ಬಾಯ್ ಫ್ರೆಂಡಿಗೆ ಲಂಬೊರ್ಗಿನಿ ಕಾರ್ ಗಿಫ್ಟ್ ಕೊಟ್ಟ ಕಿಮ್ ಕರ್ದಶಿಯಾನ್

ಇದ್ದರೆ ಇಂತಹ ಪ್ರೇಯಸಿ ಇರಬೇಕು ಎಂದೆನೆಸುವಂತೆ ಇಲ್ಲೊಬ್ಬಳು ನಟಿ ತನ್ನ ಪ್ರಿಯಕರನಿಗೆ ದುಬಾರಿ ದರದ ವಿಶ್ವದ ವೇಗದ ಕಾರೊಂದನ್ನು ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿದ್ದಾಳೆ. ಈಗಾಗಲೇ ಬೆಂಟ್ಲಿ ಕಾರಿನ ಮಾಲೀಕನಾಗಿರುವ ಪ್ರಿಯಕರನಂತೂ ಪ್ರೇಯಸಿಯ ಉಡುಗೊರೆ ನೋಡಿ ಅತೀವ ಸಂತಸ ವ್ಯಕ್ತಪಡಿಸಿದ್ದಾನೆ.

ಅಮೆರಿಕದ ನಟಿ, ರೂಪದರ್ಶಿ, ಟಿವಿ ನಿರೂಪಕಿ, ರಿಯಾಲಿಟಿ ಶೋ ನಟಿ ಕಿಮ್ ಕರ್ದಶಿಯಾನ್(Kim Kardashian) ತನ್ನ ಬಾಯ್ ಫ್ರೆಂಡ್ ಕಾಯ್ನೆ ವೆಸ್ಟ್ ಗೆ(Kanye West) ಅದ್ದೂರಿ ಲಂಬೊರ್ಗಿನಿ ಕಾರೊಂದನ್ನು ಇತ್ತೀಚೆಗೆ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿದ್ದಾರೆ.

Kim Kardashian gifted Lamborghini Aventador

ಸುಮಾರು ನಾಲ್ಕು ಲಕ್ಷ ಡಾಲರ್ ದರದ ಅದ್ದೂರಿ ಲಂಬೋರ್ಗಿನಿ ಕಾರನ್ನು ಉಡುಗೊರೆಯಾಗಿ ಪಡೆದ ಲಕ್ಕಿ ಬಾಯ್ ಫ್ರೆಂಡ್ ಕಾಯ್ನೆ ವೆಸ್ಟ್ ಯಾರು ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಕಾಯ್ನೆ ವೆಸ್ಟ್ ಅಮೆರಿಕದ ಸಂಗೀತಗಾರನಾಗಿ, ಸಿನಿಮಾ ನಿರ್ದೇಶಕ ಮತ್ತು ಫ್ಯಾಷನ್ ಡಿಸೈನರಾಗಿ ಜನಪ್ರಿಯ ವ್ಯಕ್ತಿ.

ಆಕೆಯ ಬಾಯ್ ಫ್ರೆಂಡ್ ಕಾಯ್ನೆ ವೆಸ್ಟ್ ಬಳಿ ಈಗಾಗಲೇ ಬೆಂಟ್ಲಿ ಸೇರಿದಂತೆ ಹಲವು ಐಷಾರಾಮಿ ಕಾರುಗಳಿವೆ. ಕಾನ್ಯೆ 35ನೇ ವರ್ಷದ ಹುಟ್ಟುಹಬ್ಬಕ್ಕೆ ಈ ದುಬಾರಿ ಕಾರು ಉಡುಗೊರೆಯಾಗಿ ನೀಡಲಾಗಿದೆ. ಒಮ್ಮೆ ಬೆತ್ತಲೆ ಟೇಪ್ ಮೂಲಕ ಕೋರ್ಟಿನಿಂದ ದಂಡಕ್ಕೆ ಈಡಾದ ಕಿಮ್ ಕದರ್ಶಿಯನ್ ಗೆ ಈಗ 31 ವರ್ಷ ವಯಸ್ಸು.

2012ರ ನೂತನ ಲಂಬೊರ್ಗಿನಿ ಅವೆಂಟಡೊರ್ ಸದ್ಯ ರಸ್ತೆಯಲ್ಲಿರುವ ದುಬಾರಿ ಕಾರುಗಳಲ್ಲಿ ಒಂದಾಗಿದೆ. ಇದು ವಿಶ್ವದ ಅತಿವೇಗದ ಕಾರು ಕೂಡ ಹೌದು. ಅವೆಂಟಡೊರ್ ಎಲ್ ಪಿ700-4 ಕಾರಿನಲ್ಲಿ ಕೇವಲ 2.9 ಸೆಕೆಂಡಿನಲ್ಲಿ 0-60 ಕಿ.ಮೀ. ವೇಗ ಪಡೆಯಬಹುದು. ಈ ಕಾರಲ್ಲಿ ಗಂಟೆಗೆ ಗರಿಷ್ಠ 359 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ.

ಅಂದಹಾಗೆ ಅಮೆರಿಕದ ರಿಯಾಲಿಟಿ ಶೋ ನಟಿಯೊಬ್ಬಳು ನೀಡಿದ ಈ ದುಬಾರಿ ಕಾರು ನೋಡಿ ಅಚ್ಚರಿ ಪಡಬೇಕೆಂದೆನಿಲ್ಲ. ನಮ್ಮ ಕನ್ನಡ ನಟ ದರ್ಶನಿಗೂ ಆತನ ಧರ್ಮಪತ್ನಿ ಹುಟ್ಟುಹಬ್ಬದಂದು ಕೋಟಿ ರು. ಮೌಲ್ಯದ ಜಾಗ್ವಾರ್ ಕಾರನ್ನು ಒಲವಿನ ಉಡುಗೊರೆಯಾಗಿ ನೀಡಿದ್ದರು. ದರ್ಶನ್ ಪಡೆದ ಒಲವಿನ ಉಡುಗೊರೆ ನೋಡೋಣ ಬನ್ನಿ.

More from DriveSpark

Article Published On: Tuesday, August 21, 2012, 12:49 [IST]
English summary
American celebrity Kim Kardashian has gifted a black Lamborghini Aventador to her boy friend Kayne West. The Aventador is finished in matt black paint and Lamborghini's latest supercar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+