕ್ಷ ರುಪಾಯಿ. ಈ ಕುರಿತು ಬಿಗ್ ಡಾಡಿ ಕಸ್ಟಮ್ಸ್ ಫೇಸ್ ಬುಕ್ ನಲ್ಲಿ ಪ್ರಕಟಣೆ ನೀಡಿದೆ. ಆದರೆ ಸಫಾರಿ ಕಾರನ್ನು ಈ ರೀತಿ ಪರಿಷ್ಕರಿಸಲು ಸುಮಾರು 3-4 ತಿಂಗಳು ಬೇಕಾಗುತ್ತದಂತೆ!
ನಿಮಗೆ ಮಾಡಿಫೈ ಮಾಡಿರುವ ಟಾಟಾ ಸಫಾರಿ ಯಾನೆ ಮೂನ್ ರೋವರ್ ಇಷ್ಟವಾದರೆ ಈ ರೀತಿ ಮರುವಿನ್ಯಾಸ ಮಾಡಿಕೊಳ್ಳಬಹುದು. ಇದಕ್ಕಾಗಿ ಟಾಟಾ ಸಫಾರಿ ಹೊಸತು ಅಥವಾ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿ ಬಿಗ್ ಡಾಡಿ ಕಸ್ಟಮ್ಸ್ ಗೆ ನೀಡಬಹುದು.
ನೂತನ ಟಾಟಾ ಸಫಾರಿ ದರ ಸುಮಾರು 9 ಲಕ್ಷ ರು.ನಿಂದ 15 ಲಕ್ಷ ರು.ವರೆಗಿದೆ. ಎರಡು ಮೂರು ಲಕ್ಷ ನೀಡಿ ಮಾಡಿಫೈ ಮಾಡಿಕೊಂಡರೆ ಇದು ನೋಡಲು ಇವೊಕ್ ಕಾರಿನಂತೆ ಕಾಣುತ್ತದೆ. ಹೆಂಗಿದೆ ಐಡಿಯಾ! ಇದೆಲ್ಲ ಬೇಡ ಅನ್ನುವಿರಾದರೆ ಹೊಸ 50-60 ಲಕ್ಷ ರು. ನೀಡಿ ಹೊಸ ಇವೊಕ್ ಖರೀದಿಸಿ. ನಮ್ದೇನೂ ಅಭ್ಯಂತರವಿಲ್ಲ!


Click it and Unblock the Notifications









