ಡುಕಾಟಿ ಖರೀದಿಗೆ ನೋ ಇಂಟ್ರೆಸ್ಟ್ ಎಂದ ಮಹೀಂದ್ರ

ಇಟಲಿಯ ಎಂಜಿನಿಯರಿಂಗ್ ಡಿಸೈನ್ ಕಂಪನಿಯ ಶೇಕಡ 70ರಷ್ಟು ಪಾಲನ್ನು ಮಾರಾಟ ಮಾಡಲು ಕೂಡ ಮಹೀಂದ್ರ ಉತ್ಸುಕವಾಗಿದೆ. ಈಗಾಗಲೇ ಎಂಜಿನಿಯರಿಂಗ್ ವಿಭಾಗದಲ್ಲಿ ಇತರ ಕಂಪನಿಗಳು ಪ್ರಾಬಲ್ಯ ಪಡೆದಿರುವುದು ಮತ್ತು ಕಂಪನಿಗೆ ಬಿಸಿನೆಸ್ ಅವಕಾಶ ಕಡಿಮೆಯಿರುವುದರಿಂದ ಪಾಲು ಮಾರಾಟ ಮಾಡುವುದಾಗಿ ಕಂಪನಿ ಹೇಳಿದೆ.
ಸುಮಾರು 160 ಕೋಟಿ ಡಾಲರಿಗೆ ಡುಕಾಟಿ ಮಾರಾಟವಾಗುವ ನಿರೀಕ್ಷೆಯನ್ನು ಇನ್ವೆಸ್ಟ್ ಇಂಡಸ್ಟ್ರಿಯಲ್ ಹೋಲ್ಡಿಂಗ್ಸ್ ಸ್ಪಾ ವ್ಯಕ್ತಪಡಿಸಿತ್ತು.
ಸೂಪರ್ ಬೈಕ್ ಕಂಪನಿ ಡುಕಾಟಿಗೆ ಸುಮಾರು 75 ವರ್ಷಗಳ ಇತಿಹಾಸವಿದೆ. ಇದು 1946ರಲ್ಲಿ ಬೈಕ್ ಉತ್ಪಾದಿಸಲು ಆರಂಭಿಸಿತ್ತು. ಅಲ್ಲಿಂದ ಇಲ್ಲಿವರೆಗೆ ಕಂಪನಿ ತಿರುಗಿ ನೋಡಿದ್ದೇ ಇಲ್ಲ. ಇಲ್ಲಿವರೆಗೆ ಕಂಪನಿಯ ಮಾಲಿಕತ್ವವು ಕೈಯಿಂದ ಕೈಗೆ ಬದಲಾಗುತ್ತ ಬಂದಿದೆ. 2005ರಲ್ಲಿ ಡುಕಾಟಿಯನ್ನು ಇನ್ವೆಸ್ಟ್ ಇಂಡಸ್ಟ್ರಿಯಲ್ ಹೋಲ್ಡಿಂಗ್ಸ್ ಸ್ಪಾ ಖರೀದಿಸಿತ್ತು. ಫರ್ಮಾಮೆನ್ಸ್ ಮೋಟರ್ ಸೈಕಲ್ ಸ್ಪಾ ಹೆಸರಿನಲ್ಲಿ ಕಂಪನಿಯು ಡುಕಾಟಿ ಬೈಕುಗಳನ್ನು ಮಾರಾಟ ಮಾಡುತ್ತಿದೆ.


Click it and Unblock the Notifications








