ಗ್ರಾಂಡ್ ಚೆರೊಕ್ ಜೀಪ್ ಬರ್ತಾ ಇದೆ, ದಾರಿಬಿಡಿ
ಜೀಪ್ ಅಂದರೆ ಜೀಪಲ್ಲ. ಅದು ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಲೋಕದಲ್ಲಿ ಹಳೆಯ ಬ್ರಾಂಡ್. ಇಂತಹ ಲೆಂಜೆಂಡರಿ ಜೀಪ್ ಕಂಪನಿಯ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ದೇಶದ ರಸ್ತೆಗೆ ಆಗಮಿಸಲು ಸಿದ್ಧವಾಗಿದೆ. ದಾರಿಬಿಡಿ.
ಎಸ್‌ಯುವಿ ಅಂದ್ರೆ ಭಾರತೀಯರಿಗೆ ಅಚ್ಚುಮೆಚ್ಚು. ಬೃಹತ್ ಗಾತ್ರ, ಸ್ಥಳಾವಕಾಶ, ಕಟ್ಟರಸ್ತೆಯಲ್ಲೂ ಸರಾಗವಾಗಿ ಸಾಗುವ ಸ್ಪೋರ್ಟ್ ಕಾರುಗಳಿಗಿಂದು ಬೇಡಿಕೆ ಹೆಚ್ಚಾಗುತ್ತಿದೆ. ಅಮೆರಿಕದ ಐಕಾನಿಕ್ ಜೀಪ್ ಕಂಪನಿಯು ದೇಶಕ್ಕೆ ಶೀಘ್ರದಲ್ಲಿ ಎಸ್‌ಯುವಿ ಪರಿಚಯಿಸಲು ರೆಡಿಯಾಗಿದೆ.
ಕ್ರಿಸ್ಲರ್ ಗ್ರೂಪ್‌ನ ಜೀಪ್ ಕಂಪನಿಯು ಗ್ರಾಂಡ್ ಚೆರೊಕ್ ಮತ್ತು ವ್ರಾಂಗ್ಲರ್ ಎಸ್‌ಯುವಿ ಪರಿಚಯಿಸುವ ನಿರೀಕ್ಷೆಯಿದೆ. ಇದರಲ್ಲಿ ಗ್ರಾಂಡ್ ಚೆರೊಕ್ ನಾಲ್ಕನೇ ತಲೆಮಾರಿನ ಎಸ್‌ಯುವಿ. 2012ರ ಆವೃತ್ತಿ ಸಾಕಷ್ಟು ಅಪ್‌ಗ್ರೇಡ್ ಆಗಿಬಂದಿದೆ. ಆಧುನಿಕ ವಿನ್ಯಾಸದ ಜೊತೆಗೆ ಹಳೆಯ ಸ್ಟೈಲ್ ಉಳಿಸಿಕೊಂಡ ಚೆರೊಕ್ ದೇಶದ ಎಸ್‌ಯುವಿ ಪ್ರೇಮಿಗಳ ಗಮನಸೆಳೆಯುವ ನಿರೀಕ್ಷೆಯಿದೆ.
ದೇಶಕ್ಕೆ ಆಗಮಿಸಲಿರುವ ಜೀಪ್ ಬ್ರಾಂಡಿನ ಮತ್ತೊಂದು ಮಾಡೆಲ್ ವ್ರಾಂಗ್ಲರ್. ಇದು ಮರ್ಸಿಡಿಸ್ ಬೆಂಝ್ ಎಂಕ್ಲಾಸ್ ಪ್ಲಾಟ್‌ಫಾರ್ಮ್‌ನಲ್ಲಿರುವ ಕಾರು. ಇದು ಕೂಡ ಸಾಕಷ್ಟು ಅಪ್‌ಗ್ರೇಡ್ ಆಗಿದೆ. (ಕನ್ನಡ ಡ್ರೈವ್‌ಸ್ಪಾರ್ಕ್)


Click it and Unblock the Notifications









