ಮಹೀಂದ್ರ ಮಿನಿ ಕ್ಷೈಲೊಗೆ ಹೊಸ ಹೆಸರು: ಮಹೀಂದ್ರ ಕ್ವಾಂಟೊ

Posted By:
Mahindra Mini Xylo New Name Quanto
ದೇಶದ ರಸ್ತೆಗೆ ಶೀಘ್ರದಲ್ಲಿ ಆಗಮಿಸಲಿರುವ ಮಹೀಂದ್ರ ಯುಟಿಲಿಟಿ ವಾಹನದ ಹೆಸರು "ಮಹೀಂದ್ರ ಕ್ವಾಂಟೊ". ಇದ್ವಾವುದೂ ಕ್ವಾಂಟೊ, ಡ್ರೈವ್ ಸ್ಪಾರ್ಕಿನಲ್ಲಿ ಇಲ್ಲಿವರೆಗೆ ಕ್ವಾಂಟೊ ಕುರಿತು ಒಂದು ಪದವೂ ಬರೆದಿಲ್ಲವಲ್ಲ ಎಂದು ಕೇಳದಿರಿ. ಈ ಹಿಂದೆ ಮಹೀಂದ್ರ ಮಿನಿ ಕ್ಷೈಲೊ ಹೆಸರಿನಿಂದ ಹೆಸರಿಸಲಾದ ಕಾರಿನ ಹೆಸರನ್ನು ಕ್ವಾಂಟೊ ಎಂದು ಕಂಪನಿ ಬದಲಾಯಿಸಿದೆ.

ನೂತನ ಮಹೀಂದ್ರ ಕ್ವಾಂಟೊ ಪ್ರಸಕ್ತ ವರ್ಷದ ಹಬ್ಬದ ವೇಳೆಗೆ ಆಗಮಿಸಲಿದೆ. ನೋಡಲು ಇದು ಕ್ಷೈಲೊ ಕಾರಿನಂತೆಯೇ ಇದೆ. ಬದಲಾವಣೆ ಎಂದರೆ, ಇದು ಆ ಕಾರಿಗಿಂತ ಪುಟ್ಟ ಕಾರಾಗಿದೆ. ಹೀಗಾಗಿ ಮಿನಿ ಕ್ಷೈಲೊ ಎನ್ನಲಾಗಿತ್ತು. ಇದೀಗ ಕಂಪನಿಯು ಮಹೀಂದ್ರ ಕ್ವಾಂಟೊ ಎಂಬ ಅತ್ಯಾಕರ್ಷಕ ಹೆಸರನ್ನು ಇದಕ್ಕೆ ಇಟ್ಟಿದೆ.

ಮಹೀಂದ್ರ ಬೊಲೆರೊ ಕಾರಿನಂತೆಯೇ ಇದರ ವೀಲ್ ಕವರ್, ಟೇಲ್ ಲ್ಯಾಂಪುಗಳು ಕಾಣುತ್ತವೆ. ಉಳಿದ ಹೆಚ್ಚಿನ ವಿನ್ಯಾಸಗಳು ಕ್ಷೈಲೊದಿಂದ ಎರವಲು ಪಡೆಯಲಾಗಿದೆ. ನೂತನ ಮಹೀಂದ್ರ ಕ್ಯಾಂಟೊ ಕಾರು ಐದು ಮತ್ತು ಏಳು ಸೀಟುಗಳ ಆಯ್ಕೆಗಳಲ್ಲಿ ಲಭ್ಯವಿರುವ ನಿರೀಕ್ಷೆಯಿದೆ.

ನೂತನ ಮಹೀಂದ್ರ ಕ್ಯಾಂಟೊ ಆವೃತ್ತಿಯ ದರ ಸುಮಾರು 4.5 ಲಕ್ಷ ರು.ನಿಂದ 5.5 ಲಕ್ಷ ರು. ನಡುವೆ ಇರುವ ನಿರೀಕ್ಷೆಯಿದೆ. ಮಾಮೂಲಿ ಹ್ಯಾಚ್ ಬ್ಯಾಕುಗಳನ್ನು ಖರೀದಿಸುವರನ್ನು ವಿನೂತನ ಸ್ಪೋರ್ಟಿ ವಿನ್ಯಾಸದ ಕ್ವಾಂಟೊ ಕಾರು ಸೆಳೆಯುವ ನಿರೀಕ್ಷೆಯಿದೆ.

ನೂತನ ಮಹೀಂದ್ರ ಕ್ವಾಂಟೊ ಉದ್ದ ನಾಲ್ಕು ಮೀಟರುಗಳಿಗಿಂತ ಕಡಿಮೆ ಇರಲಿದೆ. ಸರಕಾರವು ಸಣ್ಣಕಾರುಗಳಿಗೆ ಕಡಿಮೆ ಅಬಕಾರಿ ಸುಂಕ ವಿಧಿಸುತ್ತಿದೆ. ನೂತನ ಕ್ವಾಂಟೊ ಕಾರಿಗೂ ಸುಂಕ ಕಡಿಮೆಯಾಗಲಿದೆ.

ಮಿನಿ ಕ್ಷೈಲೊ ಕಾರೊಂದು ಆಗಮಿಸಲಿದೆ. ಈ ಕಾರಿನ ದರ ಸುಮಾರು 4-5 ಲಕ್ಷ ರುಪಾಯಿ ಆಸುಪಾಸಿನಲ್ಲಿರಲಿದೆ. ಕಂಪನಿಯು ಕ್ಷೈಲೊ ಆವೃತ್ತಿಯ ನೂತನ ಸಂಕುಚಿತ ಚಾಸೀಸ್ ಬಳಸಿ ನೂತನ ಕ್ವಾಂಟೊ ಕಾರನ್ನು ಅಭಿವೃದ್ಧಿಪಡಿಸಲಿದೆ.

ಮಹೀಂದ್ರ ಕಂಪನಿಯ ಪುಟ್ಟ ಅಚ್ಚರಿ ಆಗಮನ ದಿನಾಂಕದ ಕುರಿತು ಕಂಪನಿಯು ಶೀಘ್ರದಲ್ಲಿ ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆಯಿದೆ.

English summary
Mahindra’s much-awaited mini-Xylo finally reveals its name – the Quanto. The information came to light through a series of spy shots posted in familiar Auto forum website, in which the Mahindra compact MPV proudly wears the Quanto nameplate while posing for what looks like a photo shoot.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark