ಹೊಸ ಡೌ ಜೊತೆ ಸುತ್ತಾಡುತ್ತಿರುವ ಕಮಲ್ ಹಾಸನ್

ದೇಶದ ಹಲವು ಪ್ರಾದೇಶಿಕ ಭಾಷೆಗಳಲ್ಲಿ(ಡ್ರೈವ್ ಸ್ಪಾರ್ಕ್ ಹಲವು ಭಾಷೆಗಳಲ್ಲಿರುವಂತೆ) ನಟಿಸಿರುವ ಜನಪ್ರಿಯ ತಮಿಳುನಟ ಕಮಲ್ ಹಾಸನ್ ದುಬಾರಿ ಸ್ಪೋರ್ಟ್ ಯುಟಿಲಿಟಿ ವೆಹಿಕಲೊಂದನ್ನು ಕೆಲವು ದಿನದ ಹಿಂದೆ ಖರೀದಿಸಿದ್ದಾರೆ.
ಕಮಲ್ ಹಾಸನ್ ಗೆ ಸ್ಪೋರ್ಟ್ ವಾಹನಗಳೆಂದರೆ ಅಚ್ಚುಮೆಚ್ಚು. ಈಗಾಗಲೇ ಇವರ ಬಳಿ ಟೊಯೊಟಾ ಪ್ರಾಡೊ ಕಾರಿತ್ತು. ಆಡಿ ಎ8 ಎಲ್ ಪ್ರೀಮಿಯಂ ಸೆಡಾನ್ ಕಾರು ಕೂಡ ಇವರಲ್ಲಿದೆ. ನೂತನ ಇವೊಕ್ ಕಾರು ನೋಡಲು ಆಕರ್ಷಕವಾಗಿದ್ದು, ಶಕ್ತಿ ಮತ್ತು ಕಾರ್ಯಕ್ಷಮತೆಯಲ್ಲೂ ಅತ್ಯುತ್ತಮ ಕಾರಾಗಿದೆ.
ಕಾರುಗಳೇ ಕಾರು ಕಂಪನಿಗಳಿಗೆ ಅತ್ಯುತ್ತಮ ಜಾಹೀರಾತುದಾರರು. ಒಬ್ಬ ಕಾರು ಖರೀದಿಸಿದರೆ ಅಕ್ಕಪಕ್ಕದ ಮನೆ ಸೇರಿದಂತೆ ಊರಿಗೇ ಸುದ್ದಿಯಾಗುತ್ತದೆ(ಇದು ನಗರಗಳಿಗೆ ಅನ್ವಯಿಸುವುದಿಲ್ಲ). ಸೆಲೆಬ್ರಿಟಿಗಳು ಖರೀದಿಸುವ ಕಾರುಗಳಂತೂ ಹೆಚ್ಚು ಸುದ್ದಿಮಾಡುತ್ತದೆ.
ಲ್ಯಾಂಡ್ ರೋವರ್ ಕಂಪನಿಯ ನೂತನ ಎಸ್ ಯುವಿ ಆರಂಭಿಕ ದರ ಭಾರತದಲ್ಲಿ ಸುಮಾರು 44.75 ಲಕ್ಷ ರುಪಾಯಿ ಇದೆ. ರೇಂಜ್ ರೋವರ್ ಇವೊಕ್ ಮೂರು ಬಣ್ಣಗಳ ಆಯ್ಕೆಗಳಲ್ಲಿ ದೊರಕುತ್ತದೆ.


Click it and Unblock the Notifications








