ಮಹೀಂದ್ರ ಕ್ವಾಂಟೊ ಎಸ್‌ಯುವಿ ದರ ಬಹಿರಂಗ
ದೇಶದ ಎಸ್‌ಯುವಿ ಸ್ಪೆಷಲಿಸ್ಟ್ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ಬಹುನಿರೀಕ್ಷಿತ ಪುಟ್ಟ ಎಸ್‌ಯುವಿ "ಕ್ವಾಂಟೊ" ರಸ್ತೆಗಿಳಿಯಲು ಕ್ಷಣಗಣನೆ ಆರಂಭವಾಗಿದೆ.. ಕಂಪನಿಯು ನೂತನ ಕ್ವಾಂಟೊ ಕಾರಿನ ದರವನ್ನು ಈಗಾಗಲೇ ಬಹಿರಂಗಪಡಿಸಿದೆ. ಮಹೀಂದ್ರ ಕ್ವಾಂಟೊ ಆರಂಭಿಕ ದರ 5.82 ಲಕ್ಷ ರು. ಇರಲಿದೆ.
ನೂತನ ಮಹೀಂದ್ರ ಕ್ವಾಂಟೊ ಕಾರು 1.5 ಲೀಟರಿನ ಡೀಸೆಲ್ ಎಂಜಿನ್ ಹೊಂದಿರಲಿದೆ. ಅಬಕಾರಿ ಸುಂಕ ವಿನಾಯಿತಿಯ ಲಾಭ ಪಡೆಯಲು ಕಂಪನಿಯು ನೂತನ ಕ್ವಾಂಟೊ ಕಾರಿನ ಗಾತ್ರವನ್ನು ನಾಲ್ಕು ಮೀಟರಿಗಿಂತ ಕಿರಿದುಗೊಳಿಸಿದೆ.
ಎಂಟ್ರಿ ಲೆವೆಲ್ ಸೆಡಾನ್ ಕಾರು ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಕ್ವಾಂಟೊ ವಿನ್ಯಾಸ ಮಾಡಿದೆ. ಅಂದರೆ ಸಣ್ಣಕಾರು ಹೊಂದಿರುವರು, ಕೊಂಚ ದೊಡ್ಡ ಕಾರು ಖರೀದಿಸಲು ಬಯಸಿದರೆ ಅವರಿಗೆ ಕ್ವಾಂಟೊ ಸೂಕ್ತ ಆಯ್ಕೆಯಾಗಲಿದೆ.
ಮಹೀಂದ್ರ ಬೊಲೆರೊ ಕಾರಿನಂತೆಯೇ ಇದರ ವೀಲ್ ಕವರ್, ಟೇಲ್ ಲ್ಯಾಂಪುಗಳು ಕಾಣುತ್ತವೆ. ಉಳಿದ ಹೆಚ್ಚಿನ ವಿನ್ಯಾಸಗಳು ಕ್ಷೈಲೊದಿಂದ ಎರವಲು ಪಡೆಯಲಾಗಿದೆ. ನೂತನ ಮಹೀಂದ್ರ ಕ್ಯಾಂಟೊ ಕಾರು ಐದು ಮತ್ತು ಏಳು ಸೀಟುಗಳ ಆಯ್ಕೆಗಳಲ್ಲಿ ಲಭ್ಯವಿರುವ ನಿರೀಕ್ಷೆಯಿದೆ.
ಮಹೀಂದ್ರ ಕಂಪನಿಯ ಪುಟ್ಟ ಅಚ್ಚರಿ ಕ್ವಾಂಟೊ ಕಾರಿನ ಬಿಡುಗಡೆ ನಾಳೆ ಬೆಂಗಳೂರಿನಲ್ಲಿ ನಡೆಯಲಿದೆ. ನಾವು ಆ ಕಾರ್ಯಕ್ರಮದಲ್ಲಿ ಭಾಗವಹಿಸಿ "ನೇರ ಪ್ರಸಾರ" ನೀಡಲಿದ್ದೇವೆ.


Click it and Unblock the Notifications









