ಇಂದು ವೆರಿಟೊ ಆಗಮನ, ತಳಿರುತೋರಣ ಕಟ್ಟೋಣ..
ನೂತನ ವೆರಿಟೊ ಕುರಿತು ಈ ಹಿಂದೆಯೇ ಸಾಕಷ್ಟು ಮಾಹಿತಿಯನ್ನು ನಮ್ಮ ತಂಡವು ಕಲೆ ಹಾಕಿತ್ತು. ಫೇಸ್ ಲಿಫ್ಟ್ ಅಥವಾ ಪರಿಷ್ಕೃತ ವೆರಿಟೊ ಕಾರು ಹಳೆಯ ಆವೃತ್ತಿಗಿಂತ ಸಾಕಷ್ಟು ಬದಲಾವಣೆ ಕಾಣಲಿದೆ.
ಅಂದ್ರೆ ಹೊಚ್ಚಹೊಸ ಮುಂಭಾಗದ ಗ್ರಿಲ್, ಮರು ವಿನ್ಯಾಸ ಮಾಡಿದ ಹೆಡ್ ಲ್ಯಾಂಪ್ ಇತ್ಯಾದಿಗಳು ಇರಲಿವೆ. ಹೆಡ್ ಲ್ಯಾಂಪಿನಲ್ಲಿ ಮಹೀಂದ್ರ ಎಕ್ಸ್ ಯುವಿ 500 ಕಾರಿನಲ್ಲಿರುವಂತಹ ಎಲ್ ಇಡಿ ಸ್ಟ್ರೀಪ್ ಇರುವ ನಿರೀಕ್ಷೆಯಿದೆ.
ವೆರಿಟೊ ಕಾರಿನ ಹಿಂಭಾಗದ ವಿನ್ಯಾಸವನ್ನೂ ಕಂಪನಿ ಬದಲಾಯಿಸಿದೆ. ನಮ್ಮ ಹೆಚ್ಚಿನ ಓದುಗರು ವೆರಿಟೊ ಹಿಂಭಾಗ ಚೆನ್ನಾಗಿಲ್ಲ, ಬಾಕ್ಸ್ ತರಹ ಇದೆ ಎಂದು ದೂರಿದ್ದರು. ಆದ್ರೆ ಹೊಸದಾಗಿ ಬರುವ ವೆರಿಟೊ ಹಿಂಭಾಗ ಸಾಕಷ್ಟು ಪರಿಷ್ಕರಣೆಗೆ ಒಳಪಟ್ಟಿರಲಿದೆ. ಸುಂದರ ವಿನ್ಯಾಸ ನಿರೀಕ್ಷಿಸಬಹುದು.
ವೆರಿಟೊ ಕಾರಿನ ಒಳವಿನ್ಯಾಸವೂ ಸಾಕಷ್ಟು ಬದಲಾಗಿದೆ ಎಂದು ಉದ್ಯಮ ಮೂಲಗಳು ಖಚಿತಪಡಿಸಿವೆ. ಆದಗ್ಯೂ ಹೆಚ್ಚಿನ ಬದಲಾವಣೆ ನಿರೀಕ್ಷಿಸುವಂತಿಲ್ಲ. ನೂತನ ಮ್ಯೂಸಿಕ್ ಸಿಸ್ಟಮ್ ಅಳವಡಿಸಿರುವ ನಿರೀಕ್ಷೆಯಿದೆ. ಪವರ್ ವಿಂಡೋ ಸ್ವಿಚ್ ಅಳವಡಿಸಿರುವ ಸಾಧ್ಯತೆಯಿದೆ.
ಯುರೋಪ್ ಕಾರುಗಳ ಬಾಕ್ಸಿ ವಿನ್ಯಾಸ ದೇಶದ ಜನರಿಗೆ ಅಷ್ಟೊಂದು ಇಷ್ಟವಾಗಿಲ್ಲವೆನ್ನುವುದು ದಿಟ. ವೆರಿಟೊ ದರ ಕೂಡ ಆಕರ್ಷಕವಾಗಿರುವ ನಿರೀಕ್ಷೆಯಿದೆ. ಪರಿಷ್ಕೃತ ವೆರಿಟೊ ಕಾರಿನ ಕುರಿತು ಹೆಚ್ಚಿನ ಮಾಹಿತಿಗೆ ನಿಮ್ಮ ಕಣ್ಣು ಕನ್ನಡ ಡ್ರೈವ್ ಸ್ಪಾರ್ಕ್ ಮೇಲಿರಲಿ.


Click it and Unblock the Notifications









