ಈ ದೇಶದಲ್ಲಿ ಸೈಕಲ್ ಓಡಿಸೋದಕ್ಕೂ ಟ್ಯಾಕ್ಸ್ ಪೇ ಮಾಡ್ಬೇಕು..!!

Written By:

ಸೈಕಲ್ ಇಷ್ಟಪಡದೇ ಇರೋರು ಯಾರಿದ್ದಾರೆ ಹೇಳಿ? ಆದ್ರೆ ಸೈಕಲ್ ಪ್ರೇಮಿಗಳಿಗೆ ಇಲ್ಲೊಂದು ಶಾಕ್ ಕಾದಿದೆ. ಇದಕ್ಕೆ ಕಾರಣ ಸೈಕಲ್‌‌ಗಳ ಬಳಕೆ ಮೇಲೆ ತೆರಿಗೆ ವಿಧಿಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

To Follow DriveSpark On Facebook, Click The Like Button
ಈ ದೇಶದಲ್ಲಿ ಸೈಕಲ್ ಓಡಿಸೋದಕ್ಕೂ ಟ್ಯಾಕ್ಸ್ ಪೇ ಮಾಡ್ಬೇಕು..!!

ಹೆಚ್ಚುತ್ತಿರುವ ಸೂಪರ್ ಬೈಕ್‌ಗಳು ಮತ್ತು ಸೂಪರ್ ಕಾರುಗಳ ಮೇಲೆ ತೆರಿಗೆ ವಿಧಿಸುವುದು ವಾಡಿಕೆ. ಆದ್ರೆ ಪರಿಸರ ಪ್ರೇಮಿ ವಾಹನ ಎಂದೇ ಜನಪ್ರಿಯತೆ ಪಡೆದಿರುವ ಸೈಕಲ್ ಮೇಲೆ ಉತ್ತರ ಅಮೆರಿಕದ ಒರಿಗಾನ್ ರಾಜ್ಯದಲ್ಲಿ ತೆರಿಗೆ ವಿಧಿಸುವ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಲಾಗಿದೆ.

ಈ ದೇಶದಲ್ಲಿ ಸೈಕಲ್ ಓಡಿಸೋದಕ್ಕೂ ಟ್ಯಾಕ್ಸ್ ಪೇ ಮಾಡ್ಬೇಕು..!!

ಇನ್ನು ಅಮೆರಿಕನ್ನರು ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ ಬೈಕ್ ಮತ್ತು ಕಾರುಗಳ ಬದಲಾಗಿ ಸೈಕಲ್ ಸವಾರಿಗೆ ಹೆಚ್ಚು ಒತ್ತು ನೀಡುತ್ತಿದ್ದು, ಇದಕ್ಕೆ ಬೆಂಬಲ ನೀಡಬೇಕಿದ್ದ ಒರಿಗಾನ್ ಸ್ಥಳೀಯ ಆಡಳಿತವು ಸೈಕಲ್‌ಗಳ ಮೇಲೆ ತೆರಿಗೆ ವಿಧಿಸಿರುವುದು ಚರ್ಚೆಗೆ ಕಾರಣವಾಗಿದೆ.

ಈ ದೇಶದಲ್ಲಿ ಸೈಕಲ್ ಓಡಿಸೋದಕ್ಕೂ ಟ್ಯಾಕ್ಸ್ ಪೇ ಮಾಡ್ಬೇಕು..!!

ಒರಿಗಾನ್ ಸ್ಥಳೀಯ ಸರ್ಕಾರದ ನಿರ್ಧಾರಕ್ಕೆ ಈಗಾಗಲೇ ಹಲವು ಸರ್ಕಾರೇತರ ಸಂಘಗಳು ಮತ್ತು ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದು, ಕೂಡಲೇ ಹೊಸ ತೆರಿಗೆ ಪದ್ದತಿಯನ್ನು ಹಿಂಪಡೆಯುವಂತೆ ಪಟ್ಟುಹಿಡಿದ್ದಾರೆ.

ಈ ದೇಶದಲ್ಲಿ ಸೈಕಲ್ ಓಡಿಸೋದಕ್ಕೂ ಟ್ಯಾಕ್ಸ್ ಪೇ ಮಾಡ್ಬೇಕು..!!

ಹೊಸ ತೆರಿಗೆ ಪದ್ದತಿ ಪ್ರಕಾರ ಭಾರತೀಯ ಬೆಲೆಗಳ ಪ್ರಕಾರ 13ಸಾವಿರಕ್ಕಿಂತ ಹೆಚ್ಚಿನ ಬೆಲೆಯ ಸೈಕಲ್‌ಗಳು ಮತ್ತು 26-ಇಂಚಿನ ಸುತ್ತಳತೆಯ ಚಕ್ರಗಳ ಮೇಲ್ಪಟ್ಟ ಸೈಕಲ್‌ ಮಾದರಿಗಳ ಮೇಲೆ ತೆರಿಗೆ ವಿಧಿಸುತ್ತಿದೆ.

ಈ ದೇಶದಲ್ಲಿ ಸೈಕಲ್ ಓಡಿಸೋದಕ್ಕೂ ಟ್ಯಾಕ್ಸ್ ಪೇ ಮಾಡ್ಬೇಕು..!!

ಆದ್ರೆ ಇದೊಂದು ಅವೈಜ್ಞಾನಿಕ ತೆರಿಗೆ ಪದ್ದತಿಯಾಗಿದ್ದು, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿರುವ ಸೈಕಲ್ ಮೇಲಿನ ತೆರಿಗೆಯನ್ನು ತೆಗೆದುಹಾಕುವುದು ಒಳಿತು. ಇಲ್ಲವಾದ್ರೆ ಜನ ಕೂಡಾ ಪರಿಸರಕ್ಕೆ ಮಾರಕವಾಗಿರುವ ಸೂಪರ್ ವಾಹನಗಳತ್ತ ಮುಖಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Read more on ಸೈಕಲ್ bicycles
English summary
Read in kannada about Oregon State Legislature approvals of the first statewide cycle tax in the nation has fallen flat with riders.
Story first published: Wednesday, July 26, 2017, 15:05 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark