ಮಹೀಂದ್ರ XUV 500: ಬುಕ್ಕಿಂಗ್ ದುಡ್ಡು ವಾಪಸ್
ಮಹೀಂದ್ರ ಕಂಪನಿಯು ಇತ್ತೀಚೆಗೆ ಹತ್ತುದಿನಗಳ ಕಾಲ XUV 500 ಬುಕ್ಕಿಂಗ್ ಪುನಾರಂಭಿಸಿತ್ತು. ಕಂಪನಿಯ ನಿರೀಕ್ಷೆಯನ್ನು ಮೀರಿ 25 ಸಾವಿರಕ್ಕೂ ಹೆಚ್ಚು ಜನರು ಬುಕ್ಕಿಂಗ್ ಅರ್ಜಿ ಸಲ್ಲಿಸಿದ್ದರು. ಆದರೆ ಕೇವಲ 8 ಸಾವಿರ ಜನರಿಗೆ ಮಾತ್ರ ಬುಕ್ಕಿಂಗ್ ಮಾಡುವ ಅವಕಾಶವೆಂದು ಕಂಪನಿ ತಿಳಿಸಿತ್ತು. ಇದಕ್ಕಾಗಿ ಲಕ್ಕಿಡ್ರಾ ಮೂಲಕ ಜನರನ್ನು ಆಯ್ಕೆ ಮಾಡಲಾಗಿತ್ತು.
ಆದರೆ 25 ಸಾವಿರಕ್ಕೂ ಹೆಚ್ಚು ಜನರು 80 ಸಾವಿರ ರು. ಬುಕ್ಕಿಂಗ್ ಮುಂಗಡ ನೀಡಿದ್ದರು. ಬುಕ್ಕಿಂಗ್ ಭಾಗ್ಯ ದೊರಕದವರಿಗೆ ದುಡ್ಡು ವಾಪಸ್ ಮಾಡುವುದಾಗಿ ಕಂಪನಿ ಪ್ರಕಟಿಸಿತ್ತು. ಇದೀಗ ಕೊಟ್ಟಮಾತಿನಂತೆ ಬುಕ್ಕಿಂಗ್ ಮುಂಗಡ ಹಣವನ್ನು ಎಕ್ಸ್ ಯುವಿ ಪಡೆಯಲು ಸದ್ಯ ಅದೃಷ್ಟ ಇಲ್ಲದವರಿಗೆ ವಾಪಸ್ ಮಾಡುತ್ತಿದೆ. ಈ ಹಣದಿಂದ ಕಂಪನಿಗೆ ಒಂದಿಷ್ಟು ಬಡ್ಡಿ ಬಂದಿರುವುದಂತು ಗ್ಯಾರಂಟಿ!
ಕಂಪನಿಯು ಈಗಾಗಲೇ ಬುಕ್ಕಿಂಗ್ ದುಡ್ಡು ವಾಪಸ್ಸಾತಿ ಶುರುಮಾಡಿದೆ. ಯಾರಿಗೆ ದುಡ್ಡು ಸಿಕ್ಕಿಲ್ಲವೋ ಅವರೆಲ್ಲರೂ ಕಂಪನಿಯನ್ನು ನೇರವಾಗಿ ಸಂಪರ್ಕಿಸುವಂತೆ ಕಂಪನಿ ತಿಳಿಸಿದೆ. ನಿಮಗೂ ಕಂಪನಿ ದುಡ್ಡು ವಾಪಸ್ ಮಾಡಬೇಕಿದ್ದರೆ ನಿಮ್ಮ ಅರ್ಜಿ ಮಾಹಿತಿಯೊಂದಿಗೆ [email protected] ಇಮೇಲ್ ವಿಳಾಸಕ್ಕೆ ಮಿಂಚಂಚೆ ಮಾಡಿ. ಅಥವಾ 1800-209-6006 ಈ ನಂಬರಿಗೆ ಕರೆಮಾಡಿ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









