6 ಸಾವಿರ ಸೈಕಲ್ ಖರೀದಿಸಲು ಟೆಂಡರ್ ಆಹ್ವಾನಿಸಿದ ಬಿಬಿಎಂಪಿ

Written By:

ಬೆಂಗಳೂರಿನಲ್ಲಿ ಎಂಜಿನ್ ಚಾಲಿತ ವಾನಗಳಿಂದಾಗುವ ಮಾಲಿನ್ಯವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸೈಕಲ್ ಮೊರೆ ಹೋಗಿರುವ ಸರ್ಕಾರ, ಮೆಟ್ರೋ ಮತ್ತು ಹಲವೆಡೆ ಸೈಕಲ್ ಸೌಲಭ್ಯ ಆರಂಭಿಸಲಿದೆ.

6 ಸಾವಿರ ಸೈಕಲ್ ಖರೀದಿಸಲು ಟೆಂಡರ್ ಆಹ್ವಾನಿಸಿದ ಬಿಬಿಎಂಪಿ

ರಾಜಧಾನಿಯ ಪ್ರತಿಷ್ಠಿತ ಜಿಕೆವಿಕೆ ಆವರಣದಲ್ಲಿ, ಬಿಎಂಟಿಸಿ ಸ್ಟೇಷನ್ ಮತ್ತು ಮೆಟ್ರೊ ಸ್ಟೇಷನ್ ಬಳಿ ಪ್ರಯಾಣಿಕರಿಗೆ ಬಾಡಿಗೆ ಆಧಾರದಲ್ಲಿ ಪಬ್ಲಿಕ್‌ ಬೈಸಿಕಲ್‌ ಷೇರಿಂಗ್‌ ಸಿಸ್ಟಮ್‌ ಯೋಜನೆ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಈ ಯೋಜನೆ ಜಾರಿಗೆ ತರಲು ನಗರದ 345 ಕಡೆ ಜಾಗ ಗುರುತಿಸಿದ್ದು, 6 ಸಾವಿರ ಸೈಕಲ್ ಖರೀದಿಸಲು ಟೆಂಡರ್ ಆಹ್ವಾನಿಸಲು ಮುಂದಾಗಿದೆ.

6 ಸಾವಿರ ಸೈಕಲ್ ಖರೀದಿಸಲು ಟೆಂಡರ್ ಆಹ್ವಾನಿಸಿದ ಬಿಬಿಎಂಪಿ ಸೈಕಲ್

ಎಲ್ಲಾ 345 ಸೈಕಲ್ ನಿಲುಗಡೆ ತಾಣದಲ್ಲಿ ಪ್ರತಿ ನಿಲುಗಡೆಯಲ್ಲೂ ಕನಿಷ್ಠ 15 ಸೈಕಲ್ ಇರಿಸಲು ಯೋಚಿಸಲಾಗಿದೆ. ಸ್ಮಾರ್ಟ್ ಕಾರ್ಡ್ ಮಾಡುವ ಮೂಲಕ ಅಳವಡಿಸಲಾಗುವ ಯಂತ್ರದಲ್ಲಿ ಹಣ ಪಾವತಿಸಿ ಸೈಕಲ್ ತೆಗೆದುಕೊಂಡು ಹೋಗಬೇಕಾಗುತ್ತದೆ.

6 ಸಾವಿರ ಸೈಕಲ್ ಖರೀದಿಸಲು ಟೆಂಡರ್ ಆಹ್ವಾನಿಸಿದ ಬಿಬಿಎಂಪಿ ಸೈಕಲ್

ಪ್ರತಿ ಗಂಟೆಗೆ 5 ರೂ. ದರ ನಿಗದಿ ಮಾಡುವ ಬಗ್ಗೆ ಚಿಂತಿಸಲಾಗಿದೆ ಹಾಗು 60 ಕೋಟಿ ರೂ. ವೆಚ್ಚದಲ್ಲಿ ಪ್ರತಿ ಪ್ರತಿಯೊಂದು ಸೈಕಲ್‌ಗೂ ಜಿಪಿಎಸ್ ಅಳವಡಿಸಲು ಸರ್ಕಾರ ನಿರ್ಧರಿಸಿದ್ದು, ಈ ಮೂಲಕ ಸೈಕಲ್ ಸ್ಥಳವನ್ನು ಗುರುತಿಸಬಹುದಾಗಿದೆ.

6 ಸಾವಿರ ಸೈಕಲ್ ಖರೀದಿಸಲು ಟೆಂಡರ್ ಆಹ್ವಾನಿಸಿದ ಬಿಬಿಎಂಪಿ ಸೈಕಲ್

28 ಚದರ ಕಿ.ಮೀ. ವ್ಯಾಪ್ತಿಯ ಒಳಗೊಂಡ ನಗರ ಕೇಂದ್ರ ಭಾಗದ ಎರಡು ವಲಯಗಳಲ್ಲಿ 345 ಸೈಕಲ್‌ ಡಾಕಿಂಗ್‌ ತಾಣಗಳನ್ನು ಗುರುತಿಸಲಾಗಿದ್ದು, ಬೆಂಗಳೂರಿನಾದ್ಯಂತ ಮೊದಲ ಹಂತದಲ್ಲಿ ಸುಮಾರು 6,000 ಸೈಕಲ್‌ಗಳನ್ನು ಸಾರ್ವಜನಿಕರಿಗೆ ಬಾಡಿಗೆ ಆಧಾರದಲ್ಲಿ ಒದಗಿಸಲಿದೆ.

6 ಸಾವಿರ ಸೈಕಲ್ ಖರೀದಿಸಲು ಟೆಂಡರ್ ಆಹ್ವಾನಿಸಿದ ಬಿಬಿಎಂಪಿ ಸೈಕಲ್

ಜಿಕೆವಿಕೆ ಆವರಣದಲ್ಲಿ ಸೈಕಲ್ :

ಅನಗತ್ಯವಾಗಿ ಬೈಕ್‌, ಕಾರು ಇತ್ಯಾದಿ ವಾಹನ ಬಳಸಿ ಮಾಲಿನ್ಯ ಮಾಡುವುದನ್ನು ತಡೆಯಲು ಕೃಷಿ ವಿವಿ ಸಹಯೋಗದಲ್ಲಿ ಯಾನ ಸಂಸ್ಥೆ ಜಿಕೆವಿಕೆ ಆವರಣದಲ್ಲಿ ಸೈಕಲ್‌ ಸೇವೆ ಆರಂಭಿಸಿದೆ. ರಾಸಾಯನಿಕ ಮುಕ್ತ ಕೃಷಿಗೆ ಹೆಚ್ಚು ಆದ್ಯತೆ ನೀಡುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

6 ಸಾವಿರ ಸೈಕಲ್ ಖರೀದಿಸಲು ಟೆಂಡರ್ ಆಹ್ವಾನಿಸಿದ ಬಿಬಿಎಂಪಿ ಸೈಕಲ್

ಕೃಷಿ ವಿವಿ 1500 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ವಿವಿ ತರಗತಿಗಳಿಂದ ಸಂಶೋಧನೆ ನಿರತ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ವಿವಿಧ ವಿಭಾಗಗಳಿಗೆ ಓಡಾಡಲು ಇನ್ನು ಮುಂದೆ ಸೈಕಲ್ ಬಳಸಬಹುದು.

Read more on cycle ಸೈಕಲ್
English summary
karnataka Government is planning to introduce cycles to avoid traffic in Bengaluru.
Story first published: Monday, December 4, 2017, 11:33 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark