ವಾಹನ ಕಂಪನಿ ಮಹೀಂದ್ರದ ಮೊದಲ ವಿಮಾನ

ದೇಶದ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ವಹಿವಾಟು ಕೇವಲ ಕಾರು ಉತ್ಪಾದನೆಗೆ ಸೀಮಿತವಾಗಿಲ್ಲ. ಇದೀಗ ಕಂಪನಿಯು ದೈರ್ಯ ಮಾಡಿ ಆಕಾಶಕ್ಕೆ ನೆಗೆದಿದೆ. ಅಂದರೆ, ಮಹೀಂದ್ರ ಕಂಪನಿಯ ಆಸ್ಟ್ರೇಲಿಯಾ ಅಂಗಸಂಸ್ಥೆ ಮಹೀಂದ್ರ ಗಿಪ್ಸ್ಏರೋ ಕಂಪನಿಯು ಸಿಂಗಲ್ ಟರ್ಬೊ ಎಂಜಿನ್ ವಿಮಾನವೊಂದನ್ನು ಅಭಿವೃದ್ಧಿಪಡಿಸಿದೆ.

ಮಹೀಂದ್ರ ಏರೋ ಸ್ಪೇಸ್ ಸಂಸ್ಥೆಯು ಅಭಿವೃದ್ಧಿಪಡಿಸಿದ ನೂತನ ವಿಮಾನದ ಹೆಸರು ಜಿಎ10. ಈ ಹತ್ತು ಸೀಟಿನ ವಿಮಾನವು ವಿಕ್ಟೋರಿಯಾದ ಲಾಟ್ರೊಬ್ ರೀಜನಲ್ ಏರ್‌ಪೋರ್ಟಿನಲ್ಲಿ ಮೊದಲ ಹಾರಾಟವನ್ನು ನಡೆಸಿದೆ. ಈ ವಿಮಾನದಲ್ಲಿ ಟೆಸ್ಟ್ ಪೈಲಟ್ ಟೋನಿ ಮೊರಿಸ್ ಮತ್ತು ಜಿಪ್ಸ್ ಏರೊ ಫ್ಲೈಟ್ ಕಂಪನಿಯ ಟೆಸ್ಟ್ ಎಂಜಿನಿಯರ್ ಜೆರಾರ್ಡ್ ಜೋರ್ಡನ್ ಇದ್ದರು.

ಟೆಸ್ಟ್ ಹಾರಾಟ ಯಶಸ್ವಿಯಾಗಿರುವ ಹಿನ್ನಲೆಯಲ್ಲಿ ನೂತನ ವಿಮಾನಕ್ಕೆ CASA ಸರ್ಟಿಫಿಕೆಟ್ ಪಡೆಯುವ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ನಡೆಯಲಿದೆ. ಮುಂದಿನ ವರ್ಷದ ಅಂತ್ಯದೊಳಗೆ ಕಂಪನಿಯು ಗ್ರಾಹಕರಿಗೆ ಈ ವಿಮಾನ ಮಾರಾಟ ಆರಂಭಿಸುವ ನಿರೀಕ್ಷೆಯಿದೆ.

ಕಂಪನಿಯ ಮೊದಲ ವಿಮಾನ ಹಾರಾಟ ಯಶಸ್ವಿಯಾಗಿರುವುದಕ್ಕೆ ಮಹೀಂದ್ರ ಏರೋಸ್ಪೇಸ್ ಸಿಇಒ ಅರವಿಂದ್ ಮೆಹ್ತಾ ಹರ್ಷ ವ್ಯಕ್ತಪಡಿಸಿದ್ದಾರೆ. "ವೈಮಾನಿಕ ಮಾರುಕಟ್ಟೆಗೆ ಅಗ್ಗದ ಪ್ರಯಾಣಿಕ ವಿಮಾನ ನೀಡುವ ನಮ್ಮ ಕನಸಿಗೆ ಇದು ಪ್ರಮುಖ ಮೈಲುಗಲ್ಲು" ಎಂದು ಅವರು ಹೇಳಿದ್ದಾರೆ.

More from DriveSpark

Article Published On: Tuesday, May 22, 2012, 17:29 [IST]
English summary
Country's leading vehicle maker Mahindra's new small flight has successfully completed its first flight recently. The GA 10 is a 10 seat, multi role aircraft based on the very successful GA8 eight seater utility aircraft.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+