ಅಮೆರಿಕ ಟಿವಿ ಟಾಕ್‌ಶೋ ನಿರೂಪಕನ ಸಂಗ್ರಹಕ್ಕೆ ನ್ಯಾನೊ

ಟೆಲಿವಿಷನ್ ಟಾಕ್ ಶೋ ಮೂಲಕ ಜನಪ್ರಿಯವಾಗಿರುವ ಅಮೆರಿಕದ ಜೆ ಲೆನೊ ತನ್ನ ಬೃಹತ್ ಕಾರು ಸಂಗ್ರಹಕ್ಕೆ ದೇಶದ ಅಗ್ಗದ ಟಾಟಾ ನ್ಯಾನೊ ಸೇರ್ಪಡೆಗೊಳಿಸಿದ್ದಾರೆ. ಜೆ ಲೆನೊ ಸಂಗ್ರಹದಲ್ಲಿ ಅಪರೂಪದ ಅಸಂಖ್ಯಾತ ವಿಂಟೇಜ್ ಕಾರುಗಳು, ವಿಶೇಷ ಕಾರುಗಳು, ಸೂಪರ್ ಕಾರುಗಳು ಮತ್ತು ಬೈಕುಗಳಿವೆ.

ಇತ್ತೀಚೆಗೆ ನಡೆದ ಸುಂದರ ಕಾರ್ಯಕ್ರಮದಲ್ಲಿ ಭಾರತೀಯ ಸಾಂಪ್ರದಾಯಿಕ ಮೆರಗಿನೊಂದಿಗೆ ನ್ಯಾನೊ ಕಾರನ್ನು ತನ್ನ ಗ್ಯಾರೇಜಿಗೆ ಕೊಂಡೊಯ್ದಿದ್ದಾರೆ. ಶ್ವೇತವರ್ಣದ ಶೇರ್ವಾಣಿ ಧರಿಸಿದ ಲೆನೊ, ಭಾರತದ ತ್ರಿವರ್ಣ ಧ್ವಜಕ್ಕೆ ನಮಸ್ಕಾರ್ ಎಂದು ವಂದಿಸಿ ನ್ಯಾನೊ ಕಾರಿನ ಮುಂದೆ ಪೋಸ್ ನೀಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಬಾಲಿವುಡ್ ಡ್ಯಾನ್ಸರ್‌ಗಳು ಭಾರತೀಯ ನೃತ್ಯಗಳನ್ನು ಪ್ರದರ್ಶಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಜಗತ್ತಿನ ಅಗ್ಗದ ಕಾರಿನ ಕುರಿತು ಜೆ ಲೆನೊ ನಾಲ್ಕು ಮೆಚ್ಚುಗೆಯ ಮಾತುಗಳನ್ನೂ ಆಡಿದ್ದಾರೆ.

ಜೆ ಲೆನೊ ಅಪ್ಪಟ ವಾಹನ ಪ್ರೇಮಿ. ಇವರ ಸಂಗ್ರಹದಲ್ಲಿ ಜಗತ್ತಿನ ಅಪರೂಪದ, ಹಳೆಯ, ಹೊಸ ಕಾರು ಮತ್ತು ಬೈಕುಗಳಿವೆ. ಈಗಾಗಲೇ ಇವರ ಗ್ಯಾರೇಜಿನಲ್ಲಿ ಸುಮಾರು 200 ಕಾರುಗಳು ಮತ್ತು 90 ದ್ವಿಚಕ್ರವಾಹನಗಳಿವೆ. ಪ್ರತಿವಾರ ಜೆ ಲೆನೊ ವಾಹನ ಪ್ರದರ್ಶಿಸುವ ಮೂಲಕ ಕಾರ್ಯಕ್ರಮ ನೀಡುತ್ತಾರೆ.

ಈ ಕಾರ್ಯಕ್ರಮದಲ್ಲಿ ಟಾಟಾ ಮೋಟರ್ಸ್ ಕಂಪನಿಯ ಹೆಮ್ಮೆಯ ನ್ಯಾನೊ ವೀಕ್ಷಕರ ಪ್ರಶಂಶೆಗೆ ಪಾತ್ರವಾಯಿತು.

More from DriveSpark

Article Published On: Wednesday, May 16, 2012, 12:06 [IST]
English summary
Famous American television actor and a stand-up comedian Jay Leno added the world’s cheapest Tata Nano car in his Garage. Jay Leno owned huge collection of vintage cars, super cars, bikes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+