ಲಗ್ಷುರಿ ವಾಹನ ಮಾಲೀಕರಿಗೆ ಚಳಿ ಹಿಡಿಸಿದ ರಾಜ್ಯ ಸಾರಿಗೆ ಇಲಾಖೆ

ಐಷಾರಾಮಿ ಕಾರುಗಳಿಗೆ ದುಬಾರಿ ತೆರಿಗೆಯಿದೆ. ಇದರಿಂದ ಪಾರಾಗಲು ಐಷಾರಾಮಿ ಕಾರು, ಬೈಕುಗಳನ್ನು ಹೊರರಾಜ್ಯಗಳಲ್ಲಿ ನೋಂದಣಿ ಮಾಡಿಸಿ ಬೆಂಗಳೂರಿನಂತಹ ನಗರಗಳಲ್ಲಿ ಸವಾರಿ ಮಾಡಲು ಬಳಸುತ್ತಾರೆ. ಹೀಗೆ ರಾಜ್ಯದಲ್ಲಿ ರಸ್ತೆ ತೆರಿಗೆ ಪಾವತಿಸದೇ ಓಡಾಡುವ ವಾಹನ ಮಾಲಿಕರನ್ನು ಸಾರಿಗೆ ಇಲಾಖೆ ಪ್ರಮುಖ ಟಾರ್ಗೇಟ್ ಮಾಡಿಕೊಂಡಿದೆ.
ಇಲ್ಲಿ ತೆರಿಗೆ ಪಾವತಿಸದೇ ಸವಾರಿ ಮಾಡುತ್ತಿದ್ದ ಇಂತಹ ಲಗ್ಷುರಿ ವಾಹನ ಮಾಲಿಕರಿಂದ ರಾಜ್ಯವು ಒಂದು ವಾರದಲ್ಲಿ ಸುಮಾರು 40 ಲಕ್ಷ ರು. ತೆರಿಗೆ ಪೀಕಿಸಿದೆ. ಸೂಕ್ತ ದಾಖಲೆಗಳಿಲ್ಲದ ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಲಾಗಿದೆ.
ತಮಿಳುನಾಡು, ಪಾಂಡಿಚೇರಿ, ಕೇರಳ, ಗುಜರಾತ್ ಮುಂತಾದ ರಾಜ್ಯಗಳಲ್ಲಿ ಕಡಿಮೆ ರಸ್ತೆ ತೆರಿಗೆ ವಿಧಿಸಲಾಗುತ್ತದೆ. ಹೀಗಾಗಿ ಹೆಚ್ಚಿನ ಜನರು ಕೋಟಿ ದರದ ಕಾರುಗಳನ್ನು ಅಂತಹ ರಾಜ್ಯಗಳಲ್ಲಿ ಖರೀದಿಸುತ್ತಾರೆ. ಅವರು ಪ್ರಯಾಣಕ್ಕೆ ರಾಜ್ಯದ ರಸ್ತೆಯನ್ನು ಬಳಸಿದರೂ ಸೂಕ್ತ ತೆರಿಗೆ ಪಾವತಿಸುವುದಿಲ್ಲ.
ಇನ್ನು ಕೆಲವು ಲಗ್ಷುರಿ ಖದೀಮದರು ರಾಜ್ಯದಲ್ಲಿ ವಾಹನ ಖರೀದಿಸಿ ಬೇರೆ ರಾಜ್ಯಗಳಲ್ಲಿ ನೋಂದಣಿ ಮಾಡಿಸುತ್ತಾರೆ. ಇದರಿಂದ ರಾಜ್ಯಕ್ಕೆ ಸಿಗಬೇಕಾದ ಕೋಟಿಗಟ್ಟಲೆ ರಸ್ತೆ ತೆರಿಗೆ ನಷ್ಟವಾಗುತ್ತದೆ. ಹೊರರಾಜ್ಯಗಳಲ್ಲಿ ವಾಹನ ಖರೀದಿಸಿ ರಾಜ್ಯದಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಸಂಚರಿಸುವ ಲಗ್ಷುರಿ ವಾಹನಗಳ ಮೇಲೆ ಸಾರಿಗೆ ಇಲಾಖೆ ನಿಗಾ ಇಟ್ಟಿದೆ.
ತೆರಿಗೆ ಕಳ್ಳರನ್ನು ಹಿಡಿಯಲು ಸಾರಿಗೆ ಇಲಾಖೆಯಲ್ಲಿ ನಾನಾ ಉಪಾಯವಿದೆ. ಯಾವುದು ಎನ್ನುವಿರಾ?


Click it and Unblock the Notifications








