ಮಹೀಂದ್ರ ಕ್ಷೈಲೊ, ಎಕ್ಸ್‌ಯುವಿ ದುಬಾರಿಯಾಗುತ್ತೆ ಕಣ್ರಿ!

ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ವಾಹನ ಕಂಪನಿಗಳು ಕಾರು ದರ ಹೆಚ್ಚಿಸುತ್ತಿವೆ. ಇದೀಗ ದೇಶದ ಪ್ರಮುಖ ಸ್ಪೋರ್ಟ್ ಕಾರು ಸ್ಪೆಷಲಿಸ್ಟ್ ಮಹೀಂದ್ರ ತನ್ನ ಜನಪ್ರಿಯ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಎಕ್ಸ್‌ಯುವಿ 500 ಮತ್ತು ಮಲ್ಟಿ ಪರ್ಪೊಸ್ ವೆಹಿಕಲ್ ಕ್ಷೈಲೊ ದರ ಹೆಚ್ಚಿಸಲು ಯೋಜಿಸಿದೆ. ಈ ಕಾರುಗಳ ದರ ಶೇಕಡ 10ರಿಂದ 15ರಷ್ಟು ಏರಿಕೆ ಕಾಣುವುದಾಗಿ ವರದಿಗಳು ಹೇಳಿವೆ.

ಜೂನ್ 8ರಿಂದ ಎಕ್ಸ್‌ಯುವಿ 500 ಬುಕ್ಕಿಂಗ್ ಪುನಾರಂಭಿಸುವುದಾಗಿ ಮಹೀಂದ್ರ ಕಂಪನಿಯು ಇತ್ತೀಚೆಗೆ ಪ್ರಕಟಿಸಿತ್ತು. ಶೇಕಡ 10ಕ್ಕಿಂತ ದರ ಹೆಚ್ಚಿಸಿದರೆ ಎಕ್ಸ್‌ಯುವಿ 500 ದರ ಲಕ್ಷ ರುಪಾಯಿಗಿಂತಲೂ ದುಬಾರಿಯಾಗಲಿದೆ. ಗ್ರಾಹಕರ ಅತಿಯಾದ ಬೇಡಿಕೆಗೆ ಸಿಲುಕಿ ಕಂಪನಿಯ 9 ತಿಂಗಳ ಉತ್ಪಾದನೆ ಸಾಮರ್ಥ್ಯದಷ್ಟು ಎಕ್ಸ್‌ಯುವಿ 500 ಬುಕ್ಕಿಂಗ್ ಆಗಿದೆ. ಕಂಪನಿಯು ಇನ್ಮುಂದೆ ಪ್ರತಿತಿಂಗಳು ಸುಮಾರು 4 ಸಾವಿರದಷ್ಟು ಎಕ್ಸ್ ಯುವಿ ಉತ್ಪಾದನೆ ಹೆಚ್ಚಿಸಲಿದೆ.

ಇದರೊಂದಿಗೆ ಕಂಪನಿಯು ಮಲ್ಟಿ ಪರ್ಪೊಸ್ ವೆಹಿಕಲ್ ಕ್ಷೈಲೊ ದರವನ್ನೂ ಹೆಚ್ಚಿಸುವ ಕುರಿತು ಯೋಜಿಸಿದೆ. ಪ್ರಯಾಣಿಕ ಕಾರು ಮಾತ್ರವಲ್ಲದೇ ವಾಣಿಜ್ಯ ವಾಹನದ ದರವನ್ನೂ ಕಂಪನಿ ಏರಿಕೆ ಮಾಡುವ ನಿರೀಕ್ಷೆಯಿದೆ. ಕಂಪನಿಯು ಶೀಘ್ರದಲ್ಲಿ ಅಧಿಕೃತವಾಗಿ ದರ ಹೆಚ್ಚಳದ ಕುರಿತು ಪ್ರಕಟಿಸುವ ವದಂತಿಯಿದೆ.

ಕಂಪನಿಯು ಹೆಚ್ಚಿನ ವಾಹನಗಳನ್ನು ದೇಶದಲ್ಲಿ ಉತ್ಪಾದಿಸುತ್ತಿದೆ. ಆದರೆ ಕೆಲವು ಬಿಡಿಭಾಗಗಳನ್ನು ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳುತ್ತಿದೆ. ರೂಪಾಯಿ ಮೌಲ್ಯ ಕುಸಿತವು ಕಂಪನಿಯ ಕಚ್ಚಾ ವಸ್ತು ಆಮದಿಗೆ ತೊಡಕು ಉಂಟು ಮಾಡುತ್ತಿದೆ. ಹೀಗಾಗಿ ಕಂಪನಿಯು ದರ ಹೆಚ್ಚಳ ಮಾಡುವ ಕುರಿತು ಗಂಭೀರವಾಗಿ ಯೋಚಿಸುತ್ತಿದೆ.

ಇದರೊಂದಿಗೆ ಕಂಪನಿಯು ಬೊಲೆರೊ ಎಸ್ ಯುವಿ ಮತ್ತು ವೆರಿಟೊ ಸೆಡಾನ್ ಕಾರುಗಳ ದರವನ್ನೂ ಹೆಚ್ಚಿಸುವ ನಿರೀಕ್ಷೆಯಿದೆ. ಟೊಯೊಟಾ ಕಂಪನಿಯು ಈಗಾಗಲೇ ದರ ಹೆಚ್ಚಳ ಮಾಡಿದೆ. ಉಳಿದ ಕಂಪನಿಗಳೂ ದರ ಹೆಚ್ಚಳ ಮಾಡುವ ಸಾಧ್ಯತೆಯಿದೆ.

ಆದರೆ ಪೆಟ್ರೋಲ್ ದರ ದುಬಾರಿಯಾಗಿರುವುದರಿಂದ ಗ್ರಾಹಕರು ಕಾರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನಲೆಯಲ್ಲಿ ದರ ಹೆಚ್ಚಳ ಮಾಡಲು ಕಾರು ಕಂಪನಿಗಳೂ ಭಯಪಡುತ್ತಿವೆ. ಕೆಲವು ಕಾರು ಕಂಪನಿಗಳು ಪೆಟ್ರೋಲ್ ಕಾರು ಖರೀದಿಗೆ ಭಾರಿ ಪ್ರಮಾಣದ ವಿನಾಯಿತಿ, ಆಫರುಗಳನ್ನು ನೀಡುತ್ತಿವೆ.

More from DriveSpark

Article Published On: Tuesday, June 5, 2012, 15:19 [IST]
English summary
With the value of India Rupee hitting rock bottom, carmakers are being compelled to increase prices of their vehicles. India's leading SUV maker, Mahindra is also reportedly planning to hike prices of its vehicles including the top selling XUV 500 SUV and Xylo multi-purpose vehicle by 10 to 15 per cent.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+