ಮೂರುವರೆ ಲಕ್ಷ ರು.ಗೆ ಹೊಸ ಮಹೀಂದ್ರ ವ್ಯಾನ್

ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿ ಮಹೀಂದ್ರ ಆಂಡ್ ಮಹೀಂದ್ರ(ಎಂಆಂಡ್ಎಂ) ನೂತನ ಮ್ಯಾಕ್ಸಿಮೊ ಮಿನಿ ವ್ಯಾನ್ ಪರಿಚಯಿಸಿದೆ. ಪರಿಷ್ಕೃತ ಮಿನಿ ವ್ಯಾನ್ ದರ 3.7 ಲಕ್ಷ ರುಪಾಯಿ. ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಆಮ್ನಿ ಮತ್ತು ಎಕೊಗಳಿಗೆ ನೂತನ ಮ್ಯಾಕ್ಸಿಮೊ ಮಿನಿ ವ್ಯಾನ್ ಪೈಪೋಟಿ ನೀಡಲಿದೆ.

ಅಂದಹಾಗೆ ಮಹೀಮದ್ರ ಕಂಪನಿಯು ಈಗ ಅಹಮಾದಬಾದ್ ನಗರದಲ್ಲಿ ನೂತನ ಮ್ಯಾಕ್ಸಿಮೊ ಮಿನಿ ವ್ಯಾನ್ ಪರಿಚಯಿಸಿದೆ. ಶೀಘ್ರದಲ್ಲಿ ರಾಜ್ಯಕ್ಕೂ ಆಗಮಿಸುವ ನಿರೀಕ್ಷೆಯಿದೆ. ಮಿನಿ ಟ್ರಕ್ ಮಾರುಕಟ್ಟೆಯಲ್ಲಿ ತನ್ನ ಪಾಲು ಹೆಚ್ಚಿಸಿಕೊಳ್ಳಲು ಕಂಪನಿಗೆ ನೂತನ ಮ್ಯಾಕ್ಸಿಮೊ ನೆರವಾಗುವ ನಿರೀಕ್ಷೆಯಿದೆ. ಕಂಪನಿಯು ಪ್ರಸಕ್ತ ಮಾರುಕಟ್ಟೆ ಪಾಲು ಶೇಕಡ 20-25ರಷ್ಟಿದೆ.

ನೂತನ ಮ್ಯಾಕ್ಸಿಮೊ ಮಿನಿ ವ್ಯಾನ್ ಇತರ ಎಲ್ಲಾ ಮಿನಿವ್ಯಾನ್ ಗಳಿಗಿಂತ ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿದೆ ಎಂದು ಕಂಪನಿ ಪ್ರತಿಪಾದಿಸಿದೆ. ಅಂದರೆ ಆಮ್ನಿಗಿಂತ ಶೇಕಡ 30-40ರಷ್ಟು ಹೆಚ್ಚು ಮೈಲೇಜ್ ಹೊಂದಿದೆಯಂತೆ. ನೂತನ ಮ್ಯಾಕ್ಸಿಮೊ ಮಿನಿ ವ್ಯಾನ್ ಪ್ರತಿಲೀಟರ್ ಡೀಸೆಲಿಗೆ 18-20 ಕಿ.ಮೀ. ಮೈಲೇಜ್ ನೀಡುತ್ತದೆ. ಅಂದಹಾಗೆ ನೂತನ ಮ್ಯಾಕ್ಸಿಮೊ ಸಿ2 ಕಾಮನ್ ರೇಲ್ ಡೀಸೆಲ್ ಎಂಜಿನ್ ಹೊಂದಿದೆ.

"ನೂತನ ಡೀಸೆಲ್ ಎಂಜಿನ್ ಮೂಲಕ, ಸ್ಟೈಲಿಶ್, ವಿಶಾಲ ಸ್ಥಳಾವಕಾಶ, ಆರಾಮದಾಯಕವಾದ ಮತ್ತು ಅತ್ಯುತ್ತಮ ಮೈಲೇಜನ್ನು ನೂತನ ಮ್ಯಾಕ್ಸಿಮೊ ಮಿನಿ ವ್ಯಾನ್ ಮೂಲಕ ಗ್ರಾಹಕರಿಗೆ ನೀಡುತ್ತಿದ್ದೇವೆ" ಎಂದು ಮಹೀಮದ್ರ ಕಂಪನಿಯ ಮಾರಾಟ ವಿಭಾಗದ ಉಪಾಧ್ಯಕ್ಷರಾದ ಅರುಣ್ ಮಲ್ಹೋತ್ರಾ ಹೇಳಿದ್ದಾರೆ.

ಈಗ ಮಿನಿವ್ಯಾನ್ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಪ್ರಾಬಲ್ಯ ಪಡೆದಿದೆ. ಕಂಪನಿಯು ಪ್ರತಿತಿಂಗಳೂ ಸುಮಾರು 12 ಸಾವಿರದಷ್ಟು ಆಮ್ನಿ ಮತ್ತು ಎಕೊ ಮಾರಾಟ ಮಾಡುತ್ತಿದೆ. ಟಾಟಾ ಮೋಟರ್ಸ್ ಕಂಪನಿಯು ಪ್ರತಿತಿಂಗಳು ಸುಮಾರು 4,500ರಿಂದ 6 ಸಾವಿರ ಯುನಿಟ್ ನಷ್ಟು ಮ್ಯಾಜಿಕ್ ಮತ್ತು ಮ್ಯಾಜಿಕ್ ಐರಿಷ್ ಮಾರಾಟ ಮಾಡುತ್ತಿದೆ. ಮಹೀಂದ್ರ ಕಂಪನಿಯ ಹಳೆಯ ಮ್ಯಾಕ್ಸಿಮೊ ಆವೃತ್ತಿಯು ಪ್ರತಿತಿಂಗಳು ಹೆಚ್ಚೆಂದರೆ ಸುಮಾರು 2,500ರಷ್ಟು ಮಾರಾಟವಾಗುತ್ತಿದೆ.

More from DriveSpark

Article Published On: Saturday, July 7, 2012, 14:10 [IST]
English summary
Mahindra and Mahindra Launched Maxximo Mini Van At Rs. 3.7 Lakh. Mahindra Maxximo Mini Van fuel economy of 18-20kmpl. Maxximo Mini Van to offer tough competition to Maruti Suzuki’s Omni and Eeco,Tata Motors Magic and Magic Iris.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+