ಸೆಪ್ಟೆಂಬರ್ ತಿಂಗ್ಳಲ್ಲಿ ಮಹೀಂದ್ರ ಮಿನಿಕ್ಷೈಲೊ ಆಗಮನ
ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ಬಹುನಿರೀಕ್ಷಿತ ಸಣ್ಣ ಎಸ್‌ಯುವಿ "ಮಿನಿ ಕ್ಷೈಲೊ" ಆಗಮನ ಸನಿಹವಾಗಿದೆ. ಕಂಪನಿಯು ಈ ಪುಟ್ಟ ಸ್ಪೋರ್ಟ್ಸ್ ಯುಟಿಲಿಟಿ ವಾಹನವನ್ನು ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ರಸ್ತೆಗಿಳಿಸಲು ಯೋಜಿಸಿದೆ.
ಪ್ರಸಕ್ತ ವರ್ಷದ ದೀಪಾವಳಿ ಹಬ್ಬದ ವೇಳೆಗೆ ನೂತನ ಮಿನಿ ಕ್ಷೈಲೊ ಪರಿಚಯಿಸುವುದಾಗಿ ಮಹೀಂದ್ರ ಈ ಹಿಂದೆ ಹೇಳಿತ್ತು. ಆದರೆ ಇದೀಗ ಹಬ್ಬಕ್ಕೂ ಮೊದಲು ಕ್ಷೈಲೊ ಪರಿಚಯಿಸಲು ಕಂಪನಿ ನಿರ್ಧರಿಸಿದೆ.
ಇತ್ತೀಚೆಗೆ ಹೊದಿಕೆ ಹಾಕಿದ ಕ್ಷೈಲೊ ಕಾರಿನ ಚಿತ್ರವೊಂದು ಬಹಿರಂಗವಾಗಿತ್ತು. ಆದರೆ ನೂತನ ಕ್ಷೈಲೊ ವಿನ್ಯಾಸದ ಬಗ್ಗೆ ಕಲ್ಪಿಸಿಕೊಳ್ಳುವುದು ಕಷ್ಟವೇನಲ್ಲ. ದೊಡ್ಡ ಕ್ಷೈಲೊ ಕಾರಿನ ವಿನ್ಯಾಸವನ್ನೇ ಬಹುಪಾಲು ಹೊಂದಿರಲಿದೆ.
ಮಿನಿ ಕ್ಷೈಲೊ ಕಾರನ್ನು ಕಂಪನಿಯು ಈಗಾಗಲೇ ಪುಣೆ ಮತ್ತು ಯುರೋಪ್ ನಲ್ಲಿ ಟೆಸ್ಟ್ ಮಾಡಿದೆ. "ಮಿನಿ ಕ್ಷೈಲೊ ಈಗಲೂ ಅಭಿವೃದ್ಧಿಯ ಹಂತದಲ್ಲಿದೆ. ಆದರೆ ಈ ಕಾರು ಸೆಪ್ಟೆಂಬರ್ ವೇಳೆಗೆ ರಸ್ತೆಗಿಳಿಯಲಿದೆ" ಎಂದು ಕಂಪನಿಯ ಮೂಲಗಳು ಮಾಹಿತಿ ನೀಡಿವೆ.
ನೂತನ ಮಿನಿ ಕ್ಷೈಲೊ ಕಾರಿನ ದರ ಸುಮಾರು 7 ಲಕ್ಷ ರು.ಗಿಂತ ಕಡಿಮೆ ಇರುವ ನಿರೀಕ್ಷೆಯಿದೆ. ಮಹೀಂದ್ರ ಮಿನಿ ಕ್ಷೈಲೊ ಪ್ರತಿಲೀಟರಿಗೆ 14 ಕಿ.ಮೀ.ಗಿಂತ ಹೆಚ್ಚು ಮೈಲೇಜ್ ನೀಡುವ ನಿರೀಕ್ಷೆಯಿದೆ. (ಕನ್ನಡ ಡ್ರೈವ್‌ಸ್ಪಾರ್ಕ್)


Click it and Unblock the Notifications









