ಇನ್ನೋವಾ, ಎರ್ಟಿಗಾ, ಕ್ಷೈಲೊ: ಯಾವುದು ಸ್ಟೈಲ್?

Posted By:

ಇನ್ನೋವಾ, ಎರ್ಟಿಗಾ, ಕ್ಷೈಲೊ ಈ ಮೂವರಲ್ಲಿ ಯಾರು ಹಿತವರೆಂಬ ಪ್ರಶ್ನೆ ಕೆಲವು ಸಮಯದಿಂದ ನನ್ನ ತಲೆ ತಿನ್ನಲು ಆರಂಭಿಸಿದೆ. ಕೆಲವು ವರ್ಷದ ಹಿಂದೆಯಾಗಿದ್ರೆ ಸಂದೇಹವಿಲ್ಲದೇ ಇನ್ನೋವಾ ಬೆಸ್ಟ್ ಅಂತಿದ್ದೆ. ಈಗ ಕಾಲ ಬದಲಾಗಿದೆ. ಕ್ಷೈಲೊ, ಎರ್ಟಿಗಾ ಕೂಡ ಇನ್ನೋವಾದ ಅಕ್ಕಪಕ್ಕದಲ್ಲಿ ಬಾನೆಟ್ ಸೆಟೆದು ನಿಂತಿವೆ.

ಡ್ರೈವಿಂಗ್ ಜೀವನಶೈಲಿಯಲ್ಲಿ ಸ್ಟೈಲ್ ವಿಷ್ಯ ಕೂಡ ಪ್ರಮುಖ. ಕಾರು ಸುಂದರವಾಗಿರಬೇಕೆಂದು ಹೆಚ್ಚಿನವರು ಬಯಸುತ್ತಾರೆ. ಇನ್ನೋವಾ, ಎರ್ಟಿಗಾ, ಕ್ಷೈಲೊ ಮೂರು ಕಾರುಗಳ ಸೌಂದರ್ಯ ಲಹರಿ ಇಲ್ಲಿದೆ. ಒಮ್ಮೆ ಓದಿಕೊಂಡು ನಿಮ್ಮ ಅಭಿಪ್ರಾಯ ತಿಳಿಸಿರಿ.

ಎರ್ಟಿಗಾ: ಇಕೊ ಕಾರಲ್ಲಿ ಮಾರುತಿ ಸುಜುಕಿ ಸೌಂದರ್ಯ ಪ್ರಜ್ಞೆ ಮರೆತಿತ್ತು. ಅದೊಂದು ವ್ಯಾನ್ ತರಹ ಹೆಚ್ಚಿನವರಿಗೆ ಭಾಸವಾಗುತ್ತಿತ್ತು. ಆದ್ರೆ ಎರ್ಟಿಗಾ ಹಾಗಲ್ಲ. ಅದರ ವಿನ್ಯಾಸದಲ್ಲಿ ಸ್ಟೈಲಿಗೂ ಮಾರುತಿ ಪ್ರಾಮುಖ್ಯತೆ ಕೊಟ್ಟಿದೆ.

ಈಗ ವಿಷಯಕ್ಕೆ ಬರೋಣ. ಇನ್ನೋವಾ, ಕ್ಷೈಲೊ ಮುಂದೆ ನಿಂತಾಗ ಸ್ಟೈಲ್ ವಿಷಯದಲ್ಲಿ ಎರ್ಟಿಗಾ ಕೊಂಚ ಮಂಕಾಗಿ ನನಗೆ ಕಾಣಿಸುತ್ತದೆ. ಹೀಗಾಗಿ ಸ್ಟೈಲ್ ವಿಷಯದಲ್ಲಿ ಎರ್ಟಿಗಾಕ್ಕೆ ನಾನು ಹೆಚ್ಚು ಅಂಕ ಕೊಡಲಾರೆ.

ಸ್ವಿಫ್ಟ್ ನೆನಪಿಸುವ ಹೆಡ್ ಲೈಟ್, ರಿಟ್ಜ್ ಕಾರಿನಿಂದ ಸ್ಪೂರ್ತಿ ಪಡೆದಂತಿರುವ ಗ್ರಿಲ್, ಟೇಲ್ ಲ್ಯಾಂಪ್ ಇತ್ಯಾದಿಗಳು ನನಗಂತೂ ಇಷ್ಟವಾಗಿಲ್ಲ. ಎರ್ಟಿಗಾ ಅಗ್ಗದ ದರವೇ ಪ್ಲಸ್ ಪಾಯಿಂಟ್. ಎರ್ಟಿಗಾ ಝಡ್ ಡಿಐ ದರ: 8,85,137 ರು.

ಕ್ಷೈಲೊ: ಎಂಪಿವಿ ವಿಭಾಗದಲ್ಲಿ ಕ್ಷೈಲೊ ವಾಹನ ಪ್ರಿಯರನ್ನು ಸೆಳೆದಿದೆ. ಟಾಪ್ ಎಂಡ್ ಕ್ಷೈಲೊ ದೆಹಲಿ ಎಕ್ಸ್ ಶೋರೂಂ ದರ ಸುಮಾರು 10,52,733 ರು. ಇದೆ. ದರ ಕೊಂಚ ಹೆಚ್ಚಾಗಿದ್ದರೂ ಪರವಾಗಿಲ್ಲವೆಂದು ನೀವು ಅಭಿಪ್ರಾಯ ಪಟ್ಟರೆ, ಕ್ಷೈಲೊ ಇಷ್ಟವಾಗುತ್ತದೆ.

ಅದರ ಅಂದದ ಹೆಡ್ ಲೈಟ್ಸ್, ಆಕರ್ಷಕ ಮುಂಭಾಗದ ಗ್ರಿಲ್ಲು ಮುಂತಾದವು ಕಣ್ಮನ ಸೆಳೆಯುತ್ತದೆ. ಎಸ್ ಯುವಿ ಸ್ಪೆಷಲಿಸ್ಟ್ ಮಹೀಂದ್ರ ಸ್ಟೈಲ್ ವಿಷ್ಯದಲ್ಲಿ ರಾಜಿಯಾಗಿಲ್ಲ. ಹೀಗಾಗಿ ನಾನು ಕ್ಷೈಲೊ ಕಾರಿಗೆ ಎರ್ಟಿಟಾ ಕಾರಿಗಿಂತ ಸ್ಟೈಲ್ ವಿಷಯದಲ್ಲಿ ಹೆಚ್ಚು ಅಂಕ ಕೊಟ್ಟಿದ್ದೇನೆ.

ಇನ್ನೋವಾ: ಹೆಚ್ಚು ಮೇಕಪ್ ಇಲ್ಲದಿದ್ದರೂ ಸರಳತೆಯಿಂದ ಇನ್ನೋವಾ ಇಷ್ಟವಾಗುತ್ತದೆ. ಇನ್ನೋವಾಕ್ಕೆ ಸ್ಟೈಲ್ ವಿಷಯದಲ್ಲಿ ಎರ್ಟಿಗಾ, ಕ್ಷೈಲೊಗಿಂತ ಹೆಚ್ಚು ಮಾರ್ಕ್ಸ್ ಕೊಡಬಹುದು. ಇನ್ನೋವಾ ಟಾಪ್ ಆವೃತ್ತಿ ದರ ಸುಮಾರು 14,15,455 ರು. ಇದೆ.

ಈ ಮೂರುಕಾರುಗಳಲ್ಲಿ ಇನ್ನೋವಾ ಹೆಚ್ಚು ಸ್ಟೈಲ್, ಕ್ಷೈಲೊ ಸೆಕೆಂಡ್ ಮತ್ತು ಎರ್ಟಿಗಾಕ್ಕೆ ಮೂರನೇ ಸ್ಥಾನ ಕೊಟ್ಟಿರುವ ನನ್ನ ಅಭಿಪ್ರಾಯಕ್ಕೆ ನಿಮ್ಮ ಸಹಮತವಿದೆಯೇ? ನಿಮಗೆ ಯಾವ ಕಾರು ಇಷ್ಟವಾಗಿದೆ ತಿಳಿಸಿ.

English summary
This question is often fired at my end, as to which is the most stylish utility vehicle when it comes to Ertiga, Xylo and Innova? Few years ago, my definite choice would have been the Innova. However, times have changed and now there are more options in the form of Ertiga and Xylo.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark