ಹೊಸ ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಸೂಪರ್‌ ಬೈಸಿಕಲ್‌ ರಿವ್ಯೂ

ಜಗತ್ತಿನಾದ್ಯಂತ ನೂರಾರು ಬೈಸಿಕಲ್ ತಯಾರಕ ಕಂಪನಿಗಳಿದ್ದರೆ ಅವುಗಳಲ್ಲಿ ಕೆಲವು ಮಾತ್ರ ತಮ್ಮ ಬ್ರ್ಯಾಂಡ್ ಅನ್ನು ಉಳಿಸಿಕೊಂಡು ಹೆಸರು ಮಾಡಿವೆ. ಅಂತಹ ಬೈಸಿಕಲ್ ಕಂಪನಿಗಳಲ್ಲಿ ಫೈರ್‌ಫಾಕ್ಸ್ ಕೂಡ ಒಂದು. ಈ ಬ್ರ್ಯಾಂಡ್ ಗುಣಮಟ್ಟದ ಪ್ರಮಾಣಿತ ಪ್ರೀಮಿಯಂ ಬೈಸಿಕಲ್‌ಗಳನ್ನು ಗ್ರಾಹಕರಿಗೆ ನೀಡುವ ಮೂಲಕ ಬೈಸಿಕಲ್ ತಯಾರಕರ ವಲಯದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಹೊಸ ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಸೂಪರ್‌ ಬೈಸಿಕಲ್‌ ರಿವ್ಯೂ

ಅನ್‌ಬಾಕ್ಸಿಂಗ್ ಮತ್ತು ಅಸೆಂಬ್ಲಿ

ಸಾಮಾನ್ಯವಾಗಿ ಮೇಯಿಲ್ ಮೂಲಕ ಆರ್ಡರ್‌ ಮಾಡಿದ ಪ್ಯಾಕೇಜ್ ಅನ್ನು ಸ್ವೀಕರಿಸುವುದು ಬಹಳ ರೋಮಾಂಚನ ಅನುಭವ ನೀಡುತ್ತದೆ. ಅದರಲ್ಲೂ ಪ್ಯಾಕೇಜ್ ದೊಡ್ಡದಾಗಿದ್ದು ಬಾಕ್ಸ್‌ನ ಎರಡೂ ಬದಿಗಳಲ್ಲಿ 'ಫೈರ್‌ಫಾಕ್ಸ್ ಸೂಪರ್‌ಬೈಕ್' ಎಂಬ ಪದಗಳು ಕಾಣಿಸಿಕೊಂಡರೆ ಉತ್ಸಾಹವು ಮತ್ತಷ್ಟು ಹೆಚ್ಚಾಗುತ್ತದೆ. ಏಕೆಂದರೆ ಈ ಬೈಸಿಕಲ್ ಅಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಮುಖ್ಯವಾಗಿ ಇದನ್ನು ನಿತ್ಯ ಜೀವನದಲ್ಲಿ ಬಳಸಿಕೊಂಡರೆ ಆರೋಗ್ಯ ಮತ್ತು ಫಿಟ್‌ನೆಸ್‌ನ ಉದಾರ ಸೇವೆಯೊಂದಿಗೆ ಸ್ವಲ್ಪ ಮನರಂಜನೆ ಕೂಡ ನಿಮ್ಮದಾಗುತ್ತದೆ.

ಹೊಸ ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಸೂಪರ್‌ ಬೈಸಿಕಲ್‌ ರಿವ್ಯೂ

ಇದರ ಅನ್‌ಬಾಕ್ಸಿಂಗ್ ಪ್ರಕ್ರಿಯೆಯು ಅಷ್ಟೇನು ಕಷ್ಟವಲ್ಲ. ಅಷ್ಟಕ್ಕೂ ಅನ್‌ಬಾಕ್ಸಿಂಗ್ ಕುರಿತು ಹೇಳುವ ಅವಶ್ಯಕತೆಯಾದರೂ ಏನು ಅಂತೀರ.. ಫೈರ್‌ಫಾಕ್ಸ್ ತನ್ನ ಬೆಸ್ಟ್ ಸೆಲ್ಲರ್‌ಗಳಲ್ಲಿ ಒಂದಾದ Firefox Bad Attitude X ಅನ್ನು ನಮಗಾಗಿ ಕಳುಹಿಸಿದೆ. ಮೊದಲು ಬಾಕ್ಸ್‌ನಲ್ಲಿ ಬಂದ ಇದರ ಪಟ್ಟಿಗಳನ್ನು ಕತ್ತರಿಸಿ, ಪೆಟ್ಟಿಗೆಯನ್ನು ಒಟ್ಟಿಗೆ ಹಿಡಿದಿರುವ ಟೇಪ್ ಅನ್ನು ಹರಿದು ಹಾಕಿ, ನಂತರ ಬಾಕ್ಸ್‌ ಅನ್ನು ಮೇಲಕ್ಕೆತ್ತಿದರೆ ಬಿಳಿ ಫೋಮ್‌ ತೆಳುವಾದ ಮತ್ತು ಹೊಳೆಯುವ ತುಣುಕಿನ ಕೆಳಗೆ ಹೊಸ ಫೈರ್‌ಫಾಕ್ಸ್ ಬೈಸಿಕಲ್ ಇತ್ತು.

ಹೊಸ ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಸೂಪರ್‌ ಬೈಸಿಕಲ್‌ ರಿವ್ಯೂ

ಹೆಸರಿನಲ್ಲಿರುವ 'X' ರೋಮನ್ ಅಂಕಿಗಳಲ್ಲಿದ್ದರೇ ಅದರ ಹಿಂದಿನ ಅಕ್ಷರಗಳು Firefox Bad Attitude ಎಂದಿತ್ತು. ಇದನ್ನು ಕನ್ನಡದಲ್ಲಾದರೇ ಕೆಟ್ಟ ವರ್ತನೆ 10 ಎಂದು ಹೇಳಲಾಗುತ್ತದೆ. ಬಾಕ್ಸ್‌ನಿಂದ ಹೊರತೆಗೆದಾಗ ಸೈಕಲ್‌ ಏನೋ ಇತ್ತು, ಆದರೆ ಇದನ್ನು ನೇರವಾಗಿ ಸವಾರಿ ಮಾಡಬಹುದಾದ ಸ್ಥಿತಿಯಲ್ಲಿರಲಿಲ್ಲ. ಕೆಲ ಬಿಡಿ ಭಾಗಗಳನ್ನು ಜೋಡಿಸಬೇಕಿತ್ತು. ಇದರ ಬಗ್ಗೆ ತಕ್ಕ ಮಟ್ಟಿಗೆ ಐಡಿಯಾ ಇದ್ದರೆ ಮನೆಯಲ್ಲೇ ಜೋಡಿಸಿಕೊಳ್ಳಬಹುದು. ಇಲ್ಲದಿದ್ದರೇ ಇನ್ಸ್ಟ್ರಕ್ಷನ್‌ ನೋಡಿ ಮಾಡಿಕೊಳ್ಳಬಹುದು.

ಹೊಸ ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಸೂಪರ್‌ ಬೈಸಿಕಲ್‌ ರಿವ್ಯೂ

ಇನ್ನು ನಮ್ಮ ವಿಷಯಕ್ಕೆ ಬಂದರೆ, ಹ್ಯಾಂಡಲ್‌ಬಾರ್ ಅನ್ನು ನೇರಗೊಳಿಸಿ ನಂತರ ಬಿಗಿಗೊಳಿಸಲಾಯಿತು. ಪೆಡಲ್‌ಗಳನ್ನು ಕ್ರ್ಯಾಂಕ್ ಆರ್ಮ್‌ನಲ್ಲಿ ಅಳವಡಿಸಿ ಸೀಟ್ ಎತ್ತರವನ್ನು ಸರಿಹೊಂದಿಸಲಾಯಿತು. ಈ ಜೋಡಣೆಯ ಕೆಲಸವನ್ನು ಕೇವಲ ಐದು ನಿಮಿಷಗಳಲಲ್ಲಿ ಮಾಡಿ ಮುಗಿಸಿದೆವು. ಇದಾದ ಬಳಿಕ ರಸ್ತೆಗಿಳಿದು ಸವಾರಿ ಮಾಡಲು ಸಿದ್ಧರಾಗಿದ್ದೆವು ಆದರೆ ಅದಕ್ಕೂ ಮುಚೆ ಸಂಪೂರ್ಣವಾಗಿ ಅಸೆಂಬಲ್ ಆದ Firefox Bad Attitude X ಸೈಕಲ್‌ ಅನ್ನು ಕಂಡ ಕೂಡಲೇ ಏನೋ ಸಮಾಧಾನಕರ ಅನುಭವವಾಯಿತು.

ಹೊಸ ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಸೂಪರ್‌ ಬೈಸಿಕಲ್‌ ರಿವ್ಯೂ

ವಿನ್ಯಾಸ ಮತ್ತು ಶೈಲಿ

ಈ ಬೈಸಿಕಲ್ ವಿನ್ಯಾಸದ ಬಗ್ಗೆ ಸಂದೇಹವಿಲ್ಲ, ಇದು ವರ್ಷಗಳಿಂದ ಪ್ರಮಾಣಿತವಾಗಿದೆ. ರೋಡ್‌ ಬೈಕ್ಸ್, ಹೈಬ್ರಿಡ್ ಬೈಕ್ಸ್‌, ಮೌಂಟೆನ್ ಬೈಕ್ಸ್ ನಂತಹ ಹಲವು ವಿಭಾಗಗಳನ್ನು ಈ ಬೈಸಿಕಲ್ ಆವೃತ್ತಿಯಲ್ಲಿ ನೀಡಲಾಗಿದೆ. ಹೆಚ್ಚಿನ ತಯಾರಕರಿಗೆ ಪ್ರಮಾಣಿತ ಫ್ರೇಮ್ ವಿನ್ಯಾಸವಿದೆ. ಕೆಲವು ವಿಶೇಷ ಮತ್ತು ಕಸ್ಟಮ್ ಬೈಸಿಕಲ್‌ಗಳು ಮಾತ್ರ ಈ ವಿಭಿನ್ನ ಚೌಕಟ್ಟನ್ನು ಪಡೆಯುತ್ತವೆ.

ಹೊಸ ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಸೂಪರ್‌ ಬೈಸಿಕಲ್‌ ರಿವ್ಯೂ

ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಅನ್ನು ಮೌಂಟೇನ್ ಬೈಕ್ ಎಂದು ವರ್ಗೀಕರಿಸಿರುವುರಿಂದ ಫ್ರೇಮ್ ವಿನ್ಯಾಸವನ್ನು ಸಾಮಾನ್ಯ ಬೈಸಿಕಲ್‌ನಂತೆ ನೀಡಿಲ್ಲ. ಈ ಬೈಸಿಕಲ್‌ನಲ್ಲಿ ಹಿಂಬದಿಯ ಸಸ್ಪೆನ್ಷನ್ ಇಲ್ಲದಿರುವುದರಿಂದ ಇದು ಹಾರ್ಡ್-ಟೈಲ್ ಫ್ರೇಮ್ ಅನ್ನು ಪಡೆದುಕೊಂಡಿದೆ. ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಹ್ಯಾಂಡ್ಲಿಂಗ್ ಸಸ್ಪೆನ್ಷನ್‌ಗಳನ್ನು ಹೊಂದಿರುವ ಮೂಲಕ ಡೈಮಂಡ್ ಫ್ರೇಮ್ ವಿನ್ಯಾಸ ನೀಡಲಾಗಿದೆ.

ಹೊಸ ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಸೂಪರ್‌ ಬೈಸಿಕಲ್‌ ರಿವ್ಯೂ

ಇದು ಹಾರ್ಡ್‌ಕೋರ್ ಮೌಂಟೇನ್ ಬೈಕ್ ಅಲ್ಲ. ಆದರೆ ಈ ಬೈಸಿಕಲ್‌ನ ವಿನ್ಯಾಸವು ಬಹುತೇಕ ಹೈಬ್ರಿಡ್ ಬೈಸಿಕಲ್ ವರ್ಗಕ್ಕೆ ಹೋಲುತ್ತದೆ. ಇಲ್ಲಿ ಸೇವಿಂಗ್ ಗ್ರೇಸ್ ಬೈಸಿಕಲ್‌ನಲ್ಲಿ ಕಂಡುಬರುವ ನೋಬಿ ಟೈರ್‌ಗಳನ್ನು ಸಹ ಇದರಲ್ಲಿ ಕಾಣಬಹುದು. DSI ನಿಂದ ತಯಾರಿಸಲ್ಪಟ್ಟ ಈ ಬೈಸಿಕಲ್‌ ಟೈರ್‌ಗಳು ಒರಟಾಗಿರುವುದರಿಂದ ಸಡಿಲವಾದ ಭೂಪ್ರದೇಶದಲ್ಲಿ ಸಾಕಷ್ಟು ರೋಡ್‌ ಗ್ರಿಪ್‌ ಅನ್ನು ನೀಡುತ್ತವೆ.

ಹೊಸ ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಸೂಪರ್‌ ಬೈಸಿಕಲ್‌ ರಿವ್ಯೂ

ಸ್ಟೈಲಿಂಗ್‌ಗೆ ಸಂಬಂಧಿಸಿದಂತೆ ಮಾತನಾಡುವುದಾದರೆ, ಬಾಂಕರ್ಸ್ ಪೇಂಟ್ ಜಾಬ್ ಮತ್ತು ಗ್ರಾಫಿಕ್ಸ್ ಸ್ಕೀಮ್‌ನ ಸೌಜನ್ಯವನ್ನು ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಬೈಸಿಕಲ್‌ನಲ್ಲಿ ಕಾಣಬಹುದು. ಸಹಜವಾಗಿ ಇದರ ಕಲರ್‌ನಲ್ಲಿ ಕೆಲ ಮಿಶ್ರಣಗಳಾಗಿದ್ದು, ಬಾಟಲ್ ಗ್ರೀನ್ ಮತ್ತು ಆಲಿವ್ ಗ್ರೀನ್ ನಡುವಿನ ಕೆಲವು ಮಿಶ್ರಣಗಳಿಂದ ಕೂಡಿದೆ. ಈ ಮೂಲಕ ಫೈರ್‌ಫಾಕ್ಸ್ ಈ ಮಿಶ್ರಣಕ್ಕೆ 'ಗ್ರೀನ್' ಎಂದು ಕರೆಯಲು ಆದ್ಯತೆ ನೀಡಿದೆ. ಇನ್ನು ಬ್ಯಾಡ್ ಆಟಿಟ್ಯೂಡ್ ಎಕ್ಸ್‌ನಲ್ಲಿ ಈ ಬಣ್ಣವನ್ನು ಬಿಟ್ಟರೆ ಇನ್ಯಾವುದೇ ಬಣ್ಣಗಳಿಲ್ಲ.

ಹೊಸ ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಸೂಪರ್‌ ಬೈಸಿಕಲ್‌ ರಿವ್ಯೂ

ಆದರೂ ಯಾವುದೇ ಗ್ರಾಹಕ ಕೂಡ ಬಣ್ಣದ ಆಯ್ಕೆ ಕುರಿತು ದೂರು ನೀಡುತ್ತಿಲ್ಲ. ಬೈಸಿಕಲ್‌ನಲ್ಲಿ 'ಗ್ರೀನ್' ಮಾತ್ರವಲ್ಲದೇ ಕೆಲ ಇತರ ಬಣ್ಣಗಳ ಮಿಶ್ರಣವಾಗಿರುವುದರಿಂದ ಎಲ್ಲರ ಫೇವರೆಟ್‌ ಆಗಿ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಬೆರಗುಗೊಳಿಸುತ್ತದೆ. ಹೇರಳವಾದ ಕಪ್ಪು ಮತ್ತು ಸ್ವಲ್ಪ ತಿಳಿ ನೀಲಿ ಛಾಯೆಯೂ ಇದೆ. ಮುಂಭಾಗದ ಫೋರ್ಕ್ ಅನ್ನು ಕಪ್ಪು ಬಣ್ಣದಲ್ಲಿ ಫೈರ್‌ಫಾಕ್ಸ್ ಲೋಗೋದೊಂದಿಗೆ ಹಸಿರು ಬಣ್ಣದಲ್ಲಿ ಪೂರ್ಣಗೊಳಿಸಲಾಗಿದೆ. ಸೀಟ್ ಟ್ಯೂಬ್‌ನಿಂದ, ಒರಟು ಮುಕ್ತಾಯದಂತೆ ಕಾಣುವ ಗ್ಲಾಸ್ ಬ್ಲ್ಯಾಕ್‌ ಕಲರ್‌ನಲ್ಲಿ ಕೊನೆಗೊಳ್ಳುತ್ತದೆ.

ಹೊಸ ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಸೂಪರ್‌ ಬೈಸಿಕಲ್‌ ರಿವ್ಯೂ

ಬೈಸಿಕಲ್ ವಿನ್ಯಾಸಕಾರರು ಯಾವುದೇ ಕಾಳಜಿಯಿಲ್ಲದೆ ಮನಬಂದಂತೆ ಬಣ್ಣಗಳನ್ನು ಎರಚಿದಂತೆ ಬೈಸಿಕಲ್ ಕಾಣುತ್ತದೆ. ಇದಕ್ಕೆ ಮುಖ್ಯ ಕಾರಣ ಬೈಸಿಕಲ್‌ಗೆ ನೀಡಿರುವ ಬ್ಯಾಡ್ ಆಟಿಟ್ಯೂಡ್ ಎಕ್ಸ್‌ ಹೆಸರು. ಫ್ರೇಮ್‌ನ ಡೌನ್ ಟ್ಯೂಬ್‌ನಲ್ಲಿ ಫೈರ್‌ಫಾಕ್ಸ್ ಬ್ಯಾಡ್ಜಿಂಗ್ ಮತ್ತು ಲೋಗೋ ಕಪ್ಪು ಬಣ್ಣದಲ್ಲಿದೆ. ಈ ಬಣ್ಣಗಳ ಸ್ಪ್ಲಾಶ್ ಬೈಸಿಕಲ್‌ಗೆ ಒಂದು ನಿರ್ದಿಷ್ಟ ರೂಪವನ್ನು ನೀಡುತ್ತದೆಯಾದರೂ ಇದು ಇತರ ಬೈಸಿಕಲ್‌ಗಳಿಗಿಂತ ಭಿನ್ನವಾಗಿ ಕಾಣುತ್ತದೆ. ರಿಮ್ ಮತ್ತು ಸ್ಪೋಕ್‌ಗಳು ಕಪ್ಪು ಬಣ್ಣದಲ್ಲಿ ಮುಗಿದಿದ್ದರೆ, ಗೇರ್‌ಗಳನ್ನು ಕಂಚಿನ ಬಣ್ಣದಲ್ಲಿ ಪೂರ್ಣಗೊಳಿಸಲಾಗಿದೆ.

ಹೊಸ ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಸೂಪರ್‌ ಬೈಸಿಕಲ್‌ ರಿವ್ಯೂ

ಡೌನ್‌ಟ್ಯೂಬ್ ಬಾಟಲ್ ಹೋಲ್ಡರ್ ಮೌಂಟಿಂಗ್ ಪಾಯಿಂಟ್‌ಗಳನ್ನು ಹೊಂದಿದೆ, ಆದರೆ ಬಾಟಲ್ ಹೋಲ್ಡರ್ ಕೇವಲ ಪರಿಕರವಾಗಿ ಲಭ್ಯವಿದ್ದು, ಇದನ್ನು ಪ್ರತ್ಯೇಕವಾಗಿ ಆರ್ಡರ್ ಮಾಡಬೇಕಾಗುತ್ತದೆ. ಬೈಸಿಕಲ್‌ನಲ್ಲಿ ಡಿರೈಲ್ಯೂರ್ ಪ್ರೊಟೆಕ್ಟರ್ ಕೂಡ ಇಲ್ಲ. ಇದು ಆಫ್-ರೋಡ್ ಬೈಸಿಕಲ್‌ಗೆ ಅತ್ಯಗತ್ಯವಾಗಿದ್ದು, ಇದನ್ನು ಕೂಡ ಪ್ರತ್ಯೇಕವಾಗಿ ಖರೀದಿಸಬೇಕಾಗುತ್ತದೆ. ನೀವು ಬೆಲ್ ಅನ್ನು ಬಯಸಿದರೆ ಅದು ಕೂಡ ಹೆಚ್ಚುವರಿಯಾಗಿ ಖರೀದಿಸಬೇಕಾಗುತ್ತದೆ.

ಹೊಸ ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಸೂಪರ್‌ ಬೈಸಿಕಲ್‌ ರಿವ್ಯೂ

ಹಿಂಬದಿಯ ಸಬ್‌ಫ್ರೇಮ್‌ನಲ್ಲಿ ಚಿತ್ರಿಸಿರುವ 'ಶಟ್ ಅಪ್ ಅಂಡ್ ರೈಡ್' ಎಂಬ ಉಲ್ಲೇಖವು ಈ ಬೈಸಿಕಲ್ ಏನೆಂದು ವಿವರಿಸುತ್ತದೆ. ಇದು ಸ್ವತಃ ಈ ಬೈಸಿಕಲ್‌ನ ಮತ್ತು ಅದರ ವರ್ತನೆಯನ್ನು ವ್ಯಾಖ್ಯಾನಿಸುವ ಹೇಳಿಕೆಯಾಗಿದೆ. ಈ ಹೇಳಿಕೆಯೊಂದಿಗೆ ವಾದಿಸಲು ಕಷ್ಟವಾದ್ದರಿಂದ, ಏನೂ ಮಾತನಾಡದೇ ಅದನ್ನು ಸವಾರಿ ಮಾಡಿದ್ದೇವೆ.

ಹೊಸ ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಸೂಪರ್‌ ಬೈಸಿಕಲ್‌ ರಿವ್ಯೂ

ಸವಾರಿ ಮತ್ತು ನಿರ್ವಹಣೆ

ಫೈರ್‌ಫಾಕ್ಸ್ ಈ ಬೈಸಿಕಲ್ ಅನ್ನು ಮೇಲೆ ಹೇಳಿದಂತೆ ಮೌಂಟೇನ್ ಬೈಕ್ ಎಂದು ವರ್ಗೀಕರಿಸಿದೆಯಾದರೂ, ಅದರ ವಿನ್ಯಾಸವು ಹೈಬ್ರಿಡ್‌ ಅನ್ನು ಹೋಲುತ್ತದೆ. ಹಾಗಾಗಿ ಬಹುಪಾಲು ಖರೀದಿದಾರರು ಹೆಚ್ಚಿನ ಸಮಯ ಬೈಸಿಕಲ್ ಅನ್ನು ರಸ್ತೆಯಲ್ಲಿ ಬಳಸುವುದುರಿಂದ ಆಫ್-ರೋಡ್ ವಿಹಾರಗಳನ್ನು ಬಳಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ.

ಹೊಸ ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಸೂಪರ್‌ ಬೈಸಿಕಲ್‌ ರಿವ್ಯೂ

ಈ ಬಳಕೆಯ ಸನ್ನಿವೇಶದಲ್ಲಿ ನಾವು ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್‌ನೊಂದಿಗಿನ ಸವಾರಿ ಹೇಗಿರುತ್ತದೆ ಎಂಬುದನ್ನು ತಿಳಿದುಕೊಂಡು ರಿವ್ಯೂ ನೀಡಲು ಆನ್‌ರೋಡ್‌ನಲ್ಲಿ ನೂರಾರು ಕಿಲೋಮೀಟರ್‌ಗಳವರೆಗೆ ಮತ್ತು ಆಫ್-ರೋಡ್‌ನಲ್ಲಿ ಕೇವಲ 10 ಕಿಲೋಮೀಟರ್‌ಗಳವರೆಗೆ ಸವಾರಿ ಮಾಡಿದ್ದೇವೆ. ಇದಕ್ಕಾಗಿ ಕೆಲವು ತಿಂಗಳುಗಳ ಸಮಯವನ್ನು ತೆಗೆದುಕೊಳ್ಳಲಾಗಿದೆ. ಈ ರಿವ್ಯೂಗೆ ಸಂಬಂಧಿಸಂತೆ ಈ ಬೈಸಿಕಲ್ ನಿರ್ವಹಣ ಕುರಿತು ದೂರು ನೀಡಲು ಏನೂ ಇಲ್ಲ.

ಹೊಸ ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಸೂಪರ್‌ ಬೈಸಿಕಲ್‌ ರಿವ್ಯೂ

ಸವಾರಿ ಮಾಡುವಾಗ ಹಾರ್ಡ್‌ಕೋರ್ ಮೌಂಟೇನ್ ಬೈಕ್‌ನಂತಲ್ಲ ಎಂಬುದು ಗಮನಿಸಬೇಕಾದ ಮೊದಲ ವಿಷಯ. ಇದು ಸಹಜವಾಗಿ ಆಸನದ ಎತ್ತರವನ್ನು ಅವಲಂಬಿಸಿರುತ್ತದೆ, ಇದನ್ನು ಸವಾರನ ಅಗತ್ಯಗಳಿಗೆ ಅನುಗುಣವಾಗಿ ಸರಿಹೊಂದಿಸಬಹುದು. ಹ್ಯಾಂಡಲ್‌ಬಾರ್ ಬಹುತೇಕ ಪರಿಪೂರ್ಣವಾಗಿದೆ ಮತ್ತು ಕುಳಿತುಕೊಂಡಿರುವ ಹಾಗೂ ಸ್ಟ್ಯಾಂಡ್-ಅಪ್ ರೈಡಿಂಗ್ ಸ್ಥಾನಗಳಲ್ಲಿ ಸೈಕಲ್ ಸವಾರಿ ಮಾಡುವುದು ತುಂಬಾ ಸುಲಭ.

ಹೊಸ ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಸೂಪರ್‌ ಬೈಸಿಕಲ್‌ ರಿವ್ಯೂ

ಆಸನವು ಒದಗಿಸುವ ಸೌಕರ್ಯವು ಅದನ್ನು ಪೂರೈಸಲು ಉದ್ದೇಶಿಸಿರುವ ಬಳಕೆಗೆ ಸಂಪೂರ್ಣವಾಗಿ ಸಮರ್ಪಕವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ವಿಭಿನ್ನ ದೇಹ ಪ್ರಕಾರಗಳು ಮತ್ತು ಬಳಕೆಯ ಸನ್ನಿವೇಶಗಳಿಗೆ ವಿಭಿನ್ನ ಆಕಾರದ ಮತ್ತು ಪ್ಯಾಡ್ಡ್ ಆಸನಗಳ ಅಗತ್ಯವಿರುತ್ತದೆ. ಫೈರ್‌ಫಾಕ್ಸ್ ವೆಬ್‌ಸೈಟ್‌ನಲ್ಲಿ ಮೆಮೊರಿ ಫೋಮ್ ಸೀಟ್‌ಗಳು ಲಭ್ಯವಿದ್ದು, ಖರೀದಿದಾರರು ಅದರ ಅಗತ್ಯವಿದ್ದಲ್ಲಿ ಬಳಸಿಕೊಳ್ಳಬಹುದು.

ಹೊಸ ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಸೂಪರ್‌ ಬೈಸಿಕಲ್‌ ರಿವ್ಯೂ

ಒಮ್ಮೆ ಇದರಲ್ಲಿ ಸವಾರಿ ಮಾಡಿದರೆ ಡ್ರೈವ್ ಟ್ರೈನ್ ನಂಬಲಾಗದಷ್ಟು ಮೃದುವಾಗಿರುವುದನ್ನು ಗಮನಿಸಬಹುದು. ಸಂಪೂರ್ಣ ಗೇರ್‌ಶಿಫ್ಟಿಂಗ್ ಕಾರ್ಯವಿಧಾನವನ್ನು ಮೈಕ್ರೊಶಿಫ್ಟ್‌ನಿಂದ ಪಡೆಯಲಾಗಿದೆ. ಇದು ಶಿಫ್ಟರ್‌ಗಳು, ಕೇಬಲ್‌ಗಳು ಮತ್ತು ಡಿರೈಲರ್‌ಗಳನ್ನು ಒಳಗೊಂಡಿದೆ. ಬ್ಯಾಡ್ ಆಟಿಟ್ಯೂಡ್ ಎಕ್ಸ್‌ನಲ್ಲಿ ಕೆಲಸ ಮಾಡುವ ಕಾರ್ಯವಿಧಾನಗಳ ಸುಗಮ ಬದಲಾವಣೆಗಳು ಮತ್ತು ಸುಲಭವಾಗಿ ಹೋಗುವ ಸ್ವಭಾವವನ್ನು ಇದು ಸಾಕಷ್ಟು ವಿವರಿಸುತ್ತದೆ.

ಹೊಸ ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಸೂಪರ್‌ ಬೈಸಿಕಲ್‌ ರಿವ್ಯೂ

ನಂತರ ಇದ ಶಿಫ್ಟರ್ಸ್ ಕುರಿತು ಮಾತನಾಡುವುದಾದರೆ. ಅಪ್ ಶಿಫ್ಟ್ ಮತ್ತು ಡೌನ್ ಶಿಫ್ಟ್ ಎರಡನ್ನೂ ಹೆಬ್ಬೆರಳಿನಿಂದ ನಿರ್ವಹಿಸಲಾಗುತ್ತದೆ. ಇದು ಹೊಸಬರಿಗೆ ಸ್ವಲ್ಪ ಗೊಂದಲಮಯವಾಗಿರಬಹುದು ಆದರೆ ಒಗ್ಗಿಕೊಳ್ಳುವುದು ಸುಲಭ. ಇದು ಗೇರ್ ಸ್ಥಾನ ಸೂಚಕವನ್ನು ಹೊಂದಿದ್ದು, ಅದು ಅಲಂಕಾರಿಕ ಮತ್ತು ಅದ್ಬುತವಾಗಿ ಕಾಣುತ್ತದೆ.

ಹೊಸ ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಸೂಪರ್‌ ಬೈಸಿಕಲ್‌ ರಿವ್ಯೂ

ಕ್ರ್ಯಾಂಕ್‌ನಲ್ಲಿ ಮೂರು ಡ್ರೈವ್ ಅನುಪಾತಗಳನ್ನು ನಿರ್ವಹಿಸುವ ಹ್ಯಾಂಡಲ್‌ಬಾರ್‌ನ ಎಡಭಾಗದಲ್ಲಿರುವ ಶಿಫ್ಟರ್ ತೀವ್ರ ತುದಿಗಳಲ್ಲಿ 1 ಮತ್ತು 3 ಬರೆಯಲಾದ ಸೂಚಕವನ್ನು ಹೊಂದಿದೆ. ಈ ಶಿಫ್ಟರ್‌ನೊಂದಿಗೆ, ಸೂಚಕವು ಮಧ್ಯದಲ್ಲಿದ್ದಾಗ, ಅದು 2ನೇ ಗೇರ್ / ಅನುಪಾತದಲ್ಲಿದೆ ಎಂಬುದು ಸ್ಪಷ್ಟಪಡಿಸುತ್ತದೆ.

ಹೊಸ ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಸೂಪರ್‌ ಬೈಸಿಕಲ್‌ ರಿವ್ಯೂ

ಹಿಂಭಾಗದ ಕಾಗ್ ಸೆಟ್ ಅನ್ನು ನಿರ್ವಹಿಸುವ ಬಲಭಾಗದ ಶಿಫ್ಟರ್ 1 ಮತ್ತು 7 ಗುರುತುಗಳನ್ನು ಹೊಂದಿದ್ದು, ಇಂಡಿಕೇಟರ್ ನಡುವೆ ಇರುವಾಗ, ಅದು 3 ನೇ, 4 ನೇ ಅಥವಾ 5 ನೇ ಗೇರ್‌ನಲ್ಲಿದೆಯೇ ಎಂದು ಹೇಳಲಾಗುವುದಿಲ್ಲ. ನೀವು ಯಾವ ಗೇರ್‌ನಲ್ಲಿ ಸವಾರಿ ಮಾಡುತ್ತಿದ್ದೀರಿ ಎಂಬುದನ್ನು ನಿಖರವಾಗಿ ತಿಳಿದುಕೊಳ್ಳಬೇಕಾದರೆ ಈ ವಿಷಯದಲ್ಲಿ ಸ್ವಲ್ಪ ಕಿರಿಕಿರಿ ಉಂಟಾಗಬಹುದು. ಇಲ್ಲದಿದ್ದರೆ, ಯಾವುದೇ ಸಮಸ್ಯೆಗಳಿಲ್ಲ. ಇದು ಮುಂಭಾಗದಲ್ಲಿ ಮೂರು ವೇಗವನ್ನು ಮತ್ತು ಹಿಂಭಾಗದಲ್ಲಿ ಏಳು ವೇಗವನ್ನು ಪಡೆದುಕೊಂಡಿದ್ದು ಒಟ್ಟಾರೆ ಗೇರ್ ಅನುಪಾತಗಳನ್ನು 21ಕ್ಕೆ ನೀಡಲಾಗಿದೆ.

ಹೊಸ ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಸೂಪರ್‌ ಬೈಸಿಕಲ್‌ ರಿವ್ಯೂ

ಬೈಸಿಕಲ್ ಪರ್ಫಾಮೆನ್ಸ್ ಹೇಗಿದೆ ಎಂಬುದರ ಕುರಿತು ಹೇಲುವುದಾದರೆ ಖಂಡಿತವಾಗಿಯೂ ಟೈರ್‌ಗಳ ಬಗ್ಗೆ ಉಲ್ಲೇಖಿಸಲೇಬೇಕು. ನೀವು ಯಾವ ರೋಡ್‌ನಲ್ಲಿ ಸವಾರಿ ಮಾಡುತ್ತಿದ್ದೀರಿ ಎಂಬುದರ ಹೊರತಾಗಿಯೂ ಈ ಟೈರ್‌ಗಳು ತಮ್ಮ ಗ್ರಿಪ್‌ ಅನ್ನು ಉತ್ತಮವಾಗಿ ನಿರ್ವಹಿಸುತ್ತವೆ. ನಾವು ಅವುಗಳನ್ನು ಟಾರ್ಮ್ಯಾಕ್ ಮತ್ತು ಮಣ್ಣಿನ ಮೇಲೆ ಸಡಿಲಗೊಳಿಸಲು ಪ್ರಯತ್ನಿಸಿದ್ದೆವು, ಆದರೆ ಬೈಸಿಕಲ್ ಇಲ್ಲಿ ಹಿನ್ನಡೆ ಅನುಭವಿಸಿತು. ಇದು ಜಲ್ಲಿಕಲ್ಲು ಮತ್ತು ಉಳುಮೆ ಮಾಡಿದ ಹೊಲದಂತಹ ಅತ್ಯಂತ ಸಡಿಲವಾದ ಕೆಸರು ಇರುವಂತಹ ಪ್ರದೇಶಗಳಲ್ಲಿ ಸ್ವಲ್ಪ ಜಾರುವಂತಹ ಸವಾರಿ ಅನುಭವ ನೀಡಿತು.

ಹೊಸ ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಸೂಪರ್‌ ಬೈಸಿಕಲ್‌ ರಿವ್ಯೂ

ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಮುಂಭಾಗ ಮತ್ತು ಹಿಂಭಾಗದಲ್ಲಿ ಪೆಟಲ್ ಡಿಸ್ಕ್ ಬ್ರೇಕ್‌ಗಳನ್ನು ಬಳಸುತ್ತದೆ. ಇವುಗಳು ಅತ್ಯಂತ ಪರಿಣಾಮಕಾರಿ ಮತ್ತು ಟಾರ್‌ಮ್ಯಾಕ್‌ನಲ್ಲಿರುವಾಗ ವೇಗವನ್ನು ತ್ವರಿತವಾಗಿ ತಗ್ಗಿಸುತ್ತವೆ. ಮಣ್ಣು ಮತ್ತು ಜಲ್ಲಿಕಲ್ಲುಗಳ ಮೇಲೆ, ಹಿಂದಿನ ಚಕ್ರವು ಬಹಳ ಸುಲಭವಾಗಿ ಲಾಕ್ ಆಗುತ್ತದೆ. ಇದು ಮನರಂಜಿಸುವ ಸವಾರಿಯ ಅನುಭವಕ್ಕೆ ಅವಕಾಶ ಮಾಡಿಕೊಟ್ಟಿತು.

ಹೊಸ ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಸೂಪರ್‌ ಬೈಸಿಕಲ್‌ ರಿವ್ಯೂ

ಮೇಲೆ ತಿಳಿಸಿದಂತೆ, ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಅನ್ನು ಒಳಗೊಂಡಿದೆ. ಈ ಸಸ್ಪೆನ್ಷನ್ ಕಡಿಮೆ ವೇಗದಲ್ಲಿ ಅಡೆತಡೆಗಳನ್ನು ಮೇಲಕ್ಕೆ ಅಥವಾ ಇಳಿಜಾರಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಹೆಚ್ಚಿನ ವೇಗದಲ್ಲಿದ್ದರೂ, ಇದು ಸಮರ್ಥವಾಗಿ ಮುನ್ನಡೆಯುತ್ತದೆ. ಆದರೆ ಡ್ಯಾಂಪಿಂಗ್ ಕ್ರಿಯೆಯ ನಷ್ಟವಿದೆ. ರಿಬೌಂಡ್ ಸಾಕಷ್ಟು ಪ್ರಬಲವಾಗಿದ್ದು, ನೀವು ಕಷ್ಟವಾಗಿ ಬೈಸಿಕಲ್‌ ಅನ್ನು ತುಳಿಯುವ ವೇಳೆ ಸಸ್ಪೆನ್ಷನ್‌ನ ಕಾರ್ಯ ವಿಧಾನವನ್ನು ಅನುಭವಿಸಬಹುದು.

ಹೊಸ ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಸೂಪರ್‌ ಬೈಸಿಕಲ್‌ ರಿವ್ಯೂ

ದೀರ್ಘಾವಧಿಯ ಕಾರ್ಯಕ್ಷಮತೆ

ಮೇಲೆ ತಿಳಿಸಿದಂತೆ ನಾವು ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಅನ್ನು ದೀರ್ಘಕಾಲದವರೆಗೆ ಪರೀಕ್ಷಿಸಿದ್ದೇವೆ. ಆರು ತಿಂಗಳ ಬಳಕೆಯಿಂದ ಬೈಸಿಕಲ್‌ನಲ್ಲಿ ಹಳೆಯದಾದ ಅಥವಾ ಕೆಲವು ರಿಪೇರಿ ಲಕ್ಷಣಗಳನ್ನು ಕಾಣಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ ಅಂತಹ ಯಾವುದೇ ಲಕ್ಷಣಗಳನ್ನು ಕಾಣಲಿಲ್ಲ. ನಂತರ ತೊಳೆದು ಪಾಲಿಶ್ ಮಾಡಿದರೆ ಬೈಸಿಕಲ್ ಇನ್ನೂ ಹೊಚ್ಚಹೊಸದಾಗೇ ಕಾಣುತ್ತಿತ್ತು.

ಹೊಸ ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಸೂಪರ್‌ ಬೈಸಿಕಲ್‌ ರಿವ್ಯೂ

ಯಾಂತ್ರಿಕ ಬಿಟ್‌ಗಳು ಯಾವುದೇ ರೀತಿಯ ನಿಯಮಿತ ನಿರ್ವಹಣೆಯಿಲ್ಲದೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಸೈಕ್ಲಿಂಗ್ ಉತ್ಸಾಹಿಗಳು ಬೈಸಿಕಲ್ ಅನ್ನು ಬಲವಾಗಿ ಇರಿಸಿಕೊಳ್ಳಲು ನಿಯಮಿತವಾದ ಲ್ಯೂಬಿಂಗ್ ಮತ್ತು ಸ್ವಚ್ಛಗೊಳಿಸುವಿಕೆಯನ್ನು ಸೂಚಿಸುತ್ತಾರೆ. ಆದರೆ ಈ ಫೈರ್‌ಫಾಕ್ಸ್ ಅನ್ನು ಯಾವುದೇ ನಿರ್ವಹಣೆ ಮಾಡದೆಯೇ ಇಂದಿಗೂ ಉತ್ತಮ ಪರ್ಫಾಮೆನ್ಸ್‌ ನೀಡುತ್ತಿದೆ. ಲಾಂಗ್ ಲೈಫ್ ಮತ್ತು ಬಾಳಿಕೆ ವಿಷಯದಲ್ಲಿ ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಫುಲ್ ಮಾರ್ಕ್ಸ್ ಪಡೆದಿದೆ.

ಹೊಸ ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಸೂಪರ್‌ ಬೈಸಿಕಲ್‌ ರಿವ್ಯೂ

ಪರಿಕರಗಳು ಮತ್ತು ಬೆಲೆ

Firefox Bad Attitude X ಕೇವಲ ಒಂದು ಬಣ್ಣದ ಆಯ್ಕೆಯಲ್ಲಿ ಲಭ್ಯವಿದೆ. 2021ರ ಅಂತ್ಯದಲ್ಲಿ ನಾವು ಈ ಬೈಸಿಕಲ್ ಅನ್ನು ಸ್ವೀಕರಿಸಿದಾಗ ಅದರ ಬೆಲೆ 15,800 ರೂ. ಇತ್ತು. ಏಪ್ರಿಲ್ 2022ರಲ್ಲಿ ಇದು ರೂ 17,500 ಬೆಲೆಯೊಂದಿಗೆ ಬರುತ್ತದೆ. ಅಂದರೆ 1,700 ರೂಪಾಯಿ ಹೆಚ್ಚಳವಾಗಿದ್ದು, ಭವಿಷ್ಯದಲ್ಲಿಯೂ ಬೆಲೆಗಳು ಹೆಚ್ಚಾಗಬಹುದು. ನಿಖರವಾದ ಬೆಲೆ ವಿವರಗಳಿಗಾಗಿ Firefox ವೆಬ್‌ಸೈಟ್ ಅನ್ನು ಪರಿಶೀಲಿಸಿ.

ಹೊಸ ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಸೂಪರ್‌ ಬೈಸಿಕಲ್‌ ರಿವ್ಯೂ

ಫೈರ್‌ಫಾಕ್ಸ್ ಬೈಸಿಕಲ್ ಮತ್ತು ರೈಡರ್ ಎರಡಕ್ಕೂ ಸಾಕಷ್ಟು ಪರಿಕರಗಳನ್ನು ಮಾರಾಟ ಮಾಡುತ್ತದೆ. ರೂ 3,650 ರಿಂದ ರೂ. 10,110 ರ ನಡುವಿನ ಬೆಲೆಯ ಕಿಟ್‌ಗಳಲ್ಲಿ ಅವು ಲಭ್ಯವಿವೆ. ಬಿಡಿಭಾಗಗಳು ಸಹ ಪ್ರತ್ಯೇಕವಾಗಿ ಲಭ್ಯವಿದೆ. ಉದಾಹರಣೆಗೆ ಬೆಲ್‌ವೊಂದರ ಬೆಲೆಯು ರೂ.120 ರಿಂದ ಪ್ರಾರಂಭವಾಗುತ್ತದೆ. ಲ್ಯಾಂಪ್‌ಗಳು ರೂ 1,050 ರಿಂದ ಪ್ರಾರಂಭವಾಗುತ್ತವೆ. ಬೀಗಗಳು ರೂ. 300 ರಿಂದ ಪ್ರಾರಂಭವಾಗುತ್ತವೆ.

ಹೊಸ ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಸೂಪರ್‌ ಬೈಸಿಕಲ್‌ ರಿವ್ಯೂ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಒಟ್ಟಾರೆಯಾಗಿ ಇದರ ರೈಡಿಂಗ್ ಅನುಭವವನ್ನು ಹಂಚಿಕೊಳ್ಳುವುದಾದರೆ ಇದು ತಮಾಷೆಯ ಹಾಗೂ ಮೋಜಿನ ಸವಾರಿಯಾಗಿತ್ತು. ಬೈಸಿಕಲ್‌ ಅನ್ನು ದೂರವಿಟ್ಟು ಹೊರಹೋದಾಗ ಖಂಡಿತವಾಗಿಯೂ ತಮಾಷೆಯ ರೈಡಿಂಗ್‌ನ ಕುರಿತು ನೆನಪಾಗುತ್ತದೆ. ಇನ್ನು ಈ ಬೈಸಿಕಲ್ ಟಫ್‌ ಆಫ್-ರೋಡರ್ ಅಲ್ಲ. ಹಾಗಾಗಿ ಸವಾರರು ಅಡೆತಡೆಗಳಿಂದ ಜಿಗಿಯುವಂತಹ ಸ್ಟಂಟ್‌ಗಳನ್ನು ಇದರಲ್ಲಿ ಪ್ರಯತ್ನಿಸಸಬಾರದು ಎಂಬುದು ನಮ್ಮ ಸಲಹೆಯಾಗಿದೆ.

Most Read Articles

Kannada
Read more on ಸೈಕಲ್ cycle
English summary
Firefox Bad Attitude x Bicycle Review
Story first published: Thursday, April 28, 2022, 14:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X