ಪುಟ್ಟ ಅಚ್ಚರಿ: ಸೆ 20ರಂದು ಮಹೀಂದ್ರ ಕ್ವಾಂಟೊ ರಸ್ತೆಗೆ
ಬಹುನಿರೀಕ್ಷಿತ ಮಿನಿ ಎಸ್‌ಯುವಿ ಮಹೀಂದ್ರ ಕ್ವಾಂಟೊ ಆಗಮನಕ್ಕೆ ಮಹೂರ್ತ ರೆಡಿಯಾಗಿದೆ. ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ಎಸ್‌ಯುವಿ ಜಗತ್ತಿನ ಪುಟ್ಟ ಅಚ್ಚರಿಯನ್ನು ಸೆಪ್ಟೆಂಬರ್ 20ರಂದು ಪರಿಚಯಿಸಲಿದೆ.
ಮಹೀಂದ್ರ ಕ್ವಾಂಟೊ ಮಿನಿ ಎಸ್‌ಯುವಿ ದರವೂ ಕಡಿಮೆಯಾಗಿರುವ ನಿರೀಕ್ಷೆಯಿದೆ. ಇದು ದೇಶದ ಅಗ್ಗದ ಎಸ್‌ಯುವಿ ಆಗಿರುವ ನಿರೀಕ್ಷೆಯನ್ನು ಡ್ರೈವ್ ಸ್ಪಾರ್ಕ್ ವಾಹನ ವಿಶ್ಲೇಷಕರು ವ್ಯಕ್ತಪಡಿಸಿದ್ದಾರೆ.
ಕ್ಷೈಲೊ ಆಧರಿತ ನೂತನ ಕಾರು ಎಸ್‌ಯುವಿ, ಎಂಪಿವಿ, ಸಣ್ಣಕಾರು ವಿಭಾಗಕ್ಕೂ ಜೊತೆಯಾಗಲಿದೆ. ಇದರ ಉದ್ದ ನಾಲ್ಕು ಮೀಟರಿಗಿಂತ ಕಡಿಮೆ ಇರುವುದರಿಂದ ಸಣ್ಣಕಾರು, ಕ್ಷೈಲೊ ಆಧರಿತವಾಗಿರುವುದರಿಂದ ಎಂಪಿವಿ. ಆದರೆ ಇದು ಎಸ್ ಯುವಿಯೆಂದು ಕಂಪನಿ ಸ್ಪಷ್ಟಪಡಿಸಿದೆ.
ಮಹೀಂದ್ರ ಎಕ್ಸ್‌ಯುವಿ500 ರಸ್ತೆಗಿಳಿದ ಒಂದು ವರ್ಷದ ತರುವಾಯ ನೂತನ ಕಾರಿನ ಆಗಮನಕ್ಕೆ ಕಂಪನಿಯು ಮಹೂರ್ತ ನಿಗದಿಪಡಿಸಿದೆ. ಮಿನಿ ಎಸ್ ಯುವಿಯಾಗಿದ್ದರೂ ಮೂರು ಸಾಲಿನ ಸೀಟುಗಳನ್ನು ಹೊಂದಿರಲಿದ್ದು, ಏಳು ಜನರು ಕುಳಿತುಕೊಳ್ಳಬಹುದಾಗಿದೆ.
ನೂತನ ಮಹೀಂದ್ರ ಕ್ಯಾಂಟೊ ಆವೃತ್ತಿಯ ದರ ಸುಮಾರು 4.5 ಲಕ್ಷ ರು.ನಿಂದ 5.5 ಲಕ್ಷ ರು. ನಡುವೆ ಇರುವ ನಿರೀಕ್ಷೆಯಿದೆ. ಮಾಮೂಲಿ ಹ್ಯಾಚ್ ಬ್ಯಾಕುಗಳನ್ನು ಖರೀದಿಸುವರನ್ನು ವಿನೂತನ ಸ್ಪೋರ್ಟಿ ವಿನ್ಯಾಸದ ಕ್ವಾಂಟೊ ಕಾರು ಸೆಳೆಯುವ ನಿರೀಕ್ಷೆಯಿದೆ.


Click it and Unblock the Notifications









