ಡೀಸೆಲ್ ಕಾರು ಕೊಂಡುಕೊಳ್ತೀರಾ..? ಇಲ್ಲಿದೆ ನೋಡಿ ಪಟ್ಟಿ
ಪೆಟ್ರೋಲ್ ದರ ಗಣನೀಯ ವರ್ಧನೆ ಕಂಡುಬರುತ್ತಿರುವ ಹಿನ್ನಲೆಯಲ್ಲಿ ಭಾರತದ ವಾಹನ ಖರೀದಿ ಗ್ರಾಹಕರು ಡೀಸೆಲ್ ಕಾರುಗಳತ್ತ ಹೆಚ್ಚೆಚ್ಚು ಆಕರ್ಷಿತರಾಗುತ್ತಿದ್ದಾರೆ. ಪ್ರಸ್ತುತ ಪೆಟ್ರೋಲ್‌ಗೆ ಹೋಲಿಸಿದರೆ ಡೀಸೆಲ್ ದರ ಕಡಿಮೆಯಾಗಿದ್ದರ ಹಿನ್ನಲೆಯಲ್ಲಿ ಭಾರತದಲ್ಲಿ ಲಭಿಸುವ ಅಗ್ಗದ ಡೀಸೆಲ್ ಕಾರು ಯಾವುದು ಎಂಬುದನ್ನು ಹುಡುಕುವ ಪ್ರಯತ್ನವನ್ನು ಕನ್ನಡ ಡ್ರೈವ್ ಸ್ಪಾರ್ಕ್ ತಂಡ ಮಾಡಿದೆ.
ಪೆಟ್ರೋಲ್ ಎಂಜಿನ್ ಕಾರುಗಳಿಗೆ ಹೋಲಿಸಿದರೆ ಡೀಸೆಲ್ ಕಾರುಗಳ ಇಂಧನ ದಕ್ಷತೆಯು ಕೂಡಾ ಹೆಚ್ಚಾಗಿದೆ. ಮತ್ತೊಂದೆಡೆ ಪೆಟ್ರೋಲ್ ಎಂಜಿನ್ ಕಾರುಗಳಿಗಿಂತ ಡೀಸೆಲ್ ಎಂಜಿನ್ ಕಾರುಗಳು ಸ್ವಲ್ಪ ದುಬಾರಿಯಾಗಿದೆ. ಹಾಗಿದ್ದರೂ ಗ್ರಾಹಕರು ಡೀಸೆಲ್ ಕಾರುಗಳತ್ತ ಹೆಚ್ಚೆಚ್ಚು ಆಕರ್ಷಿತರಾಗುತ್ತಿದ್ದಾರೆ.

ಟಾಟಾ ಇಂಡಿಕಾ ಇವಿ2
ಟಾಟಾ ಇಂಡಿಕಾ ಇವಿ2 ಕಾರು ಭಾರತದಲ್ಲಿ ದೊರಕುತ್ತಿರುವ ಅತಿ ಅಗ್ಗದ ಡೀಸೆಲ್ ಎಂಜಿನ್ ಸಣ್ಣ ಕಾರು ಆಗಿದೆ. ಇದರ ದರವು ದೆಹಲಿ ಎಕ್ಸ್ ಶೊರೂಂನಲ್ಲಿ 4.2 ಲಕ್ಷ ರುಪಾಯಿಗಳಾಗಿವೆ. ಟಾಟಾ ಮೋಟಾರ್ಸ್ ಉತ್ಪತ್ತಿ ಆಗಿರುವ ಈ ಟಾಟಾ ಇಂಡಿಯಾ ಇವಿ2 ಕಾರು ಪ್ರತಿ ಲೀಟರ್‌ಗೆ 25 ಕಿಲೋ ಮೀಟರ್ ಇಂಧನ ದಕ್ಷತೆಯನ್ನು ನೀಡುತ್ತಿದೆ.

ಚೆವ್ರೊಲೆಟ್ ಬೀಟ್
ಭಾರತದಲ್ಲಿ ಅತಿ ಹೆಚ್ಚು ಇಂಧನ ದಕ್ಷತೆ ಹೊಂದಿರುವ ಕಾರು ಎನಿಸಿಕೊಂಡಿರುವ ಚೆವ್ರೊಲೆಟ್ ಬೀಟ್ ಡೀಸೆಲ್ ಎಂಜಿನ್ ಹ್ಯಾಚ್‌ಬ್ಯಾಕ್ ಆನಂತರದ ಸ್ಥಾನದಲ್ಲಿದೆ. ಪ್ರತಿ ಲೀಟರ್‌ಗೆ 25.4 ಕಿಲೋ ಮೀಟರ್ ಇಂಧನ ಕ್ಷಮತೆ ನೀಡುವ ಚೆವ್ರೊಲೆಟ್ ಬೀಟ್‌ನ ದೆಹಲಿ ಎಕ್ಸ್ ಶೊರೂಂ ಬೆಲೆ 4.53 ಲಕ್ಷ ರುಪಾಯಿ.

ಫೋರ್ಡ್ ಫಿಗೊ
ಫೋರ್ಡ್ ಫಿಗೊ ಅಗ್ಗದ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಆಗಿದೆ. ಫೋರ್ಡ್ ಫಿಗೊ ಡೀಸೆಲ್ ಎಂಜಿನ ಕಾರು ದರು ದೆಹಲಿ ಏಕ್ಸ್ ಶೊರೂಂಗಳಲ್ಲಿ 4.8 ಲಕ್ಷ ರುಪಾಯಿಗಳಾಗಿದೆ. ಪ್ರಮುಖ ಪ್ರತಿಸ್ಪರ್ಧಿ ಮಾರುತಿ ಸ್ವಿಫ್ಟ್‌ಗೆ ಹೋಲಿಸಿದರೆ ಇದು 70,000 ರು.ಗಳಷ್ಟು ಅಗ್ಗವಾಗಿದೆ. ಫೋರ್ಡ್ ಫಿಗೊ ಇಂಧನ ದಕ್ಷತೆಯು ಪ್ರತಿ ಲೀಟರ್‌ಗೆ 20 ಕಿಲೋ ಮೀಟರ್.

ಮಾರುತಿ ರಿಟ್ಜ್
ಮಾರುತಿ ಬ್ರಾಂಡ್‌ನ ಅತಿ ಅಗ್ಗದ ಡೀಸೆಲ್ ಕಾರು ಮಾರುತಿ ರಿಟ್ಜ್ ಆಗಿದೆ. ಇದರ ದರವು 5.31 ಲಕ್ಷ ರುಪಾಗಿಳಾಗಿದ್ದು, ಪ್ರತಿ ಲೀಟರ್‌ಗೆ 23.2 ಕಿಲೋಮೀಟರ್ ಇಂಧನ ಕ್ಷಮತೆಯನ್ನು ಹೊಂದಿದೆ.

ಅಗ್ಗದ ಡೀಸೆಲ್ ಕಾರು
ಪೆಟ್ರೋಲ್ ದರ ಗಣನೀಯ ವರ್ಧನೆ ಕಂಡುಬರುತ್ತಿರುವ ಹಿನ್ನಲೆಯಲ್ಲಿ ಭಾರತದ ವಾಹನ ಖರೀದಿ ಗ್ರಾಹಕರು ಡೀಸೆಲ್ ಕಾರುಗಳತ್ತ ಹೆಚ್ಚೆಚ್ಚು ಆಕರ್ಷಿತರಾಗುತ್ತಿದ್ದಾರೆ.


Click it and Unblock the Notifications








