ಅದ್ದೂರಿ ಕಾರು ಖರೀದಿಸಿದ ಟಿವಿ ನಿರೂಪಕಿ ಕಿಮ್ ಕರ್ದಶಿಯಾ

ಅಮೆರಿಕದ ನಟಿ, ರೂಪದರ್ಶಿ, ಟಿವಿ ನಿರೂಪಕಿ, ರಿಯಾಲಿಟಿ ಶೋ ನಟಿ ಕಿಮ್ ಕರ್ದಶಿಯಾ ಹೊಸ ಮರ್ಸಿಡಿಸ್ ಬೆಂಝ್ ಜಿ63 ಕಾರನ್ನು ಖರೀದಿಸಿದ್ದಾರೆ. ಸುಮಾರು 83 ಲಕ್ಷ ರುಪಾಯಿ ಮೌಲ್ಯದ ಇದು ಹೊಸ ಕಾರಾಗಿದ್ದು, ಇನ್ನೂ ಮಾರುಕಟ್ಟೆಗೆ ಆಗಮಿಸಿಲ್ಲ. ಆದರೂ ಮರ್ಸಿಡಿಸ್ ಬೆಂಝ್ ಕಂಪನಿಯಿಂದ ಈ ಕಾರನ್ನು ಖರೀದಿಸುವಲ್ಲಿ ಕಿಮ್ ಯಶಸ್ವಿಯಾಗಿದ್ದಾರೆ.

ನೂತನ 2013ರ ಮರ್ಸಿಡಿಸ್ ಜಿ63 ಕಾರು ಖರೀದಿಸಿದ ಕೂಡಲೇ "ಹೊಸ ಆಟಿಕೆ ಪಡೆದೆ" ಎಂದು ಟ್ವಿಟ್ ಮಾಡಿದ್ದಾರೆ. ಕಿಮ್ ಕರ್ದಶಿಯಾನ್ ತನ್ನ ಬಾಯ್ ಫ್ರೆಂಡ್ ಕಾಯ್ನೆ ವೆಸ್ಟ್ ಗೆ( ಅದ್ದೂರಿ ಲಂಬೊರ್ಗಿನಿ ಕಾರೊಂದನ್ನು ಹುಟ್ಟುಹಬ್ಬದ ಉಡುಗೊರೆಯಾಗಿ ಇತ್ತೀಚೆಗೆ ಉಡುಗೊರೆಯಾಗಿ ನೀಡಿ ಸುದ್ದಿ ಮಾಡಿದ್ದರು.

ಕಿಮ್ ಕರ್ದಶಿಯನಿಗೆ ಕಾರುಗಳ ಶೋಕಿ ಹೆಚ್ಚಿದೆ. ಆಕೆಯ ಗ್ಯಾರೇಜಿನಲ್ಲಿ ಹಲವು ದುಬಾರಿ ಕಾರುಗಳಿವೆ. ಅದರಲ್ಲಿ ಫೆರಾರಿ 458 ಕಾರು ಪ್ರಮುಖವಾದದ್ದು. ಆಕೆಗೆ ಕಸ್ಟಮ್ ಕಾರುಗಳೆಂದರೆ ಅಚ್ಚುಮೆಚ್ಚು. ಈಗಾಗಲೇ ಒಂದು ಕಸ್ಟಮೈಸ್ಡ್ ಕಾರನ್ನು ಸುಮಾರು 1.2 ದಶಲಕ್ಷ ಡಾಲರಿಗೆ ಮಾರಾಟ ಮಾಡಿರುವುದಾಗಿ ಡೈಲಿ ಮೈಲ್ ವರದಿ ಮಾಡಿದೆ.

ಈಕೆಯ ಅದ್ದೂರಿ ಕಾರುಗಳ ಕಥೆ ಇಷ್ಟಕ್ಕೆ ಮುಗಿಯುವುದಿಲ್ಲ. ಆಕೆಯ ಬಳಿ ನೂತನ 2010ರ ರೇಂಜ್ ರೋವರ್ ಎಚ್ ಎಸ್ಇ ಕಾರಿದೆ. ಈ ಕಾರನ್ನು ಕೂಡ ತನ್ನ ಅಭಿರುಚಿಗೆ ತಕ್ಕಂತೆ ಮರುವಿನ್ಯಾಸ ಮಾಡಿದ್ದಾರೆ. ಫೆರಾರಿ 458 ಮಾತ್ರವಲ್ಲದೇ ಆಕೆಯ ಬಳಿ ಇನ್ನೊಂದು ಫೆರಾರಿ ಮಾಡೆಲ್ ಕಾರಿದೆ. ಅದರ ಹೆಸರು ಫೆರಾರಿ ಎಫ್ 430.

More from DriveSpark

Article Published On: Monday, August 27, 2012, 10:26 [IST]
English summary
American celebrity Kim Kardashian bought New 2013 Mercedes G63 worth USD 150,000. Recently Kim Kardashian gifted Lamborghini Aventador to her boy friend Kayne West. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+