ಜೇಮ್ಸ್ ಬಾಂಡ್ ಕಾರು 24 ಕೋಟಿ ರುಪಾಯಿಗಳಿಗೆ ಹರಾಜು
ಪತ್ತೇದಾರಿ ಜೇಮ್ಸ್ ಬಾಂಡ್ 'ಸ್ಪೆಕ್ಟರ್' ಚಿತ್ರದಲ್ಲಿ ಬಳಕೆ ಮಾಡಲಾಗಿರುವ 007 ಆಸ್ಟನ್ ಮಾರ್ಟಿನ್ ಡಿಬಿ10 ಕಾರು ಬರೋಬ್ಬರಿ 24 ಕೋಟಿ ರುಪಾಯಿಗಳಿಗೆ ಹರಾಜುಗೊಂಡಿದೆ.
ಕಳೆದ ಅರ್ಧ ಶತಮಾನದಿಂದಲೂ ಜೇಮ್ಸ್ ಬಾಂಡ್ ಇಡೀ ಹಾಲಿವುಡ್ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಈಗ ಜೇಮ್ಸ್ ಬಾಂಡ್ ಕಥಾ ಸರಣಿಯ ಕೊನೆಯದಾಗಿ ಬಿಡುಗಡೆಯಾಗಿರುವ ಸ್ಪೆಕ್ಟರ್ ನಲ್ಲೂ ಮೋಡಿ ಮೆರೆದಿದೆ.

ಜೇಮ್ಸ್ ಬಾಂಡ್ ಪತ್ತೇದಾರಿ ಸಿನೆಮಾದಲ್ಲಿ ಆಸ್ಟನ್ ಮಾರ್ಟಿನ್ ಬಹಳ ವರ್ಷಗಳ ಹಿಂದಿನಿಂದಲೇ ನಂಟನ್ನು ಹೊಂದಿದೆ. ಅಲ್ಲದೆ ಚಿತ್ರಕ್ಕಾಗಿ ಕೇವಲ 10ರಷ್ಟು ಕಾರುಗಳನ್ನು ನಿರ್ಮಿಸಲಾಗಿತ್ತು.

ಈ ಪೈಕಿ ಮೊದಲ ಕಾರು 24 ಕೋಟಿ ರುಪಾಯಿಗಳಿಗೆ ಹರಾಜುಗೊಂಡಿದೆ. ಇವೆಲ್ಲವೂ ಡ್ಯಾನೆಯಲ್ ಕ್ರೇಗ್ ನಟನಾ ಕೌಶಲ್ಯವನ್ನು ಇಮ್ಮಡಿಗೊಳಿಸಿದೆ.

ಸಹಾಯಾರ್ಥ ನಿಧಿ ಸಂಗ್ರಹಕ್ಕಾಗಿ ಜೇಮ್ಸ್ ಬಾಂಡ್ ಸ್ಪೆಕ್ಟರ್ ಚಿತ್ರದ ಆಸ್ಟನ್ ಮಾರ್ಟಿನ್ ಡಿಬಿ10 ಕಾರನ್ನು ಹರಾಜಿಗಿರಿಸಲಾಗಿತ್ತು.

ವರದಿಗಳ ಪ್ರಕಾರ 007 ಆಸ್ಟನ್ ಮಾರ್ಟಿನ್ ಡಿಬಿ10ಕಾರನ್ನು ಹರಾಜಿಹಗಿಡಲಾದ ಐದು ನಿಮಿಷದಲ್ಲೇ ಮಾರಾಟಗೊಂಡಿತ್ತು.

ನಿಮ್ಮ ಮಾಹಿತಿಗಾಗಿ ಜೇಮ್ಸ್ ಬಾಂಡ್ ಕಥಾ ಸರಣಿಯ 24ನೇ ಭಾಗವಾಗಿರುವ ಸ್ಪೆಕ್ಟರ್ ವಿಶ್ವದ್ಯಾಂತ ಬಾಕ್ಸ್ ಆಫೀಸ್ ಹಿಟ್ ಕಂಡಿತ್ತಲ್ಲದೆ ಒಟ್ಟು 879 ಮಿಲಿಯನ್ ಅಮೆರಿಕನ್ ಡಾಲರ್ ಗಿಂತಲೂ ಹೆಚ್ಚು ಮೊತ್ತವನ್ನು ಕಲೆ ಹಾಕಿತ್ತು.


Click it and Unblock the Notifications








