ಮಹೀಂದ್ರ XUV 500 ಗೆದ್ದ 7.200 ಅದೃಷ್ಟಶಾಲಿಗಳು

ಕೇವಲ 7,200 ಗ್ರಾಹಕರಿಗೆ ಮಾತ್ರ ಮಹೀಂದ್ರ XUV 500 ಬುಕ್ಕಿಂಗ್ ಮಾಡುವ ಅವಕಾಶವನ್ನು ಕಂಪನಿ ಒದಗಿಸಿತ್ತು. 7,200 ಜನರನ್ನು ಲಾಟರಿ ಡ್ರಾದ ಮೂಲಕ ಆಯ್ಕೆ ಮಾಡುವುದಾಗಿ ಈ ಮೊದಲೇ ತಿಳಿಸಲಾಗಿತ್ತು.
ಅದರಂತೆ ಒಟ್ಟು 25 ಸಾವಿರ ಬುಕ್ಕಿಂಗ್ ಅಪ್ಲಿಕೇಷನ್ ಗಳಲ್ಲಿ 7,200 ಜನರನ್ನು ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಂಪನಿ ಆಯ್ಕೆ ಮಾಡಿತ್ತು. ಉಳಿದ ಗ್ರಾಹಕರ ಬುಕ್ಕಿಂಗ್ ಶುಲ್ಕ 80 ಸಾವಿರ ರುಪಾಯಿಯನ್ನು ಕಂಪನಿ ವಾಪಸ್ಸು ಮಾಡುತ್ತಿದೆ. ( ಈ ಹಣಕ್ಕೆ ದೊರಕಿದ ಬಡ್ಡಿ ದರ ಕಂಪನಿಗೆ ಲಾಭ!)
ಕಂಪನಿಯು ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಮುಂಬೈ, ಪುಣೆ ಸೇರಿದಂತೆ ದೇಶದ 19 ನಗರಗಳಲ್ಲಿ XUV500 ಬುಕ್ಕಿಂಗ್ ಪುನಾರಂಭಿಸಿತ್ತು. ಇದಕ್ಕೂ ಮೊದಲು ಕೇವಲ 4 ರಾಜ್ಯಗಳಲ್ಲಿ ಪ್ರಮುಖ ಸಿಟಿಗಳಲ್ಲಿ ಮಾತ್ರ ಬುಕ್ಕಿಂಗ್ ಮಾಡುವ ಅವಕಾಶ ಒದಗಿಸಲಾಗಿತ್ತು.


Click it and Unblock the Notifications








