ಜೇಮ್ಸ್ ಬಾಂಡ್ ಸ್ಕೈಫಾಲ್ ಚಿತ್ರದಲ್ಲಿ ಜಾಗ್ವಾರ್
ಶೀಘ್ರದಲ್ಲಿ ತೆರೆಗೆ ಬರಲಿರುವ ಜೇಮ್ಸ್ ಬಾಂಡ್ ನೂತನ ಚಲನಚಿತ್ರ "ಸ್ಕೈಫಾಲ್"ನಲ್ಲಿ ಬಳಸಲಾಗಿದ್ದ ಲ್ಯಾಂಡ್ ರೋರ್ ಡಿಫೆಂಡರ್ ವಾಹನವನ್ನು ಈ ತಿಂಗಳು ನಡೆಯಲಿರುವ ಪ್ಯಾರೀಸ್ ಮೋಟರ್ ಪ್ರದರ್ಶನದಲ್ಲಿ ಪ್ರದರ್ಶಿಸಲು ಜಾಗ್ವಾರ್ ನಿರ್ಧರಿಸಿದೆ.
ಹೊಸ ಜೇಮ್ಸ್ ಬಾಂಡ್ ಚಿತ್ರದಲ್ಲಿ ಕಸ್ಟಮೈಸ್ಡ್ ಡಬಲ್ ಕ್ಯಾಬ್ ಪಿಕ್ ಉಪ್ ಡಿಫೆಂಡರನ್ನು ಬಳಸಲಾಗಿತ್ತು. ಇದನ್ನು ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸುವ ಮೂಲಕ ಬ್ರಾಂಡ್ ಪ್ರಚಾರ ಮಾಡಲು ಜಾಗ್ವಾರ್ ಆಂಡ್ ಲ್ಯಾಂಡ್ ರೋವರ್ ನಿರ್ಧರಿಸಿದೆ.
ಜೇಮ್ಸ್ ಬಾಂಡ್ ಹೊಸ ಚಿತ್ರ ಸ್ಕೈಫಾಲ್ ನವೆಂಬರ್ 2ರಂದು ತೆರೆಕಾಣಲಿದೆ. ಜೇಮ್ಸ್ ಬಾಂಡ್ ಸ್ಕೈಫಾಲ್ ಚಿತ್ರಕ್ಕಾಗಿ ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿಯು ಒಟ್ಟು 77 ವಾಹನಗಳನ್ನು ನೀಡಿತ್ತು. ಲ್ಯಾಂಡ್ ರೋವರ್ ಡಿಫೆಂಡರ್, ರೇಂಜ್ ರೋವರ್ ಮತ್ತು ಜಾಗ್ವಾರ್ ಎಕ್ಸ್ ಜೆ ವಾಹನಗಳನ್ನು ಚಿತ್ರಗಳಲ್ಲಿ ಬಳಸಲಾಗಿತ್ತು. ಕೆಲವು ವಾಹನಗಳನ್ನು ಸಿನಿಮಾ ನಿರ್ಮಾಣ ಬೆಂಬಲ ವಾಹನಗಳಾಗಿ ಬಳಸಲಾಗಿತ್ತು.


Click it and Unblock the Notifications









