ಮಹೀಂದ್ರ ವೆರಿಟೊ ಹ್ಯಾಚ್‌ಬ್ಯಾಕ್ ಬರೋದು ಖಚಿತ

ಮಾರುತಿ ಸುಜುಕಿ ಡಿಜೈರ್ ಕಾರಿಗೆ ಪೈಪೋಟಿ ನೀಡುವಂತಹ ನಾಲ್ಕು ಮೀಟರಿಗಿಂತ ಕಡಿಮೆ ಉದ್ದದ ವೆರಿಟೊ ಸೆಡಾನ್ ಕಾರನ್ನು ಮಹೀಂದ್ರ ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಮಹೀಂದ್ರ ಕಂಪನಿಯು ನೂತನ ಪ್ರಕಟಣೆಯಲ್ಲಿ ಎಲ್ಲರಿಗೂ ಶಾಕ್ ನೀಡಿದೆ.

ವೆರಿಟೊ ಸಣ್ಣಕಾರೊಂದನ್ನುಶೀಘ್ರದಲ್ಲಿ ಪರಿಚಯಿಸುವುದಾಗಿ ಮಹೀಂದ್ರ ಇದೀಗ ಹೇಳಿದೆ. ಪ್ರಸಕ್ತ ತಿಂಗಳ ಸೆಪ್ಟೆಂಬರ್‌ನಲ್ಲಿ ನೂತನ ವೆರಿಟೊ ಕಾರು ಆಗಮಿಸಲಿದೆ.

ಮಹೀಂದ್ರ ಕಂಪನಿಯ ಎಂಟ್ರಿ ಲೆವೆಲ್ ವೆರಿಟೊ ಸೆಡಾನ್ ಕಾರು ಅತ್ಯುತ್ತಮ ಇಂಧನ ದಕ್ಷತೆ ಮತ್ತು ವಿಶಾಲ ಕ್ಯಾಬಿನ್ ಸ್ಥಳಾವಕಾಶದಿಂದ ಜನಮೆಚ್ಚುಗೆ ಪಡೆದಿದೆ. ರೆನೊ ಕಂಪನಿಯೊಂದಿಗೆ ಜಂಟಿ ಉದ್ಯಮ ಸ್ಥಾಪಿಸಿದ ನಂತರ ಮಹೀಂದ್ರ ಕಂಪನಿಯು ರೆನೊ ಲೊಗಾನ್ ಕಾರನ್ನು ವೆರಿಟೊ ಆಗಿ ಮರುವಿನ್ಯಾಸ ಮಾಡಿತ್ತು.

ನೂತನ ವೆರಿಟೊ ಹ್ಯಾಚ್ ಬ್ಯಾಕ್ ಕಾರು ಆಗಮಿಸುವ ಸೂಚನೆಯನ್ನು ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ಮಾರುಕಟ್ಟೆ ಮತ್ತು ಗ್ರಾಹಕ ಸೇವೆ ವಿಭಾಗದ ಹಿರಿಯ ಉಪಾಧ್ಯಕ್ಷರಾದ ಅರುಣ್ ಮಲ್ಹೋತ್ರಾ ನೀಡಿದ್ದಾರೆ. ಕಂಪನಿಯು ನಾಸೀಕ್ ಘಟಕದಲ್ಲಿ ನೂತನ ವೆರಿಟೊ ಕಾರನ್ನು ನಿರ್ಮಿಸಲಿದೆ ಎಂದು ಅವರು ಹೇಳಿದ್ದಾರೆ.

ನೂತನ ವೆರಿಟೊ ಸಣ್ಣಕಾರಾಗಿದ್ದರೂ ಹೆಚ್ಚು ಇಂಟಿರಿಯರ್ ಸ್ಥಳಾವಕಾಶ ಮತ್ತು ಆರಾಮದಾಯಕತೆಯ ಫೀಚರುಗಳನ್ನು ಹೊಂದಿರಲಿದೆ. ನೂತನ ವೆರಿಟೊ ಹ್ಯಾಚ್ ಬ್ಯಾಕ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕಲಿದೆ.

ನೂತನ ವೆರಿಟೊ ಹ್ಯಾಚ್ ಬ್ಯಾಕ್ ಕಾರಿನ ವಿನ್ಯಾಸದ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ವೆರಿಟೊ ಹ್ಯಾಚ್ ಬ್ಯಾಕ್ ಕಾರಿನ ಆರಂಭಿಕ ದರ ಸುಮಾರು 4 ಲಕ್ಷ ರುಪಾಯಿ ಇರಲಿದೆ. ಈ ಸಣ್ಣ ವೆರಿಟೊಟಾಟಾ ಇಂಡಿಕಾ, ಟೊಯೊಟಾ ಎಟಿಯೋಸ್ ಲಿವಾ ಮತ್ತು ನಿಸ್ಸಾನ್ ಮೈಕ್ರಾ ಕಾರುಗಳಿಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ.

More from DriveSpark

Article Published On: Wednesday, May 30, 2012, 10:46 [IST]
English summary
Earlier there were reports that Mahindra is developing a sub 4 metre Verito sedan on the lines of Maruti Suzuki Swift Dzire. But, the latest announcement from the country's leading SUV maker has shocked all. Mahindra has confirmed plans to launch a hatchback based on the Verito sedan in September this year, which is just a few months away.
 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+