ಜ. 25ರಿಂದ ಮಹೀಂದ್ರ XUV500 ಬುಕ್ಕಿಂಗ್ ಪುನಾರಂಭ

ಮಹೀಂದ್ರ ಕಂಪನಿಯು ಕಳೆದ ವರ್ಷದ ಆಕ್ಟೋಬರ್ ನಲ್ಲಿ ಬುಕ್ಕಿಂಗ್ ಸ್ಥಗಿತಗೊಳಿಸಿತ್ತು. ಯಾಕೆಂದರೆ ಕಂಪನಿಯು ನೂತನ ಕಾರನ್ನು ಹೊರತಂದ ಕೆಲವೇ ದಿನಗಳಲ್ಲಿ ಗ್ರಾಹಕರು ಖರೀದಿಗೆ ಮುಗಿಬಿದ್ದಿದ್ದರು. ಕಂಪನಿಯ ಉತ್ಪಾದನಾ ಸಾಮರ್ಥ್ಯಕ್ಕಿಂತ ಹೆಚ್ಚಿನ ಬುಕ್ಕಿಂಗ್ ಆದ ಹಿನ್ನಲೆಯಲ್ಲಿ ಕಂಪನಿಯು ಬುಕ್ಕಿಂಗ್ ಸ್ಥಗಿತಗೊಳಿಸಿತು.
ಸುಮಾರು 19 ನಗರಗಳಲ್ಲಿ ಬುಕ್ಕಿಂಗ್ ಆರಂಭವಾಗುವ ಕಾರಣ ಹೆಚ್ಚು ಜನರು ಮುಗಿಬೀಳುವುದು ಗ್ಯಾರಂಟಿ. ಇದಕ್ಕಾಗಿ ಕಂಪನಿಯು ಲಕ್ಕಿ ಡ್ರಾ ಕೂಪನ್ ಆರಂಭಿಸಲಿದೆಯಂತೆ. ಅಂದರೆ ಬುಕ್ಕಿಂಗ್ ಮಾಡಿದವರಲ್ಲಿ ಅದೃಷ್ಟವಂತರಿಗೆ ಎಕ್ಸ್ ಯುವಿ ಕಾರನ್ನು ಖರೀದಿಸುವ ಅವಕಾಶ ದೊರಕಲಿದೆ.
ಮಹೀಂದ್ರ XUV500 ಎಸ್ ಯುವಿ 2.2 ಲೀಟರಿನ ಟರ್ಬೊ ಡೀಸೆಲ್ ಎಂಜಿನ್ ಹೊಂದಿದ್ದು 140 ಅಶ್ವಶಕ್ತಿ ನೀಡುತ್ತದೆ. ಇದು ಈಗ W6 2WD, W8 2WD ಮತ್ತು W8 AWD ಆವೃತ್ತಿಗಳಲ್ಲಿ ದೊರಕುತ್ತಿದೆ. ನೂತನ XUV500 ಟಾಪ್ ಎಂಡ್ ಆವೃತ್ತಿ ದರವನ್ನು ಇತ್ತೀಚೆಗೆ ಕಂಪನಿಯು ಸುಮಾರು 55 ಸಾವಿರ ರು.ನಷ್ಟು ಹೆಚ್ಚಿಸಿತ್ತು.


Click it and Unblock the Notifications








