ವಿಶ್ವದರ್ಜೆಯ ಮಹೀಂದ್ರ ಸಂಶೋಧನಾ ಕೇಂದ್ರ ಉದ್ಘಾಟನೆ

ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ವಿಶ್ವದರ್ಜೆಯ ಎಂಜಿನಿಯರಿಂಗ್ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಚೆನ್ನೈನಲ್ಲಿ ಔಪಚಾರಿಕವಾಗಿ ಉದ್ಘಾಟಿಸಿದೆ. ಸ್ಟೇಟ್ ಆಫ್ ದಿ ಆರ್ಟ್ ಮಹೀಂದ್ರ ರಿಸರ್ಚ್ ವ್ಯಾಲಿಯನ್ನು(ಎಂಆರ್‌ವಿ)ಯನ್ನು ದೇಶದ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಉದ್ಘಾಟಿಸಿದ್ದಾರೆ.

ತಂತ್ರಜ್ಞಾನ ಮೂಲಕ ಅನ್ವೇಷನೆಗಾಗಿ ನೂತನ ಎಂಆರ್‌ವಿ ಕೇಂದ್ರವನ್ನು ಮಹೀಂದ್ರ ಗ್ರೂಪ್ ಸ್ಥಾಪಿಸಿದೆ. ಇಲ್ಲಿ ಕಂಪನಿಯ ಎಂಜಿನಿಯರಿಂಗ್ ಸಂಶೋಧನೆ ಮತ್ತು ಉತ್ಪನ್ನ ಅಭಿವೃದ್ಧಿ ಪ್ರಕ್ರಿಯೆಗಳು ನಡೆಯಲಿವೆ. ಆಟೋಮೊಬೈಲ್ಸ್ ಮತ್ತು ಟಾಕ್ಟರ್ಸ್ ಸಂಶೋಧನೆ ಇತ್ಯಾದಿಗಳು ಒಂದೇ ಸೂರಿನಡಿ ನಡೆಯಲಿದೆ.

ನೂತನ ರಿಸರ್ಚ್ ಆಂಡ್ ಡೆವಲಪ್‌ಮೆಂಟ್(ಆರ್‌ಆಂಡ್‌ಡಿ) ಘಟಕವು ಮಹೀಂದ್ರ ವರ್ಲ್ಡ್ ಸಿಟಿ ಚೆನ್ನೈನ 125 ಎಕರೆಯಲ್ಲಿ ವ್ಯಾಪಿಸಿದೆ. ಇದಕ್ಕಾಗಿ ಕಂಪನಿಯು ಸುಮಾರು 650 ಕೋಟಿ ರುಪಾಯಿ ವಿನಿಯೋಗಿಸಲಿದೆ. ಇಲ್ಲಿ ಸುಮಾರು 1,500ಕ್ಕೂ ಹೆಚ್ಚು ಸಿಬ್ಬಂದಿಗಳಿದ್ದಾರೆ. ಭವಿಷ್ಯದಲ್ಲಿ ಸಿಬ್ಬಂದಿ ಸಂಖ್ಯೆಯನ್ನು 3 ಸಾವಿರಕ್ಕೆ ಹೆಚ್ಚಿಸುವ ಗುರಿಯನ್ನು ಕಂಪನಿ ಹೊಂದಿದೆ. (ಕನ್ನಡ ಡ್ರೈವ್‌ಸ್ಪಾರ್ಕ್)

More from DriveSpark

Article Published On: Saturday, April 14, 2012, 10:38 [IST]
English summary
Mahindra & Mahindra today formally inaugurated its world class engineering and research and development center in Chennai. The state-of-the-art Mahindra Research Valley (MRV) facility was inaugurated by His Excellency, Dr. APJ Abdul Kalam, Honourable Former President of India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+