ಬಾಂಡ್ ಚಿತ್ರಕ್ಕಾಗಿ 240 ಕೋಟಿಯ ಕಾರು ಪುಡಿಪುಡಿ

By Nagaraja

ಹಾಲಿವುಡ್ ಚಿತ್ರವೊಂದನ್ನು ತೆಗೆಯುವಾಗಿ ಅವರ ಪ್ರತಿಯೊಂದು ದೃಶ್ಯದ ಪರಿಪೂರ್ಣತೆಗಾಗಿ ಅತೀವ ಶ್ರಮ ವಹಿಸುತ್ತಾರೆ. ಇದಕ್ಕಾಗಿ ನಿರ್ಮಾಪಕರು ಕೋಟಿ ಗಟ್ಟಲೆ ರುಪಾಯಿಗಳನ್ನು ಸುರಿಯಲು ಹಿಂಜರಿಯುವುದಿಲ್ಲ. ಹಾಗಿರಬೇಕೆಂದರೆ ಅಂದೊಂದು ಜನಪ್ರಿಯ ಸರಣಿ ಕಥಾ ಪಾತ್ರದ ಮುಂದುವರಿದ ಕಥಾ ಸರಣಿ ಎಂದು ಅರಿತುಕೊಂಡಾಗ ನಿರ್ದೇಶಕರ ಮಾತಿಗೆ ಹಿಂದು ಮುಂದು ನೋಡದೇ ಎಷ್ಟೇ ವೆಚ್ಚವನ್ನು ಬೇಕಾದರೂ ನಿರ್ಮಾಪಕರು ವ್ಯಯಿಸುತ್ತಾರೆ.

Also Read : ನೀವು ಜೇಮ್ಸ್ ಬಾಂಡ್ ಅಭಿಮಾನಿಯೇ ?

ಇದಕ್ಕೊಂದು ತಾಜಾ ಉದಾಹರಣೆ ಪತ್ತೆದಾರಿ ಜೇಮ್ಸ್ ಬಾಂಡ್ ಕಥಾ ಸರಣಿಯ ಮುಂಬರುವ ಚಿತ್ರ ಸ್ಪೆಕ್ಟರ್. ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ಮುಂಬರುವ ಅಕ್ಟೋಬರ್ 26ರಂದು ಬಿಡುಗಡೆಯಾಗಲಿರುವ ಜೇಮ್ಸ್ ಬಾಂಡ್ ಸ್ಪೆಕ್ಟರ್ ಚಿತ್ರಕ್ಕಾಗಿ ಬರೋಬ್ಬರಿ 240 ಕೋಟಿ ರು.ಗಳ ಕಾರುಗಳನ್ನು ಪುಡಿ ಪುಡಿ ಮಾಡಲಾಗಿದೆ.

ಬಾಂಡ್ ಚಿತ್ರಕ್ಕಾಗಿ 240 ಕೋಟಿಯ ಕಾರು ಪುಡಿಪುಡಿ

ಇಯಾನ್ ಪ್ರೊಡಕ್ಷನ್ಸ್ ಬಂಡವಾಳ ಹೂಡುವ ಸ್ಪೆಕ್ಟರ್ ಚಿತ್ರದಲ್ಲಿ ಡ್ಯಾನಿಯಲ್ ಕ್ರೇಗ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದವರ ನಾಲ್ಕನೇ ಜೇಮ್ಸ್ ಬಾಂಡ್ ಕಥಾ ಪಾತ್ರವಾಗಿದೆ. ಚಿತ್ರದ ನಿರ್ದೇಶನದ ಹೊಣೆಯನ್ನು ಸ್ಯಾಮ್ ಮೆಂಡೆಸ್ ಹೊತ್ತುಕೊಂಡಿದ್ದಾರೆ.

ಬಾಂಡ್ ಚಿತ್ರಕ್ಕಾಗಿ 240 ಕೋಟಿಯ ಕಾರು ಪುಡಿಪುಡಿ

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಜೇಮ್ಸ್ ಬಾಂಡ್ ಚಿತ್ರಗಳಿಗೂ ಆಸ್ಟನ್ ಮಾರ್ಟಿನ್ ಕಾರುಗಳಿಗೂ ಎಲ್ಲಿಲ್ಲದ ನಂಟಿದೆ. ಸಂಶಯವಿದೆಯೇ ಇದನ್ನು ಓದಿ [ಏ ದೋಸ್ತಿ ಹಮ್ ನಹೀ ಚೋಡೆಂಗೆ]. ಪ್ರಸ್ತುತ ಚಿತ್ರದಲ್ಲೂ 240 ಕೋಟಿ ರು. ಬೆಲೆ ಬಾಳುವ ಆಸ್ಟನ್ ಮಾರ್ಟಿನ್ ಡಿಬಿ10 ಕ್ರೀಡಾ ಕಾರುಗಳನ್ನು ಧ್ವಂಸ ಮಾಡಲಾಗಿದೆ.

ಬಾಂಡ್ ಚಿತ್ರಕ್ಕಾಗಿ 240 ಕೋಟಿಯ ಕಾರು ಪುಡಿಪುಡಿ

ಇಟಲಿಯಲ್ಲಿ ನಡೆದ ಸಣ್ಣದಾದ ಬೆನ್ನೆತ್ತುವ ಸೀನ್‌ಗಾಗಿ ಇಷ್ಟು ಮೊತ್ತದ ಕಾರುಗಳನ್ನು ಪುಡಿ ಮಾಡಲಾಗಿದೆ. ಪ್ರಸ್ತುತ ಚೇಸಿಂಗ್ ಸೀನ್‌ಗಾಗಿ 10ರಷ್ಟು ವಿಶೇಷ ವಿನ್ಯಾಸಿತ ಆಸ್ಟನ್ ಮಾರ್ಟಿನ್ ಡಿಬಿ10 ಕಾರುಗಳನ್ನು ಬಳಕೆ ಮಾಡಲಾಗಿದೆ.

ಬಾಂಡ್ ಚಿತ್ರಕ್ಕಾಗಿ 240 ಕೋಟಿಯ ಕಾರು ಪುಡಿಪುಡಿ

ಚಿತ್ರದ ಟ್ರೇಲರ್‌ಗೆ ಈಗಾಗಲೇ ಹಿಟ್ ಆಗಿದ್ದು, ನವೆಂಬರ್ 06ರಂದು ಜಾಗತಕವಾಗಿ ತೆರೆ ಕಾಣಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರತಂಡವು ವ್ಯಾಟಿಕನ್ ನಗರದಲ್ಲಿ ನಾಲ್ಕು ಸೆಕೆಂಡುಗಳ ಶೂಟಿಂಗ್ ಗಾಗಿ ಸಂಪೂರ್ಣ ರಾತ್ರಿಯನ್ನೇ ವ್ಯಯಿಸಲಾಗಿದೆ ಎಂದಿದೆ.

ಬಾಂಡ್ ಚಿತ್ರಕ್ಕಾಗಿ 240 ಕೋಟಿಯ ಕಾರು ಪುಡಿಪುಡಿ

ಒಟ್ಟಿನಲ್ಲಿ ಪತ್ತೇದಾರಿ ವಿರೋಚಿತ, ಅದ್ಭುತ, ಸಾಹಸಿಗ, ಸಸ್ಪೆನ್ಸ್ ಹಾಗೂ ಆಕ್ಷನ್ ಚಿತ್ರಗಳಿಗೆ ಹೆಸರು ಮಾಡಿರುವ ಜೇಮ್ಸ್ ಬಾಂಡ್ ಮುಂಬರುವ ಸರಣಿ ಚಿತ್ರವು ಯಶಸ್ಸು ಕಾಣಲಿ ಎಂಬುದು ನಮ್ಮ ಆಶಯವಾಗಿದೆ.

ಜೇಮ್ಸ್ ಬಾಂಡ್ ಮುಂದಿನ ಚಿತ್ರ ಸ್ಪೆಕ್ಟರ್ ರೋಚಕ ಟ್ರೇಲರ್ ವೀಕ್ಷಿಸಿ


More from DriveSpark

Article Published On: Thursday, October 1, 2015, 15:33 [IST]
English summary
According to reports, 240 Crore Worth Aston Martin Cars destroyed for upcoming Spectre movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+