ಪ್ರಾಣಕ್ಕೆ ಎರವಾದ ತಪ್ಪು: ಸೂಪರ್ ಕಾರು ಅಪಘಾತ

ಕಳೆದ ಭಾನುವಾರ ಮುಂಜಾನೆ ಲಂಬೊರ್ಗಿನಿ ಗಲಾರ್ಡೊ ದೆಹಲಿಯಲ್ಲಿ ಅಪಘಾತವಾಗಿದೆ. ಅತ್ಯಧಿಕ ವೇಗದಲ್ಲಿ ಸಾಗುತ್ತಿದ್ದ ಈ ಸೂಪರ್ ಕಾರಿನ ಹಿಡಿತವನ್ನು ಚಾಲಕ ಅಂಕೂಲ್ ರಿಶಿ ಕಳೆದುಕೊಂಡಿದ್ದಾನೆ. ಸೀಟ್ ಬೆಲ್ಟ್ ಧರಿಸದ ಕಾರಣ ಹೊರಕ್ಕೆಸೆಯಲ್ಪಟ್ಟು ಸಾವನ್ನಪ್ಪಿದ್ದಾನೆ. ಜೊತೆಗೆ ಸೈಕಲ್ ಸವಾರನೊಬ್ಬನೂ ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.
ಅಪಘಾತದ ಸಂದರ್ಭದಲ್ಲಿ ಏರ್ ಬ್ಯಾಗ್ ತೆರೆದಿತ್ತು. ಆದರೂ ರಿಶಿ ಬದುಕಲಿಲ್ಲ. ಸೀಟ್ ಬೆಲ್ಟ್ ಧರಿಸಿದ್ದರೆ ಬದುಕಿ ಉಳಿಯುವ ಛಾನ್ಸ್ ಹೆಚ್ಚಿತ್ತು. ಅಪಘಾತಗೊಂಡ ಲಂಬೊರ್ಗಿನಿ ಗಲಾರ್ಡ್ ಸೂಪರ್ ಕಾರು ಲಿಮಿಟೆಡ್ ಅಡಿಷನ್ ಆಗಿದೆ. ಈ ಕಾರು 5 ಲೀಟರಿನ ವಿ10 ಪೆಟ್ರೋಲ್ ಎಂಜಿನ್ ಹೊಂದಿದ್ದು 550 ಹಾರ್ಸ್ ಪವರ್ ನೀಡುತ್ತದೆ.
ಬೈಕಿನಲ್ಲಿ ಹೆಲ್ಮೆಟ್ ಹೇಗೆ ಅವಶ್ಯವೋ ಅದೇ ರೀತಿ ಕಾರುಗಳಲ್ಲಿ ಸೀಟ್ ಬೆಲ್ಟ್ ಧರಿಸುವುದು ಕೂಡ ಅತ್ಯಂತ ಅಗತ್ಯ. ಅಪಘಾತದ ಸಮಯದಲ್ಲಿ ಸೀಟ್ ಬೆಲ್ಟ್ ನಮ್ಮನ್ನು ಹೆಚ್ಚು ಕಾಯುತ್ತದೆ. ಸೀಟ್ ಬೆಲ್ಟ್ ಧರಿಸದೆ ಇದ್ದರೆ ಕಾರಿನಲ್ಲಿರುವ ಇತರ ಸೇಫ್ಟಿ ಫೀಚರುಗಳು ವ್ಯರ್ಥ ಎನ್ನುವುದಕ್ಕೆ ಈ ಅಪಘಾತ ತಾಜಾ ಉದಾಹರಣೆ. (ಸುರಕ್ಷತೆಯ ಸವಾರಿ ಕಲಿಯಿರಿ)


Click it and Unblock the Notifications








