ನೂತನ ಬೊಲೆರೊ ಮ್ಯಾಕ್ಸಿ ರಸ್ತೆಗೆ, ಏನ್ ವಿಶೇಷ?

ಬೆಂಗಳೂರು, ಜು 05: ದೇಶದ ಎಸ್ ಯುವಿ ತಜ್ಞ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ತನ್ನ ಪಿಕಪ್ ಸೆಗ್ಮೆಂಟಿಗೆ ನೂತನ ಬೊಲೆರೊ ಮ್ಯಾಕ್ಸಿ ಟ್ರಕ್ ಪರಿಚಯಿಸಿದೆ. ಮ್ಯಾಕ್ಸಿ ಟ್ರಕ್ ಸ್ಟಾಂಡರ್ಡ್ ಆವೃತ್ತಿಗೆ ಕರ್ನಾಟಕ ಎಕ್ಸ್ ಶೋರೂಂ ದರ 4.08 ಲಕ್ಷ ರುಪಾಯಿ ಆಗಿದೆ.

ಸ್ಟೈಲ್: ಪಿಕಪ್ ಸೆಗ್ಮೆಂಟಿಗೆ ಬಂದಿರುವ ಆಕರ್ಷಕ ಮ್ಯಾಕ್ಸಿ ಟ್ರಕ್ ಇದಾಗಿದೆ. ಇದರ ನೂತನ ಹೆಡ್ ಲ್ಯಾಂಪ್, ಆಕರ್ಷಕ ಅಂಚುಗಳು, ಸುಂದರವಾಗಿ ವಿನ್ಯಾಸ ಮಾಡಿರುವ ಡ್ಯಾಷ್ ಬೋರ್ಡ್, ವಿಶಾಲವಾದ ಕ್ಯಾಬಿನ್ ಸ್ಥಳಾವಕಾಶ ಸೇರಿದಂತೆ ಹಲವು ಅಂಶಗಳು ಇದರ ಅಂದವನ್ನು ಹೆಚ್ಚಿಸಿದೆ.

ಪವರ್: ಬೊಲೆರೊ ಮ್ಯಾಕ್ಸಿ ಟ್ರಕ್ ನಲ್ಲಿ ಶಕ್ತಿಶಾಲಿ 2,523 ಸಿಸಿಯ ಎಂಡಿಐ ಎಂಜಿನ್ ಇದೆ. ಇದು 62 ಅಶ್ವಶಕ್ತಿ ಮತ್ತು 183.5 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಟೈರ್ ಹೆಚ್ಚು ಸದೃಡತೆ ನೀಡುವುದರಿಂದ ಯಾವುದೇ ಭೂಭಾಗದಲ್ಲೂ ಸಮರ್ಥವಾಗಿ ಪ್ರಯಾಣಿಸಲು ಅನುಕೂಲವಾಗಿದೆ. ಹೆವಿ ಲೋಡ್ ಸಾಗಾಣೆಗೆ ಇದು ಸೂಕ್ತವಾಗಿದೆ.

ಸುರಕ್ಷತೆ: ಇದರಲ್ಲಿ ಹಲವು ಸುರಕ್ಷತೆಯ ಫೀಚರುಗಳಿವೆ. ಮುಂಭಾಗದ ವಿನ್ಯಾಸ, ಗಟ್ಟಿಮುಟ್ಟಾದ ಬಾಡಿ ಮತ್ತು ಚಾಸಿಯಿಂದಾಗಿ ಯಾವುದೇ ಸಮಸ್ಯೆಯಿಲ್ಲದೇ ಡ್ರೈವಿಂಗ್ ಮಾಡಬಹುದಾಗಿದೆ. ಇದರ ಬೃಹತ್ ವೀಲ್ ಬೇಸ್ ಹೆಚ್ಚು ಸದೃಢತೆ ಮತ್ತು ಸುರಕ್ಷತೆಯ ಪ್ರಯಾಣಕ್ಕೆ ನೆರವಾಗುತ್ತದೆ.

ಮಹೀಂದ್ರ ಕಂಪನಿಯ ಎಲ್ಲಾ ಸರ್ವಿಸ್ ಕೇಂದ್ರಗಳಲ್ಲೂ ಬೊಲೆರೊ ಮ್ಯಾಕ್ಸಿ ಟ್ರಕ್ ಬಿಡಿಭಾಗಗಳು ದೊರಕುತ್ತವೆ. ಕಂಪನಿಯು ಇದರ ಎಂಜಿನ್ ಮತ್ತು ಗೇರ್ ಬಾಕ್ಸಿಗೆ ಗ್ರಾಹಕರಿಗೆ ಮೂರು ವರ್ಷದ ವಾರೆಂಟಿ ನೀಡಿದೆ.

More from DriveSpark

Article Published On: Thursday, July 5, 2012, 10:07 [IST]
English summary
Mahindra announced the launch of the ‘New Bolero Maxi Truck’, an addition to its ‘pick-up’ portfolio. The Bolero Maxi Truck has undergone a makeover to become more stylish, and delivers a superior driving experience. The Bolero Maxi Truck is competitively priced at Rs. 4.08 lacs (ex-showroom BS3 Karnataka, Standard version).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+