ಈ ವರ್ಷ ಮಹೀಂದ್ರ ಕಂಪನಿಯಿಂದ ಆರು ವಾಹನ
"ಮುಂದಿನ ಮೂರು ಆರ್ಥಿಕ ವರ್ಷಕ್ಕಾಗಿ ನಾವು ಸುಮಾರು 5 ಸಾವಿರ ಕೋಟಿ ರುಪಾಯಿ ಬಂಡವಾಳ ವಿತರಣೆ ಮಾಡಲಿದ್ದೇವೆ" ಎಂದು ಕಂಪನಿಯ ಅಧ್ಯಕ್ಷರಾದ ಪವನ್ ಗೋಯೆಂಕಾ ಹೇಳಿದ್ದಾರೆ. ಆದರೆ ಅವರು ಪ್ರಸಕ್ತ ವರ್ಷ ಆಗಮಿಸಲಿರುವ ಹೊಸ ಕಾರುಗಳ ಹೆಚ್ಚಿನ ವಿವರ ನೀಡಲು ನಿರಾಕರಿಸಿದ್ದಾರೆ. ಜೊತೆಗೆ ಮುಂದಿನ 3 ಹಣಕಾಸು ವರ್ಷಕ್ಕಾಗಿ ಸುಮಾರು 2,500 ಕೋಟಿ ರುಪಾಯಿ ಹೂಡಿಕೆ ಮಾಡಲಿರುವುದಾಗಿ ಗೋಯೆಂಕಾ ಹೇಳಿದ್ದಾರೆ.
ವೆರಿಟೊ ಸೆಡಾನ್ ಕಾರಿನ ಹ್ಯಾಚ್ ಬ್ಯಾಕ್ ಆವೃತ್ತಿಯನ್ನು ಪರಿಚಯಿಸುವ ಕುರಿತು ಕಂಪನಿಯು ಕಳೆದ ವಾರವೇ ಖಚಿತಪಡಿಸಿದೆ. ಇದು ರಸ್ತೆಗಿಳಿಯಲು ಕೆಲವು ತಿಂಗಳು ಬಾಕಿ ಉಳಿದಿದೆ ಅಷ್ಟೇ!
ಇದರೊಂದಿಗೆ ಕಂಪನಿಯು ಮಹೀಂದ್ರ ಎಕ್ಸ್ ಯುವಿ500 ಸ್ಪೋರ್ಟ್ ಯುಟಿಲಿಟಿ ವಾಹನವನ್ನು ವಿದೇಶಿ ಮಾರುಕಟ್ಟೆಗೂ ಪರಿಚಯಿಸಲಿದೆ. ಮುಂದಿನ ವಾರ ಎಕ್ಸ್ ಯುವಿ ಬುಕ್ಕಿಂಗ್ ದೇಶದಲ್ಲಿ ಪುನರ್ ಆರಂಭವಾಗಲಿದೆ. ಪ್ರಸಕ್ತ ವರ್ಷ ಕಂಪನಿಯು ಬೇರೆ ಯಾವುದಾದರೂ ಎಸ್ ಯುವಿ ಪರಿಚಯಿಸುವ ಸಾಧ್ಯತೆ ತೀರಾ ಕಡಿಮೆ.
ಈ ವರ್ಷ ಕಂಪನಿಯು ದೇಶಕ್ಕೆ ಕೆಲವು ಸಣ್ಣಕಾರುಗಳನ್ನು ಪರಿಚಯಿಸುವ ನಿರೀಕ್ಷೆಯಿದೆ. ಈಗಾಗಲೇ ಸ್ಪೋರ್ಟ್ ಯುಟಿಲಿಟಿ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಕಂಪನಿಯು ಮಾಸ್ ಹ್ಯಾಚ್ ಬ್ಯಾಕ್ ಕಾರು ಮಾರುಕಟ್ಟೆಯಲ್ಲಿನ ಪಾಲಿಗೆ ಕನ್ನ ಹಾಕುವ ಯೋಜನೆಯಲ್ಲಿದೆ.
ಸಣ್ಣಕಾರು ಮಾರುಕಟ್ಟೆಗೆ ಮಹೀಂದ್ರ ಆಗಮಿಸಿದರೆ ಗ್ರಾಹಕರು ಹೆಚ್ಚು ಇಂಧನ ದಕ್ಷತೆ, ಕಾರ್ಯಕ್ಷಮತೆ ಮತ್ತು ಕಡಿಮೆ ದರದ ಕಾರಿನ ನಿರೀಕ್ಷೆಯಲ್ಲಿರಬಹುದು.


Click it and Unblock the Notifications









