ಮಹೀಂದ್ರ ವೆರಿಟೊ ಸಣ್ಣಕಾರು ಬರುತ್ತಂತೆ!
"ದೇಶದ ವಾಹನ ಮಾರುಕಟ್ಟೆಯಲ್ಲಿ ಹೆಚ್ಚು ಪ್ರತಿಸ್ಪರ್ಧೆಯಿರುವ ಸಣ್ಣಕಾರು ಸೆಗ್ಮೆಂಟಿಗೆ ಪ್ರವೇಶಿಸುವ ಇಂಗಿತವನ್ನು ಮಹೀಂದ್ರ ಸಿಇಒ ಪ್ರವೀಣ್ ಶಾ ಇತ್ತೀಚೆಗೆ ವ್ಯಕ್ತಪಡಿಸಿದ್ದಾರೆ. ವೆರಿಟೊ ಹ್ಯಾಚ್‌ಬ್ಯಾಕ್ ಕಾರು ಪರಿಚಯಿಸುವುದನ್ನು ಅವರು ಖಚಿತಪಡಿಸಿದ್ದಾರೆ.
ಇದೀಗ ದೇಶದಲ್ಲಿ ಮಹೀಂದ್ರ ಕಾರುಗಳೆಲ್ಲವೂ ಬೇಡಿಕೆಯಲ್ಲಿವೆ. ಇದೀಗ ಹೆಚ್ಚು ಸ್ಪರ್ಧೆಯಿರುವ ಸಣ್ಣಕಾರು ಸೆಗ್ಮೆಂಟಿನಲ್ಲಿ ಕಂಪನಿಯು ಯಾವ ಮ್ಯಾಜಿಕ್ ಮಾಡಲಿದೆ ಎನ್ನುವುದು ಕುತೂಹಲಕರ. ವೆರಿಟೊ ಹ್ಯಾಚ್‌ಬ್ಯಾಕ್ ಕಾರಿಗೆ ಬೇಡಿಕೆಯಿರುವುದು ಅರಿವಾದರೆ ಖಂಡಿತವಾಗಿಯೂ ಸಣ್ಣಕಾರು ಪರಿಚಯಿಸಲಿದ್ದೇವೆ ಎಂದು ಶಾ ಸ್ಪಷ್ಟಪಡಿಸಿದ್ದಾರೆ.
ಯಾವುದಾದರೂ ಕಾರಿನ ಪ್ಲಾಟ್‌ಫಾರ್ಮ್ ಆಧಾರವಾಗಿಟ್ಟುಕೊಂಡು ಹೊಸ ಕಾರು ಅಭಿವೃದ್ಧಿಪಡಿಸುವುದು ಕಂಪನಿಗಳಿಗೆ ಸುಲಭ. ಇದು ಕಡಿಮೆ ವೆಚ್ಚದಾಯಕ ಕೂಡ. ಹೊಸ ಪ್ಲಾಟ್‌ಫಾರ್ಮ್ ಅಭಿವೃದ್ಧಿಪಡಿಸಲು ಹೆಚ್ಚು ಸಮಯ, ಹಣವಿನಿಯೋಗಿಸುವ ಅವಶ್ಯಕತೆಯೂ ಇಲ್ಲ.
ಕಂಪನಿಯು ಇತ್ತೀಚೆಗೆ ಪರಿಚಯಿಸಿದ ವೆರಿಟೊ ಬೇಸ್ ಪೆಟ್ರೋಲ್ ಆವೃತ್ತಿ ದರ 5.27 ಲಕ್ಷ ರು. ಮತ್ತು ಬೇಸ್ ಡೀಸೆಲ್ ಆವೃತ್ತಿ ದರ 6.26 ಲಕ್ಷ ರುಪಾಯಿ. ಇದು ಎರಡು ಪೆಟ್ರೋಲ್ ಮತ್ತು ಮೂರು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಸೇರಿದಂತೆ ಒಟ್ಟು ಐದು ಆವೃತ್ತಿಗಳಲ್ಲಿ ದೊರಕುತ್ತಿದೆ.


Click it and Unblock the Notifications









