ಶ್ರೀಲಂಕಾ ಪ್ರೀಮಿಯರ್ ಲೀಗಿಗೆ ಮಹೀಂದ್ರ ಪ್ರಾಯೋಜಕ
ಶ್ರೀಲಂಕಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಆಗಸ್ಟ್ 11ರಿಂದ ಆರಂಭವಾಗಲಿದೆ. ಮೂರು ವಾರಗಳ ಕಾಲ ನಡೆಯಲಿರುವ ಈ ಕ್ರಿಕೆಟ್ ಲೀಗ್ ಶ್ರೀಲಂಕಾದ ಕೊಲಂಬೊ ಮತ್ತು ಕ್ಯಾಂಡಿಯಲ್ಲಿ ನಡೆಯಲಿದೆ. "ಭಾರತದ ಪ್ರಮುಖ ಬಿಸಿನೆಸ್ ಹೌಸ್ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ಶ್ರೀಲಂಕಾ ಕ್ರಿಕೆಟ್ ಲೀಗ್ ಜೊತೆಗಿರಲಿದೆ" ಎಂದು ಶ್ರೀಲಂಕಾ ಕ್ರಿಕೆಟಿನ ಅಧ್ಯಕ್ಷರಾದ ಉಪಾಲಿ ಧರ್ಮದಾಸ ಹೇಳಿದ್ದಾರೆ.
2012 ಮೈಕ್ರೊಮ್ಯಾಕ್ಸ್ ಕ್ರಿಕೆಟ್ ಕಪ್ ನಲ್ಲಿ ಅಮೋಘ ಪ್ರದರ್ಶನ ನೀಡಿದ ದೇಶದ ಕ್ರಿಕೆಟ್ ತಂಡದ ಉಪನಾಯಕ ವಿರಾಟ್ ಕೋಹ್ಲಿ ಹೊಸ ಕಾರೊಂದನ್ನು ಉಡುಗೊರೆಯಾಗಿ ಪಡೆದಿದ್ದರು. ಈ ಟೂರ್ನಿಯ ಪ್ರಾಯೋಜಕ ಕಂಪನಿಯಾದ ರೆನೊ ಇಂಡಿಯಾ ನೂತನ ಡಸ್ಟರ್ ಕಾರನ್ನು ವಿರಾಟ್ ಕೋಹ್ಲಿಗೆ ನೀಡಿತ್ತು.
ಇತ್ತೀಚೆಗೆ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ವೆರಿಟೊ ಪರಿಷ್ಕೃತ ಆವೃತ್ತಿಯನ್ನು ಪರಿಚಯಿಸಿತ್ತು. 2012ರ ನೂತನ ಮಹೀಂದ್ರ ವೆರಿಟೊ ಬೇಸ್ ಪೆಟ್ರೋಲ್ ಆವೃತ್ತಿ ದರ 5.27 ಲಕ್ಷ ರು. ಮತ್ತು ಬೇಸ್ ಡೀಸೆಲ್ ಆವೃತ್ತಿ ದರ 6.26 ಲಕ್ಷ ರುಪಾಯಿ. ಇದು ಎರಡು ಪೆಟ್ರೋಲ್ ಮತ್ತು ಮೂರು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಸೇರಿದಂತೆ ಒಟ್ಟು ಐದು ಆವೃತ್ತಿಗಳಲ್ಲಿ ದೊರಕುತ್ತಿದೆ.
ಮಹೀಂದ್ರ ಕಂಪನಿಯ ಎಕ್ಸ್ ಯಿವಿ 500 ಕಾರಿಗಂತೂ ಈಗ ಬೊಂಬಾಟ್ ಬೇಡಿಕೆಯಿದೆ. ಒಟ್ಟಾರೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಗ್ರಾಹಕರ ಗಮನ ಸೆಳೆಯಲು ಶ್ರೀಲಂಕಾ ಪ್ರೀಮಿಯರ್ ಕ್ರಿಕೆಟ್ ಲೀಗ್ ಟೈಟಲ್ ಪ್ರಾಯೋಜಕತ್ವ ಕಂಪನಿಗೆ ಹೆಚ್ಚಿನ ಅವಕಾಶ ನೀಡಲಿದೆ.


Click it and Unblock the Notifications









