ಲಗ್ಷುರಿ ಕಾರು ತೆರಿಗೆ ವಂಚಕರನ್ನು ಹಿಡಿಯಲು ರಾಜ್ಯದ 8 ತಂಡ

ಬೆಂಗಳೂರಿನ ಗರುಡಾ ಮಾಲ್, ಮಂತ್ರಿಮಾಲ್, ಯುಬಿ ಸಿಟಿ, ಬ್ರಿಗೆಡ್ ರೋಡ್, ಯಲಹಂಕ, ನೆಲಮಂಗಲ, ಎಂಜಿ ರೋಡ್, ಜಯನಗರ ಮತ್ತು ಎಲೆಕ್ಟ್ರಾನಿಕ್ ಸಿಟಿ ಮುಂತಾದ ಪ್ರಮುಖ ನಗರಗಳಲ್ಲಿ ತೆರಿಗೆ ಕಳ್ಳರನ್ನು ಹಿಡಿಯುವ ಕಾರ್ಯಾಚರಣೆ ಮಾಡಲಾಗುತ್ತಿದೆ.
ಇಷ್ಟು ಮಾತ್ರವಲ್ಲದೇ ಬಿಜಾಪುರ, ಹೊಸಪೇಟೆ, ಮಂಗಳೂರು, ಬೀದರ್, ಧಾರವಾಡ ಮತ್ತಿತ್ತರ ಜಿಲ್ಲೆಗಳಲ್ಲೂ ಇಂತಹ ತಪಾಸಣೆ ನಡೆಸಲಾಗುತ್ತಿದೆ. ಅಧಿಕಾರಿಗಳು, ರಾಜಕಾರಣಿಗಳು, ಐಟಿ ಬಿಟಿ ಉದ್ಯೋಗಿಗಳು ಪ್ರಮುಖ ಟಾರ್ಗೇಟ್.
ರಾಜ್ಯದ ರಸ್ತೆಯಲ್ಲಿ ಈಗ ಆಡಿ, ಬಿಎಂಡಬ್ಲ್ಯು, ಮರ್ಸಿಡಿಸ್ ಬೆಂಝ್, ರೋಲ್ಸ್ ರಾಯ್ಸ್ ಸೇರಿದಂತೆ ಹಲವು ಬ್ರಾಂಡಿನ ಐಷಾರಾಮಿ ವಾಹನಗಳು ಸಂಚರಿಸುತ್ತಿವೆ. ಇವುಗಳ ದರ 25 ಲಕ್ಷ ರು.ನಿಂದ ಹಲವು ಕೋಟಿ ರು.ಗಳಷ್ಟಿದೆ.
ರಾಜ್ಯದಲ್ಲಿ ಕೋಟಿ ದರಗಳ ಐಷಾರಾಮಿ ಕಾರುಗಳ ರಸ್ತೆ ತೆರಿಗೆ ಸುಮಾರು 17 ಲಕ್ಷ ರು.ಗಿಂತ ಹೆಚ್ಚಿದೆ. ಆದರೆ ಪಾಂಡಿಚೇರಿ, ಕೇರಳ, ತಮಿಳುನಾಡು, ಆಂಧ್ರ, ಗುಜರಾತಿನಲ್ಲಿ ರಸ್ತೆ ತೆರಿಗೆ ವೆಚ್ಚ ಒಂದು ಲಕ್ಷ ರು.ಗಿಂತ ಕಡಿಮೆಯಿದೆ. ಹಲವು ಲಕ್ಷ ರು. ಉಳಿಸಲು ಐಷಾರಾಮಿ ಕಾರು ಮಾಲೀಕರು ವಂಚನೆ ಹಾದಿ ಹಿಡಿಯುತ್ತಾರೆ.
ಈ ಕುರಿತು ಹೈಕೋರ್ಟ್ ತೀರ್ಪು ಯಾವ ರೀತಿಗೊತ್ತೆ? ಮುಂದಿನ ಪುಟ ನೋಡಿ


Click it and Unblock the Notifications








