ಮಹೀಂದ್ರ ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಬೆಂಗಳೂರಿನಲ್ಲಿ ಲಾಂಚ್
ಒಟ್ಟು 15.9 ಬಿಲಿಯನ್ ಅಮೆರಿಕ ಡಾಲರ್ ಮೌಲ್ಯದ ಮಹೀಂದ್ರ ಸಮೂಹದ ಭಾಗವಾದ ಮಹೀಂದ್ರ ಆಂಡ್ ಮಹೀಂದ್ರ ಲಿಮಿಟೆಡ್ (M & M) ಮಂಗಳವಾರ ಬೆಂಗಳೂರಿನಲ್ಲಿ ಬಹುನಿರೀಕ್ಷಿತ ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಹೆಸರಿನ ವಿಲಾಸಿಯುತ, ಶಕ್ತಿಯುತ ಪ್ರೀಮಿಯಂ ದರ್ಜೆಯ ಜಾಗತಿಕ ಎಸ್‌ಯುವಿ ಕಾರನ್ನು ಬಿಡುಗಡೆ ಮಾಡಿದೆ. ಕೊರಿಯಾದ ಸ್ಯಾಂಗ್ಯೊಂಗ್‌ನಲ್ಲಿ ವಿನ್ಯಾಸ ಹಾಗೂ ಅಭಿವೃದ್ಧಿಪಡಿಸಿದ ಈ ಮೂರನೇ ಪೀಳಿಗೆಯ ವಾಹನವು ಭಾರತೀಯ ಗ್ರಾಹಕರಿಗೆ ಹೇಳಿ ಮಾಡಿಸಿದಂತಿದೆ. ಬೆಂಗಳೂರಿನ ಮಹೀಂದ್ರ ವಿತರಕರಲ್ಲಿ ನವೆಂಬರ್ 20, 2012ರಿಂದ ಲಭ್ಯವಿದ್ದು, ಎಕ್ಸ್ ಶೋ ರೂಂ ದರ ಆರ್‌ಎಕ್ಸ್5 ಮಾದರಿಗೆ 18.06 ಲಕ್ಷ ಆಗಿದ್ದು, ಆರ್‌ಎಕ್ಸ್7 ಮಾದರಿಗೆ ರೂ. 2010 ಲಕ್ಷ ಆಗಿರುತ್ತದೆ.
ಸ್ಯಾಂಗ್ಯೊಂಗ್ ರೆಕ್ಸ್ಟಾನ್ ವಾಹನವನ್ನು ಪುಣೆಯ ಮಹೀಂದ್ರ ಚಕನ್ ಸ್ಥಾವರದಲ್ಲಿ ಜೋಡಣೆ ಮಾಡಲಾಗಿದ್ದು, ಭಾರತ ಹಾಗೂ ಕೊರಿಯಾದ ಸ್ಯಾಂಗ್ಯೊಂಗ್‌ನಿಂದ ಬಿಡಿಭಾಗ ಪೂರೈಸಲಾಗಿದೆ. ಮಹೀಂದ್ರ ಸಮೂಹದ ಸ್ಯಾಂಗೊಂಗ್ ರೆಕ್ಸ್ಟಾನ್ ವಾಹನವನ್ನು ಕಳೆದ ತಿಂಗಳು ಮುಂಬೈ ಹಾಗೂ ದೆಹಲಿಯಲ್ಲಿ ಬಿಡುಗಡೆ ಮಾಡಲಾಗಿದ್ದು, ಇದೀಗ ಬೆಂಗಳೂರು ಸೇರಿದಂತೆ ಚೆನ್ನೈ, ಹೈದರಾಬಾದ್, ಚಂಡೀಗಡ, ಪುಣೆ, ಲೂಧಿಯಾನ ಹಾಗೂ ಪಾಟಿಯಾಲದಲ್ಲಿ ಬುಕ್ಕಿಂಗ್‌ಗೆ ಅವಕಾಶವಿದೆ.

ಆರಾಮದಾಯಕ ಆಧುನಿಕ ಕಲ್ಪನೆ, ವಿನ್ಯಾಸ
ಎಲ್ ಆಕಾರದ ಪಾರ್ಕಿಂಗ್ ಲೈಟ್ ಜೊತೆಗೆ ಉತ್ತಮ ಕ್ಷಮತೆಯ ಹೆಡ್‌ಲ್ಯಾಂಪ್‌ಗಳು
ಕ್ರೋಂ ರೇಡಿಯೇಟರ್ ಗ್ರಿಲ್‌ಗಳು
ಎಲ್‌ಇಡಿ ಟೇಲ್ ಲ್ಯಾಂಪ್‌ಗಳು
ಎಲ್‌ಇಡಿ ಯುಕ್ತ ಇಂಡಿಕೇಟರ್‌ಗಳ ಜೊತೆಗೆ ಆಕರ್ಷಕ ಒಆರ್‌ವಿಎಂ.
10 ಸ್ಪೋಕ್‌ಗಳ ಅಲಾಯ್ ವೀಲ್.

ವಿಶ್ವದರ್ಜೆಯ ಒಳಾಂಗಣ
ಸ್ಯಾಂಗ್ಯೂಂಗ್ ವಾಹನದ ಒಳಗೆ ಆಸೀನರಾದರೆ ನೀವು ಬೇರೆಯದೇ ಪ್ರಪಂಚಕ್ಕೆ ಹೋಗುತ್ತೀರಿ. ಎರಡು ವರ್ಣದ ಕಪ್ಪು ಒಳಾಂಗಣ, ಪ್ಲಷ್ ಲೆಥರ್ ಸೀಟುಗಳು ಇದರ ಲಕ್ಷಣಗಳು. ಜೊತೆಗೆ ಸ್ವಯಂಚಾಲಿತ ಹವಾಮಾನ ನಿಯಂತ್ರಣ ವ್ಯವಸ್ಥೆಯು ಇದೆ. ಹೆಚ್ಚುವರಿಯಾಗಿ ಸೀಟುಗಳು ನಡುವೆ ಕೈ ಇಡಲು ಆರಾಮಾದಾಯಕ ವ್ಯವಸ್ಥೆಯಿದೆ.

ಅತ್ಯುತ್ತಮ ತಂತ್ರಜ್ಞಾನ
ರೆಕ್ಸ್ಟಾನ್ ಅನ್ನು ನೀವು ಚಾಲನೆ ಮಾಡಿದ ಸಂದರ್ಭದಲ್ಲಿ ತಂತ್ರಜ್ಞಾನ ನಿಮ್ಮ ನೆರವಿಗೆ ಬರುತ್ತದೆ. ಚಾಲಕನ ಸೀಟು ಸ್ವಯಂಪ್ರೇರಿತವಾಗಿ ಹೊಂದಾಣಿಕೆ ಆಗುವುದುದಷ್ಟೇ ಅಲ್ಲ, ನಿಮ್ಮ ಅಗತ್ಯಗಳನ್ನು ನೆನಪಿಡುತ್ತದೆ. ಇದು, ಹೊರಗಿನ ಕನ್ನಡಿಯನ್ನು ಹೊಂದಾಣಿಕೆ ಮಾಡುವುದಷ್ಟೇ ಸರಳವಾಗಿರುತ್ತದೆ. ನೇವಿಗೇಷನ್ ಸೌಲಭ್ಯದಲ್ಲಿ ಮ್ಯಾಪ್‌ಗಳು, ಆಟೋ ಹೆಡ್‌ಲ್ಯಾಂಪ್‌ಗಳು, ಸೆನ್ಸಿಂಗ್ ವೈಪರ್‌ಗಳನ್ನು ಹೊಂದಾಣಿಸಲಾಗಿದೆ. ತಕ್ಷಣವೇ ನಿಮ್ಮ ಗಮನ ಸೆಳೆಯುವುದು ಎಂದರೆ ಟಚ್ ಸ್ಕ್ರೀನ್‌ವುಳ್ಳ ಮಾಹಿತಿ ಪರದೆ, ಇದು, ದೃಶ್ಯ ಮತ್ತು ಶ್ರವ್ಯ ಮಾದರಿಗಳನ್ನು ಸರ್ಪೋರ್ಟ್ ಮಾಡಲಿದೆ.

ಸರಿತೂಗಲಾರದ ಸಾಧನೆ
ರೆಕ್ಸ್ಟಾನ್‌ಗೆ ತನ್ನ ಎಂಜಿನ್‌ನಿಂದಾಗಿ ವಿಭಿನ್ನ ವ್ಯಕ್ತಿತ್ವ ಬಂದಿದೆ. ನೀವು ಆಯ್ಕೆ ಮಾಡಿಕೊಳ್ಳುವ ಮಾದರಿ ಆಧರಿಸಿ ಯಾವ ಎಂಜಿನ್ ಇದೆ ಎಂಬುದು ತಿಳಿಯಲಿದೆ. ಆರ್‌ಎಕ್ಸ್5 ಮ್ಯಾನುವೆಲ್ ಟ್ರಾನ್ಸ್‌ಮಿಷನ್‌ನಲ್ಲಿ ಟಾರ್ಕ್ ಆನ್ ಡಿಮ್ಯಾಂಡ್ ಸಿಸ್ಟಂ ಇದ್ದರೆ, ಆರ್‌ಎಕ್ಸ್7 ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನಲ್ಲಿ ಆನ್ ವೀಲ್ ಡ್ರೈವ್‌ಸಿಸ್ಟಂ ಇದೆ. ಎರಡೂ ಮಾದರಿಗಳ ಗುಣಮಟ್ಟ, ಸಾಮರ್ಥ್ಯ ಅಂತರಾಷ್ಟ್ರೀಯವಾಗಿ ಸಾಬೀತಾಗಿದೆ.

ಆರ್‌ಎಕ್ಸ್5
ಸ್ಯಾಂಗ್ಯೊಂಗ್ ರೆಕ್ಸ್ಟಾನ್‌ನ ಮಹೀಂದ್ರ ಆರ್‌ಎಕ್ಸ್5 ಮಾದರಿಯು ಅತ್ಯಾಧುನಿಕ 2.7 ಲೀಟರ್‌ನ ಆರ್‌ಎಕ್ಸ್270 ಎಕ್‌ಡಿಐ, ಡೀಸೆಲ್ ಎಂಜಿನ್ ಒಳಗೊಂಡಿದ್ದು, ಅಧಿಕ ಶಕ್ತಿಯ 162 ಬಿಎಚ್‌ಪಿ, 340 ಎನ್‌ಎಂ ಟಾರ್ಕ್ ಒಳಗೊಂಡಿದೆ. ಇದು, ಇಂಧನ ಕ್ಷಮತೆ ಪ್ರತಿ ಲೀಟರ್‌ಗೆ 12.4 ಕಿ. ಮೀ (ಎಆರ್‌ಎಐ ಪ್ರಮಾಣೀಕೃತ) ಇದ್ದು, 5 ಸ್ಪೀಡ್ ಮಾನ್ಯುವಲ್ ಟ್ರಾನ್ಸ್‌ಮಿಷನ್ ಇದೆ.

ಆರ್‌ಎಕ್ಸ್7
ಈ ವಾಹನವು 2.7 ಲೀಟರ್ ಆರ್‌ಎಕ್ಸ್270 ಎಕ್ಸ್‌ವಿಟಿ ಎಂಜಿನ್ ಒಳಗೊಂಡಿದ್ದು, 184 ಬಿಎಚ್‌ಪಿ ಮತ್ತು 402 ಎನ್‌ಎಂ ಟಾರ್ಕ್ ಒಳಗೊಂಡಿದೆ. ಈ ಎಂಜಿನ್‌ನ 5 ಸ್ಪೀಡ್‌ನ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಒಳಗೊಂಡಿದೆ. ಮರ್ಸಿಡಿಸ್ ಬೆನ್ಜ್ ಟೆಕ್ನಾಲಜಿ ಆಳವಡಿಸಲಾಗಿದೆ. ಆರ್‌ಎಕ್ಸ್7 194 ಕಿಎಂಪಿಎಚ್ ವೇಗ ನೀಡಲಿದೆ. ಈ ಎಲ್ಲದರ ಜತೆಗೆ ರೆಕ್ಸ್ಟಾನ್ ಇಂಧನ ಕ್ಷಮತೆ ಪ್ರತಿ ಲೀಟರ್‌ಗೆ 11.18 ಕೀ. ಮೀ ಆಗಿದೆ (ಎಆರ್‌ಎಐ ಪ್ರಮಾಣೀಕೃತ)

ಆಲ್ ವೀಲ್ ಡ್ರೈವ್ (ಎಡಬ್ಲ್ಯುಡಿ)
ಆರ್‌ಎಕ್ಸ್7 ಮಾದರಿಯಲ್ಲಿರುವ ಎಡಬ್ಲ್ಯುಡಿ ಸೌಲಭ್ಯವು ಶೇ. 60ರಷ್ಟು ಟಾರ್ಕ್ ಅನ್ನು ಹಿಂದಿನ ಚಕ್ರಗಳು, ಶೇ. 40ರಷ್ಟನ್ನು ಮುಂದಿನ ಚಕ್ರಗಳಿಗೆ ವಿನಿಯೋಗಿಸಲಿದೆ. ಇದು, ತ್ವರಿತಗತಿಯಲ್ಲಿ ಚಾಲನೆ ಮಾಡಲು, ಎಲ್ಲ ಮಾದರಿಯ ರಸ್ತೆಗಳಿಗೆ ಹೊಂದಿಕೊಳ್ಳುವಂತೆ ರೂಪಿಸಿದ್ದು, ಸುರಕ್ಷತೆಗೆ ಒತ್ತು ನೀಡಲಾಗಿದೆ.

ಸಸ್ಪೆನ್ಷನ್
ಮಹೀಂದ್ರದದ ಸ್ಯಾಂಗ್ಯೊಂಗ್ ರೆಕ್ಸ್ಟಾನ್ ವಾಹನದ ಎದುರು ಆಂಟಿ ರೋಲ್ ಬಾರ್ ಇದ್ದು, ಸ್ವತಂತ್ರ ಫೈವ್ ಲಿಂಕ್ ಸಸ್ಪೆನ್ಷನ್ ಒಳಗೊಂಡಿದೆ.

ಸಣ್ಣ ಲಕ್ಷ್ಮಣಗಳು, ದೊಡ್ಡ ವ್ಯತ್ಯಾಸ
ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಅತ್ಯುತ್ತಮ ವೇಗವನ್ನು ನೀಡಲಿದ್ದು, ಯಾವುದೇ ಹಂತದಲ್ಲಿ ಉತ್ತಮ ಆರಾಮದಾಯಕವ್ನನು ನೀಡಲಿದೆ. ಕ್ರ್ಯೂಸ್ ಕಂಟ್ರೋಲ್, ಎಲೆಕ್ಟ್ರಿಕ್ ಸನ್‌ರೂಫ್ ಇದೆ. ಆರಾಮದಾಯಕ ಚಾಲನೆಯನ್ನು ಬಯಸುವ ಸುರಕ್ಷತೆಗೆ ಒತ್ತು ನೀಡುವುದನ್ನು ದೃಷ್ಟಿಯಲ್ಲಿಟ್ಟುಕೊಂಡೇ ರೂಪಿಸಲಾಗಿದೆ.

ಸುರಕ್ಷತೆ
ಮಹೀಂದ್ರ ಸ್ಯಾಂಗ್ಯೊಂಗ್ ರೆಕ್ಸ್ಟಾನ್‌ನಲ್ಲಿ ಬಹುಹಂತದ ಆಧುನಿಕ ಶೈಲಿಯ ಸುರಕ್ಷತಾ ಕ್ರಮಗಳನ್ನು ಆಳವಡಿಸಲಾಗಿದೆ. ಕೇಂದ್ರ ಸ್ಥಾನದಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಪಿ) ಆಳವಡಿಸಿದ್ದು, ಇದು ವಾಹನದ ವೇಗ, ದಿಕ್ಕು ಗಮನಿಸಲಿದ್ದು, ಚಾಲಕನ ನಿಯಂತ್ರಣ ತಪ್ಪಿದಾಗ ಪರಿಹಾರ ಕ್ರಮಗಳನ್ನು ಕೈಗೊಳ್ಳಲಿದೆ.

ಹಿಲ್ ಡಿಸ್ಸೆಂಟ್ ಕಂಟ್ರೋಲ್
ಈ ಸೌಲಭ್ಯವು ವಾಹನವು ಇಳಿಮುಖವಾಗಿ ವೇಗವಾಗಿ ಹೋಗುವುದನ್ನು ತಡೆಯಲಿದೆ. ಈ ಎಸ್‌ಯುವಿನಲ್ಲಿ ಆಂಟಿ ರೋಲ್ ಓವರ್ ಪ್ರೊಟೆಕ್ಷನ್ ಸೌಲಭ್ಯ ಇದ್ದು, ಕೆಲ ನಿರ್ದೀಷ್ಟ ವ್ಯಾಪ್ತಿಯಲ್ಲಿ ಅಪಾಯಕಾರಿಯಾದ ಚಾಲನಾ ಪರಿಸ್ಥಿತಿ ಇದ್ದರೆ ಎಚ್ಚರಿಸಲಿದೆ. ಇಂಥ ಸಂದರ್ಭದಲ್ಲಿ ಇಎಸ್‌ಪಿ ವ್ಯವಸ್ಥೆಗೆ ಸಂಜ್ಞೆ ಕಳುಹಿಸಲಿದ್ದು ಸ್ಥಿರತೆಯನ್ನು ಬಿಂಬಿಸಲಿದೆ. ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಕ್ಯಾಬಿನ್‌ನಲ್ಲಿ ಬಹುಹಂತದ ಏರ್‌ಬ್ಯಾಗ್‌ಗಳನ್ನು ಆಳವಡಿಸಲಾಗಿದ್ದು, ಪ್ರಯಾಣಿಕರು ಸುರಕ್ಷಿತವಾಗಿರುತ್ತಾರೆ.

ಸ್ಯಾಂಗ್ಯೊಂಗ್ ಪ್ಯಾಕೇಜ್
ಇದರ ಜತೆಗೆ ಸ್ಯಾಂಗ್ಯೊಂಗ್ ರೆಕ್ಸ್ಟಾನ್‌ಗೆ ಮಹೀಂದ್ರ ವ್ಯಾಪಕ ನೆಟ್‌ವರ್ಕ್‌ನಲ್ಲಿ ಸರ್ವಿಸ್ ಸೌಲಭ್ಯವಿದೆ. ಒಂದು ವರ್ಷ ಕಾಲ ರಸ್ತೆಯ ಬದಿಯ ನೆರವಿಗೆ ಜತೆಗೆ 2 ವರ್ಷ/100000 ಕಿ. ಮೀ ವರೆಗೂ ಸೇವಾ ಖಾತರಿಯಿದೆ. ಇದು ಕಿರಿಕಿರಿ ಮುಕ್ತ ಮಾಲೀಕತ್ವದ ಅನುಭವ ನೀಡಲಿದೆ.

ನಾಲ್ಕು ವರ್ಣಗಳಲ್ಲಿ ಲಭ್ಯ
ಸಾಟಿನ್ ವೈಟ್, ಮೂನ್‌ಡಸ್ಟ್ ಸಿಲ್ವರ್, ವೊಲ್ಕಾನೊ ಬ್ಲ್ಯಾಕ್, ಒಪುಲೆಂಟ್ ಪರ್ಪಲ್.


Click it and Unblock the Notifications








