ಲಂಬೊರ್ಗಿನಿ ಕಾರಿನ ರಹಸ್ಯ ಮಾಹಿತಿ ಬಹಿರಂಗ

ಲಂಬೊರ್ಗಿನಿ ಫ್ಯಾಕ್ಟರಿಯಿಂದ ಹೊಸದೊಂದು ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಆಗಮಿಸಲಿದೆ. ಈ ಕಾರು ಬೀಜಿಂಗ್ ವಾಹನ ಪ್ರದರ್ಶನದಲ್ಲಿ ಪ್ರದರ್ಶನಗೊಳ್ಳಲಿದೆ. ಆದರೆ ಕಂಪನಿ ಈ ಕಾರನ್ನು ಅಧಿಕೃತವಾಗಿ ಮಾರುಕಟ್ಟೆಗೆ ಪರಿಚಯಿಸುವ ಮುನ್ನವೇ ಹಲವು ಪುಣ್ಯವಂತರು ಈ ಕಾರು ನೋಡಿ ಕಣ್ತುಂಬಿಕೊಂಡುಬಿಟ್ಟಿದ್ದಾರೆ.

ಕಂಪನಿಯು ತನ್ನ ಆಯ್ದ ಗ್ರಾಹಕರಿಗೆ ಈ ಕಾರನ್ನು ರಹಸ್ಯವಾಗಿ ನ್ಯೂಯಾರ್ಕ್‌ನಲ್ಲಿ ತೋರಿಸಿರುವ ಸುದ್ದಿ ನಮಗೆ ತಲುಪಿದೆ. ಆದರೆ ಈ ಕಾರಿದ್ದ ಸ್ಥಳಕ್ಕೆ ಕ್ಯಾಮರಾ, ಶೂಟಿಂಗ್ ಸಾಧನಗಳನ್ನು ಕೊಂಡೊಯ್ಯಲು ಬಿಡಲಿಲ್ಲವಂತೆ. ಹೀಗಾಗಿ ಕಾರು ನೋಡಿದ ಗ್ರಾಹಕರ ಮಾತುಗಳಿಗೆ ಮೂರ್ತರೂಪ ಕೊಡಬೇಕಷ್ಟೇ! ನಾವು ಬಳಸಿರುವ ಚಿತ್ರ ಕಂಪನಿಯ ಕಾನ್ಸೆಪ್ಟ್ ಕಾರಿನದ್ದು.

ಸೈಡಿನಿಂದ ನೋಡಿದ್ರೆ ಈ ಕಾರು ಬಿಎಂಡಬ್ಲ್ಯು ಎಕ್ಸ್6 ಕಾರಿನಂತೆ ಇದೆಯಂತೆ. ಆದ್ರೆ ಇದು ಆಡಿ ಕ್ಯೂ7 ಕಾರಿನಷ್ಟು ಉದ್ದವಿದೆಯೆಂದು ಕಾರು ಕಂಡವರು ಹೇಳುತ್ತಾರೆ. ವಿಶೇಷವೆಂದರೆ ಇದು ವಿಶಾಲ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, ಹೊರವಿನ್ಯಾಸದಲ್ಲಿ ಹಲವು ಆಕರ್ಷಕ ಸ್ನಾಯುಗಳನ್ನು ಹೊಂದಿದ್ದು, ಪೊರ್ಷ್ ಕಯಾನೆ ಕಾರಿನಂತೆ ಪವರ್ ಫುಲ್ ಆಗಿ ಕಾಣಿಸುತ್ತದಂತೆ.

ಆದ್ರೆ ಆಡಿ ಕ್ಯೂ7, ಪೊರ್ಷ್ ಕಯನೆ ಕಾರುಗಳಿಗೆ ವಿರುದ್ಧವಾಗಿ ಈ ಕಾರಲ್ಲಿ ಕೇವಲ ನಾಲ್ಕೇ ನಾಲ್ಕು ಜನರು ಮಾತ್ರ ಕುಳಿತುಕೊಳ್ಳಬಹುದು. ವಿಶೇಷವೆಂದರೆ ಈ ಕಾರಿನ ಇಂಟಿರಿಯರ್‌ಗೆ ಲಂಬೊರ್ಗಿನಿ ಇತರ ಕಾರುಗಳಂತೆ ಐಷಾರಾಮಿ ಆಗಿ ಕಾಣುತ್ತದಂತೆ.

ವಿಶೇಷವೆಂದರೆ ನೂತನ ಲಂಬೊರ್ಗಿನಿ ಸ್ಪೋರ್ಟ್ ಯುಟಿಲಿಟಿ ವೆಹಿಕಲಿಗೆ ಮಿರರ್ ಇಲ್ಲವಂತೆ. ಅಂದ್ರೆ ಈ ಕಾರು ಕ್ಯಾಮರಾಗಳನ್ನು ಹೊಂದಿದೆ. ತುಂಬಾ ಗುಟ್ಟಿನ ವಿಷಯವೆಂದರೆ ಇದರ ಎಂಜಿನ್ ಕುರಿತಾದದ್ದು. ಈ ಕುರಿತು ನಮಗೂ ಇನ್ನೂ ಮಾಹಿತಿ ಬಂದಿಲ್ಲ. ಅಸಲಿಗೆ ಈ ಕಾರಿನ ಎಂಜಿನ್ ಮಾಹಿತಿಯನ್ನೂ ತನ್ನ ಆಯ್ದ ಗ್ರಾಹಕರಿಗೂ ನೀಡಿಲ್ಲವಂತೆ. ಈ ಕಾರು ಅಧಿಕೃತವಾಗಿ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಮಾಹಿತಿಯೂ ಸದ್ಯಕ್ಕೆ ಲಭ್ಯವಿಲ್ಲ. ಬೀಜಿಂಗ್ ವಾಹನ ಪ್ರದರ್ಶನದಲ್ಲಿ ಇದಕ್ಕೆ ಉತ್ತರ ಲಭಿಸಬಹುದು. (ಕನ್ನಡ ಡ್ರೈವ್‌ಸ್ಪಾರ್ಕ್)

More from DriveSpark

Article Published On: Tuesday, April 10, 2012, 9:16 [IST]
English summary
Lamborghini which has developed a new SUV which is possibly based on the Audi Q7 has secretly displayed its new model to select group of customers in New York before its official unveiling at the Beijing Auto Show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+