ಮಹೀಂದ್ರ ವೆರಿಟೊ ಸಣ್ಣ ಸೆಡಾನ್ ಬರುತ್ತೋ? ಇಲ್ವೋ?

ಇತ್ತೀಚೆಗೆ ಮಹೀಂದ್ರ ಕಂಪನಿಯು ವೆರಿಟೊ ಸೆಡಾನ್ ಕಾರಿನ ಪರಿಷ್ಕೃತ ಆವೃತ್ತಿಯನ್ನು ಪರಿಚಯಿಸಿತ್ತು. ಇದೀಗ ಬಂದ ಸುದ್ದಿಯ ಪ್ರಕಾರ ಮಹೀಂದ್ರ ಕಂಪನಿಯು ಕಡಿಮೆ ದರದ ಸಣ್ಣ ವೆರಿಟೊ ಸೆಡಾನ್ ಆವೃತ್ತಿಯನ್ನು ಪರಿಚಯಿಸಲು ಯೋಜಿಸಿದೆಯಂತೆ. ಈ ಕಾರು ಮುಂದಿನ ವರ್ಷದ ಆರಂಭದಲ್ಲಿ ರಸ್ತೆಗಿಳಿಯುವ ನಿರೀಕ್ಷೆಯಿದೆ.

ನೂತನ ವೆರಿಟೊ ಕಾಂಪ್ಯಾಕ್ಟ್ ಸೆಡಾನ್ ಕಾರು ಸ್ವಿಫ್ಟ್ ಡಿಜೈರ್ ಸಣ್ಣ ಸೆಡಾನಿಗಿಂತ ಕೆಳಗಿನ ಶ್ರೇಣಿಯಲ್ಲಿರುವ ನಿರೀಕ್ಷೆಯಿದೆ. ಈ ಕಾರು ನೇರವಾಗಿ ಟಾಟಾ ಇಂಡಿಗೊ ಇಸಿಎಸ್ ಗೆ ನೇರ ಸ್ಪರ್ಧೆ ಒಡ್ಡಲಿದೆ ಎಂದು ಇಂಡಿಯನ್ ಕಾರ್ ಬೈಕ್ಸ್ ಸ್ನೇಹಿತರು ಹೇಳಿದ್ದಾರೆ. ಪ್ರಾಯಶಃ ನೂತನ ವೆರಿಟೊ ಉದ್ದ ನಾಲ್ಕುಮೀಟರುಗಳಿಗಿಂತ ಕಡಿಮೆ ಇರಲಿದೆ. ಇದರಿಂದ ಕಂಪನಿಗೆ ಸುಂಕ ಉಳಿತಾಯವೂ ಮಾಡಬಹುದಾಗಿದೆ.

ಮಹೀಂದ್ರ ಕಂಪನಿಯು ಇತ್ತೀಚೆಗೆ ಹೊಸ ವೆರಿಟೊ ಆವೃತ್ತಿ ಪರಿಚಯಿಸಿತ್ತು. 2012ರ ನೂತನ ಮಹೀಂದ್ರ ವೆರಿಟೊ ಬೇಸ್ ಪೆಟ್ರೋಲ್ ಆವೃತ್ತಿ ದರ 5.27 ಲಕ್ಷ ರು. ಮತ್ತು ಬೇಸ್ ಡೀಸೆಲ್ ಆವೃತ್ತಿ ದರ 6.26 ಲಕ್ಷ ರುಪಾಯಿ. ಇದು ಎರಡು ಪೆಟ್ರೋಲ್ ಮತ್ತು ಮೂರು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಸೇರಿದಂತೆ ಒಟ್ಟು ಐದು ಆವೃತ್ತಿಗಳಲ್ಲಿ ದೊರಕುತ್ತದೆ.

ಲೊಗಾನ್ ಹೆಸರಿನಲ್ಲಿ ಈ ಕಾರನ್ನು ಈ ಹಿಂದೆ ಮಾರಾಟ ಮಾಡಲಾಗುತ್ತಿತ್ತು. ಆದರೆ ಮಹೀಂದ್ರ ಮತ್ತು ರೆನೊ ಜಂಟಿ ಉದ್ಯಮ ಕೊನೆಗೊಂಡ ನಂತರ ಮಹೀಂದ್ರ ಕಂಪನಿಯು ಈ ಕಾರಿಗೆ ವೆರಿಟೊ ಎಂದು ಮರುನಾಮಕರಣ ಮಾಡಿತ್ತು.

ಹಳೆಯ ವೆರಿಟೊ ಆವೃತ್ತಿಗೆ ಹೋಲಿಸಿದರೆ ಇತ್ತೀಚೆಗೆ ರಸ್ತೆಗಿಳಿದ ನೂತನ ವೆರಿಟೊ ಕಾರಿನ ಗಾತ್ರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ ಮುಂಭಾಗದ ವಿನ್ಯಾಸ ಮತ್ತು ಹೆಡ್ ಲ್ಯಾಂಪ್ ವಿನ್ಯಾಸ ಬದಲಾವಣೆಯಾಗಿದೆ. ಡೀಸೆಲ್ ವೆರಿಟೊ ಆವೃತ್ತಿ ಪ್ರತಿಲೀಟರಿಗೆ ಸುಮಾರು 21.03 ಕಿ.ಮೀ. ಮೈಲೇಜ್ ನೀಡುತ್ತದೆ.

More from DriveSpark

Article Published On: Monday, August 20, 2012, 16:11 [IST]
English summary
Mahindra and Mahindra planning to launch new small Verito sedan Next Year. Company recently launched facelifted Verito.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+