ವೆರಿಟೊ ರಿವ್ಯೂ: ಪ್ಲಾಸ್ಟಿಕ್ ಸರ್ಜರಿ ಮಾಡಿಕೊಂಡ ಸುಂದರಿ
ಹಳೆಯ ವೆರಿಟೊ ಕಾರಿನ ಹಿಂಭಾಗದ ಬಾಕ್ಸ್ ವಿನ್ಯಾಸ ಹೆಚ್ಚಿನ ಜನರಿಗೆ ಇಷ್ಟವಾಗಿರಲಿಲ್ಲ. ಹೊಸ ಆವೃತ್ತಿಯಲ್ಲೂ ಬಾಕ್ಸಿ ವಿನ್ಯಾಸ ಮುಂದುವರೆದಿದೆ. ಆದರೆ ಕಾರಿನ ಹಿಂಭಾಗ ಮತ್ತು ಮುಂಭಾಗದ ಮರುವಿನ್ಯಾಸದಿಂದಾಗಿ ಹೊಸ ವೆರಿಟೊ ಸಾಫ್ಟ್ ಆಗಿ ಕಣ್ಮನಸೆಳೆಯುತ್ತದೆ.
ಹೊಸ ಮಲ್ಟಿಪಲ್ ಹೆಡ್ ಲ್ಯಾಂಪ್, ಹೊಸ ಕ್ರೋಮ್ ಗ್ರಿಲ್ಲುಗಳಿಂದ ವೆರಿಟೊ ವಿನ್ಯಾಸ ಆಕರ್ಷಕವಾಗಿದೆ. ಹೊಸ ಬಂಪರ್ ವಿನ್ಯಾಸದಿಂದ ವೆರಿಟೊ ಭರ್ಜರಿಯಾಗಿ ಕಾಣುತ್ತದೆ. ಡ್ಯೂಯಲ್ ಟೋನ್ ವಿನ್ಯಾಸದಿಂದ ವೆರಿಟೊ ಇಂಟಿರಿಯರ್ ಶ್ರೀಮಂತವಾಗಿದೆ.
ನೂತನ ವೆರಿಟೊ ಕಾರಿನ ಏರ್ ಕಂಡಿಷನ್ ಅತ್ಯಾಧುನಿಕವಾಗಿದೆ. ವೆರಿಟೊ ಕಾರಿನೊಳಗಿನ ಸ್ಥಳಾವಕಾಶ ಸೂಪರ್. ಆರಡಿ ಉದ್ದದ್ದವರೂ ಆರಾಮವಾಗಿ ಕುಳಿತುಕೊಳ್ಳಬಹುದು. ಆದ್ರೆ ಡ್ರೈವರ್ ಸೀಟ್ ಎತ್ತರ ಮಾಡಿಕೊಳ್ಳಲು ಸಾಧ್ಯವಿಲ್ಲ. ಸ್ಟಿಯರಿಂಗ್ ಹೊಂದಾಣಿಕೆ ಮಾಡಲೂ ಸಾಧ್ಯವಿಲ್ಲ.
ಮಹೀಂದ್ರ ವೆರಿಟೊ 1.4 ಲೀಟರಿನ ಪೆಟ್ರೋಲ್ ಮತ್ತು 1.5 ಲೀಟರಿನ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ದೊರಕುತ್ತದೆ. ನಾವು ಪರಿಶೀಲಿಸಿದ ಆವೃತ್ತಿ ಡಿ6 ಆವೃತ್ತಿಯಾಗಿದೆ. ಇದು 1461ಸಿಸಿಯ ಡಿಸಿಐ ಮೋಟರ್ ಹೊಂದಿದೆ. ಈ ಕಾರಲ್ಲಿ ಟ್ರಾಫಿಕ್ನಲ್ಲೂ ಸರಾಗವಾಗಿ ಚಾಲನೆ ಮಾಡಬಹುದಾಗಿದೆ.
ಹೊಸ ಮಹೀಂದ್ರ ವೆರಿಟೊ ಕಾರಿನಲ್ಲಿ ಸಿಡಿ/ಎಂಪಿ3 ಪ್ಲೇಯರ್, ಯುಎಸ್ ಬಿ ಸ್ಲಾಟ್, ಬೂಟ್ ಓಪನರ್, ಬಾಟಲ್ ಹೋಲ್ಡರ್, ಮೊಬೈಲ್ ಹೋಲ್ಡರ್, ಸನ್ ವಿಷರ್, ಎಲ್ ಸಿಡಿ ಡಿಸ್ ಪ್ಲೇ, ರಿಯರ್ ಡಿಫಾಗರ್, ರಿಮೊಟ್ ಡೋರ್ ಲಾಕ್, ರಿವರ್ಸ್ ಲೈಟ್, ಸೆಂಟ್ರಲ್ ಲಾಕಿಂಗ್ ಇತ್ಯಾದಿ ಹಲವು ಫೀಚರುಗಳಿವೆ.
ಸುರಕ್ಷಿತ ಸವಾರಿಗಾಗಿ 2012ರ ವೆರಿಟೊ ಕಾರಲ್ಲಿ ಹಲವು ಗ್ಯಾಡ್ಜೆಟುಗಳಿವೆ. ಚಾಲಕನಿಗೆ ಏರ್ ಬ್ಯಾಗ್, ಹೊಂದಾಣಿಕೆ ಮಾಡಿಕೊಳ್ಳಬಹುದಾದ ಮುಂಭಾಗದ ಸೀಟ್ ಬೆಲ್ಟ್, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್, ಕಳ್ಳರಿಂದ ರಕ್ಷಿಸಿಕೊಳ್ಳಲು ಆ್ಯಂಟಿ ಥೆಫ್ಟ್ ಎಂಜಿನ್ ಇಮೊಬಿಲೈಝರ್, ಎಲೆಕ್ಟ್ರಿಕ್ ರಿಯರ್ ವಿಂಡೊ ಚೈಲ್ಡ್ ಲಾಕ್, ಹಾಲೊಜೆನ್ ಹೆಡ್ ಲ್ಯಾಂಪ್, ಎಬಿಎಸ್ ಇತ್ಯಾದಿ ಸುರಕ್ಷತೆಯ ಫೀಚರುಗಳಿವೆ.
ನೂತನ ವೆರಿಟೊ ಕಾರಿನ ಮೈಲೇಜ್ ಆಕರ್ಷಕವಾಗಿದೆ. ವೆರಿಟೊ ಪೆಟ್ರೋಲ್ ಆವೃತ್ತಿಯು ಪ್ರತಿಲೀಟರಿಗೆ ಸುಮಾರು 13.87 ಕಿ.ಮೀ. ಮೈಲೇಜ್ ನೀಡುತ್ತದೆ. ಡೀಸೆಲ್ ಆವೃತ್ತಿಯು ಪ್ರತಿಲೀಟರಿಗೆ 21.03 ಕಿ.ಮೀ. ಮೈಲೇಜ್ ನೀಡುತ್ತದೆ. ಈ ಕಾರಿನ ಎಕ್ಸ್ ಶೋರೂಂ ದರ 5.21 ಲಕ್ಷ ರು.ನಿಂದ 7.14 ಲಕ್ಷ ರುಪಾಯಿ.


Click it and Unblock the Notifications









