ಮಹೀಂದ್ರದಿಂದ XUV 500 ರಹಸ್ಯ ಬುಕ್ಕಿಂಗ್?
ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ XUV 500 ರಸ್ತೆಗಿಳಿದು ಹಲವು ತಿಂಗಳು ಕಳೆದಿದೆ. ಗ್ರಾಹಕರ ಬೇಡಿಕೆ ಪೂರೈಸಲಾಗದೆ ಕಂಪನಿಯು ತಾತ್ಕಾಲಿಕ ಅವಧಿಯ ಎರಡೇ ಎರಡು ಬಾರಿ ಬುಕ್ಕಿಂಗ್ ಅವಕಾಶ ನೀಡಿತ್ತು.
ಎರಡನೇ ಬಾರಿ ಡ್ರಾ ಆಯ್ಕೆ ಮೂಲಕ ಬುಕ್ಕಿಂಗ್ ಅವಕಾಶ ನೀಡಲಾಗಿತ್ತು. ಸುಮಾರು 7 ಸಾವಿರ ಎಕ್ಸ್‌ಯುವಿಗಾಗಿ 25 ಸಾವಿರಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಈ ಕಾರು ಖರೀದಿಸಲು ಇಚ್ಚಿಸಿದ ಗ್ರಾಹಕರಿಗೆ ನಿರಾಶೆಯಾದದ್ದೇ ಹೆಚ್ಚು. ಆದರೆ ಇದೀಗ ಒಂದು ರಹಸ್ಯ ಸುದ್ದಿ ಸ್ಪೋಟವಾಗಿದೆ.
ಲಾಟರಿ ಡ್ರಾ ಮೂಲಕ ಬುಕ್ಕಿಂಗ್ ಮಾಡಲು ಅವಕಾಶ ದೊರಕದ ಗ್ರಾಹಕರಿಗೆ ಕಂಪನಿಯು ಇದೀಗ ರಹಸ್ಯವಾಗಿ XUV 500 ಬುಕ್ಕಿಂಗ್ ಮಾಡಲು ಅವಕಾಶ ನೀಡುತ್ತಿದೆಯಂತೆ. ಆದರೆ ಕಂಪನಿಯು ಈ ಪ್ರಕ್ರಿಯೆಯನ್ನು ಸಾಧ್ಯವಿದಷ್ಟು ಗೌಪ್ಯವಾಗಿ ಮಾಡುತ್ತಿದೆ.
ಮಹೀಂದ್ರ ಕಂಪನಿಯು ನೂತನ ಎಕ್ಸ್‌ಯುವಿ ವೇಟಿಂಗ್ ಅವಧಿ ಕಡಿಮೆ ಮಾಡಲು ಯೋಜಿಸುತ್ತಿದೆ. ಕಂಪನಿಯು ಈಗಾಗಲೇ XUV 500 ಮಾಸಿಕ ಉತ್ಪಾದನಾ ಸಾಮರ್ಥ್ಯವನ್ನು 2 ಸಾವಿರ ಯುನಿಟ್‌ನಿಂದ 3 ಸಾವಿರ ಯುನಿಟ್‌ಗೆ ಹೆಚ್ಚಿಸಿದೆ.
ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಸೆಗ್ಮೆಂಟಿನಲ್ಲಿ ಆಕರ್ಷಕ ಬೆಲೆಗೆ ದೊರಕುವುದು ಇದರ ಮಾರಾಟ ಹೆಚ್ಚಲು ಪ್ರಮುಖ ಕಾರಣವಾಗಿದೆ. ಈ ಕಾರಿನ ಆರಂಭಿಕ ದರ 11,38,000 ರು. ಆಗಿದೆ. (ಕನ್ನಡ ಡ್ರೈವ್‌ಸ್ಪಾರ್ಕ್)


Click it and Unblock the Notifications









