ಮಹೀಂದ್ರ ಎಕ್ಸ್‌ಯುವಿ 500 ಬ್ಲು ಸೆನ್ಸ್ ಅಪ್ಲಿಕೇಷನ್
ಮಹೀಂದ್ರ ಕಂಪನಿಯು ತನ್ನ ಜಾಗತಿಕ ಫ್ಲಾಟ್ ಫಾರ್ಮ್‌ನಲ್ಲಿ ನಿರ್ಮಾಣವಾದ ಎಕ್ಸ್‌ಯುವಿ500ಗೆ ನೂತನ ಆಂಡ್ರಾಯ್ಡ್ ಅಪ್ಲಿಕೇಷನ್ ಆಳವಡಿಸಿಕೊಂಡಿದೆ. ಮಹೀಂದ್ರ ಬ್ಲ್ಯು ಸೆನ್ಸ್ ಎಂದು ಅರಿಯಲ್ಪಡುವ ಪ್ರಸ್ತುತ ಅಪ್ಲಿಕೇಷನ್ ನೆರವಿನಿಂದ ಹಲವು ಮಹತ್ವಪೂರ್ಣ ಮಾಹಿತಿಗಳನ್ನು ಪಡೆಯಬಹುದಾಗಿದೆ.
ಮಹೀಂದ್ರ ಎಸ್‌ಯುವಿ 500 (XUV) ಟಾಪ್ ಎಂಡ್ ವಿ8 ವೆರಿಯಂಟ್‌ಗಳಲ್ಲಿ ಈ ಅಪ್ಲಿಕೇಷನ್ ಲಭ್ಯವಿದ್ದು, ವಾತಾವರಣ ನಿಯಂತ್ರಣ, ಟಿಪಿಎಂಎಸ್ (ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ), ಇಂಧನ ಅಂಕಿಅಂಶ ಸೇರಿದಂತೆ ಇತರ ಮಾಹಿತಿಗಳನ್ನು ಪಡೆಯಬಹುದಾಗಿದೆ.

ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ತಂತ್ರಜ್ಞಾನ, ಸಂಪನ್ಮೂಲ ಹಾಗೂ ಉತ್ಪನ್ನ ಅಭಿವೃದ್ಧಿಯ ಮುಖ್ಯ ಕಾರ್ಯನಿರ್ವಾಣಧಿಕಾರಿಯಾಗಿರುವ ರಾಜನ್ ವಧೆರಾ ಪ್ರಕಾರ, ಮುಂದಿನ ಹಂತಕ್ಕೆ ಬಳಕೆದಾರರ ಅನುಭವವನ್ನು ಪಡೆಯಲು ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ಎಲೆಕ್ಟ್ರಾನಿಕ್ ತಂಡವು ಈ ನೂತನ ಅಪ್ಲಿಕೇಷನ್ ವಿನ್ಯಾಸಗೊಳಿಸಿದೆ ಎಂದಿದ್ದಾರೆ.

ಈ ಸ್ಮಾರ್ಟ್ ಅಪ್ಲಿಕೇಷನ್ ಮಹೀಂದ್ರ ಎಕ್ಸ್‌ಯುವಿ 500 ಚಾಲಕರಿಗೆ ಅನುಕೂಲವಾಗುವಂತೆ ಹೆಚ್ಚಿನ ಸೌಲಭ್ಯ ಹಾಗೂ ಮಾಹಿತಿಯನ್ನು ನೀಡಲಿದೆ. ಇದರಿಂದ ಸುರಕ್ಷತೆಯನ್ನು ಖಾತ್ರಿ ಪಡಿಸುವುದರೊಂದಿಗೆ ಸಂತೋಷದಾಯಕ ಚಾಲನೆಯನ್ನು ನೀಡಲಿದೆ.

ಪ್ರಸ್ತುತ ಎಕ್ಸ್‌ಯುವಿ 500 ಹೊಂದಿರುವ 41,000ರಷ್ಟು ಕಾರು ಮಾಲಿಕರು ಮಹೀಂದ್ರ ಬ್ಲು ಸೆನ್ಸ್ ಅಪ್ಲಿಕೇಷನ್ ತಮ್ಮ ಕಾರಿಗೆ ಅಪ್‌ಗ್ರೇಡ್ ಮಾಡಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ತಮ್ಮ ಸಮೀಪದ ಡೀಲರ್‌ಶಿಪ್‌ಗೆ ತೆರಳಿದರೆ ಸಾಕು.

ಇದಕ್ಕೂ ಮೊದಲು ಮಹೀಂದ್ರ ಎಕ್ಸ್‌ಯುವಿ500 ಆಂಡ್ರಾಯ್ಡ್ 'ಟೆಲ್ ಟೇಲ್ ಅಪ್ಲಿಕೇಷನ್' ಸೇವೆಯೊದಗಿಸಿತ್ತು. ಇದನ್ನು 7000ದಷ್ಟು ಎಕ್ಸ್‌ಯುವಿ500 ಬಳಕೆದಾರರು ಬಳಸಿಕೊಂಡಿದ್ದರು. ಇದರಂತೆ ಎಕ್ಸ್‌ಯುವಿ 500 ಕ್ಲಸ್ಟರ್ ಬಗ್ಗೆ ಜಸ್ಟ್ ಒಂದು ಕ್ಲಿಕ್‌ನಲ್ಲಿ ಮಾಹಿತಿ ಪಡೆಯಬಹುದಾಗಿತ್ತು. ಇದರಿಂದ ಇಂಧನ ಬಳಕೆ ಬಗ್ಗೆ ಹೆಚ್ಚಿನ ನಿಗಾವಹಿಸಬಹುದಾಗಿತ್ತು. ಈ ಅಪ್ಲಿಕೇಷನ್ ಕೂಡಾ ಡೌನ್‌ಲೋಡ್ ಮಾಡಬಹುದಾಗಿದೆ.

ಮಹೀಂದ್ರ ಎಕ್ಸ್‌ಯುವಿ 500 ಗ್ರಾಹಕರು ಈ ಕೆಳಗೆ ಕೊಡಲಾದ ಲಿಂಕ್ ಮೂಲಕ ಅಪ್ಲಿಕೇಷನ್ ಡೌನ್‌ಲೋಡ್ ಮಾಡಬಹುದಾಗಿದೆ.


Click it and Unblock the Notifications








