ಚಿತ್ರ ಸುದ್ದಿ: ಜಯನಗರ ಸೈಕಲ್ ಪಥ ಉದ್ಘಾಟನೆ

By Super

ಬೆಂಗಳೂರು, ಸೆ 22: ಪರಿಸರ ಸ್ನೇಹಿ ವಾಹನ ಸವಾರಿಗೆ ಉತ್ತೇಜನ ನೀಡುವ "ಜಯನಗರ ಸೈಕಲ್ ಪಥ"ವನ್ನು ರಾಜ್ಯದ ಉಪಮುಖ್ಯಮಂತ್ರಿ ಆರ್. ಅಶೋಕ್ ಉದ್ಘಾಟಿಸಿದ್ದಾರೆ. ಜಯನಗರ ಶಾಸಕ ಬಿ.ಎನ್. ವಿಜಯಕುಮಾರ್, ಗೋ ಗ್ರೀನ್ ತಂಡ, ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ನೂರಾರು ಜನರು ಈ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸೈಕಲ್ ಪಥ ಕಾರ್ಯಕ್ರಮದ ಉದ್ಘಾಟನೆ, ಗಣ್ಯರ ಮಾತುಕತೆ, ವಿವಿಧ ಸ್ಪರ್ಧೆಗಳಲ್ಲಿ ಗೆದ್ದ ಮಕ್ಕಳಿಗೆ ಸೈಕಲ್ ಬಹುಮಾನ ಇತ್ಯಾದಿ ಸಭಾ ಕಾರ್ಯಕ್ರಮ ಮುಗಿದ ನಂತರ ಎಲ್ಲರೂ ಬೈಸಿಕಲ್ ಮೇಲೆ ಸವಾರಿ ಹೊರಟರು. ಆಗ ನಮ್ಮ ಕ್ಯಾಮರಾ ಕಣ್ಣಿಗೆ ಕಂಡ ವಿವಿಧ ವಿವಿಧ ದೃಷ್ಯಗಳು ಇವು.

ಸಭೆ ಮುಗಿದು ಸೈಕಲ್ ಏರೋದು ಯಾವಾಗ?

ಸಭೆ ಮುಗಿದು ಸೈಕಲ್ ಏರೋದು ಯಾವಾಗ?

ಸೈಕಲ್ ಪಥ ಉದ್ಘಾಟನೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

ಪರಿಸರ ಸ್ನೇಹಿ ಸೈಕಲ್ ಸವಾರಿ

ಪರಿಸರ ಸ್ನೇಹಿ ಸೈಕಲ್ ಸವಾರಿ

ಪರಿಸರ ಸ್ನೇಹಿ ಸೈಕಲ್ ಪಥ ಕಾರ್ಯಕ್ರಮದ ದೃಷ್ಯವಿದು. ಚಿತ್ರದಲ್ಲಿ ಜಯನಗರ ಶಾಸಕ ಬಿ.ಎನ್. ವಿಜಯಕುಮಾರ್ ಮತ್ತು ರಾಜ್ಯದ ಉಪಮುಖ್ಯ ಮಂತ್ರಿ, ಗೃಹ ಸಚಿವ ಆರ್ ಅಶೋಕ್ ಇದ್ದಾರೆ.

ಬೈಸಿಕಲ್ ಬಹುಮಾನ ಪಡೆದ ವಿದ್ಯಾರ್ಥಿ

ಬೈಸಿಕಲ್ ಬಹುಮಾನ ಪಡೆದ ವಿದ್ಯಾರ್ಥಿ

ಸೈಕಲ್ ಪಥಕ್ಕೆ ಸಂಬಂಧಿಸಿದಂತೆ ಸ್ಥಳೀಯ ವಿದ್ಯಾಸಂಸ್ಥೆಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಅದರಲ್ಲಿ ಪ್ರಥಮ,ದ್ವಿತಿಯಾ ಹಾಗೂ ತೃತೀಯಾ ಸ್ಥಾನ ಪಡೆದವರಿಗೆ ಬೈಸಿಕಲ್ ಬಹುಮಾನ ವಿತರಿಸಲಾಯಿತು.

ಸೈಕಲ್ ಬಹುಮಾನ ಪಡೆದ ವಿದ್ಯಾರ್ಥಿನಿ

ಸೈಕಲ್ ಬಹುಮಾನ ಪಡೆದ ವಿದ್ಯಾರ್ಥಿನಿ

ಸ್ಪರ್ಧೆಯಲ್ಲಿ ಸೈಕಲ್ ಬಹುಮಾನ ಪಡೆದ ವಿದ್ಯಾರ್ಥಿನಿ

ಅಬ್ಬಾ ನನ್ನ ಬಹುದಿನದ ಕನಸು ನನಸಾಯ್ತಲ್ಲ, ಧನ್ಯ

ಅಬ್ಬಾ ನನ್ನ ಬಹುದಿನದ ಕನಸು ನನಸಾಯ್ತಲ್ಲ, ಧನ್ಯ

ಜಯನಗರದ ಶಾಸಕ ಬಿ.ಎನ್. ವಿಜಯಕುಮಾರ್ ಬಹುದಿನಗಳ ಕನಸು ನನಸಾದ ಕ್ಷಣವಿದು.

ಪರಿಸರ ಸ್ನೇಹಿ ಸೈಕಲ್ ಸವಾರಿಗೆ ಜೈ

ಪರಿಸರ ಸ್ನೇಹಿ ಸೈಕಲ್ ಸವಾರಿಗೆ ಜೈ

ಪರಿಸರಕ್ಕೆ ಹಾನಿ ಮಾಡುವ ಇಂಧನಗಳ ಸಾರಿಗೆಗೆ ಗುಡ್ ಬೈ ಹೇಳೋಣ. ಪರಿಸರ ಸ್ನೇಹಿ ಸೈಕಲ್ ಸವಾರಿಗೆ ಉತ್ತೇಜನ ಹೇಳೋಣ.

ನಮ್ಗೂ ಒಂದೊಂದು ಸೈಕಲ್ ಕೊಡಿಸ್ರಿ

ನಮ್ಗೂ ಒಂದೊಂದು ಸೈಕಲ್ ಕೊಡಿಸ್ರಿ

ಸೈಕಲ್ ಮೇಲೆ ಟ್ರಾಫಿಕ್ ಪೊಲೀಸ್

ನಿನ್ನ ಜಡೆ ಚೆನ್ನಾಗಿದೆ ಕಣೇ..!

ನಿನ್ನ ಜಡೆ ಚೆನ್ನಾಗಿದೆ ಕಣೇ..!

ಸೈಕಲ್ ಸವಾರಿಯಲ್ಲಿ ಕಂಡ ವಿದ್ಯಾರ್ಥಿನಿಯರು.

ಸುಸ್ತಾದ್ರೆ ಇದ್ರಲ್ಲಿ ಹಿಂಗೆ ರೆಸ್ಟ್ ತಗೋಬಹುದು!

ಸುಸ್ತಾದ್ರೆ ಇದ್ರಲ್ಲಿ ಹಿಂಗೆ ರೆಸ್ಟ್ ತಗೋಬಹುದು!

ರಸ್ತೆ ತುಂಬಾ ಸೈಕಲುಗಳು. ಈ ಸಮಯದಲ್ಲಿ ಇವರು ಸೈಕಲ್ ಮೇಲೆ ಹೀಗೆ ಕುಳಿತು ಪೋಸ್ ನೀಡಿದರು.

ಸೈಕಲ್ ಸವಾರಿಯಿಂದ ಆರೋಗ್ಯ

ಸೈಕಲ್ ಸವಾರಿಯಿಂದ ಆರೋಗ್ಯ

ಸೈಕಲ್ ಸವಾರಿ ಮಾಡಿದ್ರೆ ಆರೋಗ್ಯಕ್ಕೂ ಹಲವು ಉಪಯೋಗಗಳಿವೆ. ಜಿಮ್ ಗೆ ಹೋಗೋ ಅವಶ್ಯಕತೆಯೂ ಇಲ್ಲ.

ಸೈಕಲ್ ಸವಾರಿಯಲ್ಲಿ ಉತ್ಸಾಹದ ಚಿಲುಮೆಗಳು

ಸೈಕಲ್ ಸವಾರಿಯಲ್ಲಿ ಉತ್ಸಾಹದ ಚಿಲುಮೆಗಳು

ಸೈಕಲ್ ಸವಾರಿಯಲ್ಲಿ ಕಂಡ ವಿದ್ಯಾರ್ಥಿಗಳು

 ರಸ್ತೆಯಲ್ಲಿ ಸೈಕಲುಗಳಿಂದ ಟ್ರಾಫಿಕ್ ಜಾಮ್

ರಸ್ತೆಯಲ್ಲಿ ಸೈಕಲುಗಳಿಂದ ಟ್ರಾಫಿಕ್ ಜಾಮ್

ರಸ್ತೆ ತುಂಬಾ ಸೈಕಲುಗಳೇ ಕಾಣುತ್ತಿದ್ದವು.

ಎಲ್ಲರೂ ಸೈಕಲ್ ಬಳಸಿ, ಪರಿಸರ ಉಳಿಸಿ

ಎಲ್ಲರೂ ಸೈಕಲ್ ಬಳಸಿ, ಪರಿಸರ ಉಳಿಸಿ

ಸೈಕಲ್ ಪಥ ಉದ್ಘಾಟಿಸಿದ ನಂತರ ಮಾಧ್ಯಮದವರ ಮುಂದೆ ಆರ್ ಅಶೋಕ್

ಪರಿಸರ ಸ್ನೇಹಿ ಸೈಕಲ್ ಸವಾರಿಗೆ ಜೈ

ಪರಿಸರ ಸ್ನೇಹಿ ಸೈಕಲ್ ಸವಾರಿಗೆ ಜೈ

ಪರಿಸರಕ್ಕೆ ಹಾನಿ ಮಾಡುವ ಇಂಧನಗಳ ಸಾರಿಗೆಗೆ ಗುಡ್ ಬೈ ಹೇಳೋಣ. ಪರಿಸರ ಸ್ನೇಹಿ ಸೈಕಲ್ ಸವಾರಿಗೆ ಉತ್ತೇಜನ ಹೇಳೋಣ.

ನಾನಂತೂ ಇನ್ನು ಸೈಕಲಲ್ಲೇ ಸ್ಕೂಲಿಗೆ ಹೋಗೋದು!

ನಾನಂತೂ ಇನ್ನು ಸೈಕಲಲ್ಲೇ ಸ್ಕೂಲಿಗೆ ಹೋಗೋದು!

ಜಯನಗರದ ಬಡಾವಣೆಯಲ್ಲಿ ಹಲವು ವಿದ್ಯಾಸಂಸ್ಥೆಗಳಿದ್ದು, ದಿನನಿತ್ಯ ಲಕ್ಷ ಲಕ್ಷ ವಿದ್ಯಾರ್ಥಿಗಳು ಓಡಾಡುತ್ತಿದ್ದಾರೆ. ಇವರೆಲ್ಲ ಈ ಸೈಕಲ್ ಸ್ನೇಹಿ ರಸ್ತೆಯ ಸದುಪಯೋಗ ಪಡೆದುಕೊಳ್ಳಬೇಕು. ಈ ಮೂಲಕ ಪರಿಸರ ರಕ್ಷಣೆ ಕೈಂಕರ್ಯದಲ್ಲಿ ಪಾಲ್ಗೊಳ್ಳಬೇಕು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಕಾರದೊಂದಿಗೆ ಸೈಕಲ್ ಪಥಗಳನ್ನು ರೂಪಿಸಲಾಗಿದ್ದು, ಬೆಂಗಳೂರು ಮೇಯರ್ ಡಿ. ವೆಂಕಟೇಶ ಮೂರ್ತಿ ಮತ್ತು ಬಿಬಿಎಂಪಿ ಕಮಿಷನರ್ ರಜನೀಶ್ ಗೋಯೆಲ್ ಈ ಸಮಾರಂಭದಲ್ಲಿ ಭಾಗವಹಿದ್ದರು.

More from DriveSpark

Article Published On: Saturday, September 22, 2012, 15:51 [IST]
English summary
Jayanagar bicycle friendly street inaugurated in Bangalore on September 22, 2012. Home minister R. Ashok, Jayanagar MLA B.N. Vijay Kumar, BBMP mayor and commissioner participated. Ride bicycle save environment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+