ಮಹೀಂದ್ರ ವಾಹನ ರಫ್ತು ಮೂರುಪಟ್ಟು ಹೆಚ್ಚಳ

ದೇಶದ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಮಹೀಂದ್ರ ಕಂಪನಿಯ ಜಾಗತಿಕ ವಹಿವಾಟು ಕಳೆದೆರಡು ವರ್ಷಗಳಿಂದ ಸದೃಢಗೊಳ್ಳುತ್ತಿದೆ. ಕಂಪನಿಯು ಏಷ್ಯಾ ಪೆಸಿಫಿಕ್ ರಾಷ್ಟ್ರಗಳಿಗೆ, ಆಫ್ರಿಕಾ, ದಕ್ಷಿಣ ಮತ್ತು ಲ್ಯಾಟಿನ್ ಅಮೆರಿಕ ದೇಶಗಳಿಗೆ ವಾಹನಗಳನ್ನು ರಫ್ತು ಮಾಡುತ್ತಿದೆ. ಇದೀಗ 2012ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಕಂಪನಿಯ ವಾಹನ ರಫ್ತು ಶೇಕಡ 70ರಷ್ಟು ಏರಿಕೆ ಕಂಡಿದೆ. ಕೇವಲ ಟ್ರಕ್ ರಫ್ತು ಮಾತ್ರವೇ ಶೇಕಡ 16ರಷ್ಟು ಪ್ರಗತಿ ದಾಖಲಿಸಿದೆ.

2004ರಲ್ಲಿ ಮಹೀಂದ್ರ ಕಂಪನಿಯು ದಕ್ಷಿಣ ಆಫ್ರಿಕಾದ ವಾಹನ ಮಾರುಕಟ್ಟೆಗೆ ಲಗ್ಗೆಯಿಟ್ಟಿತ್ತು. 2011ರ ಆರ್ಥಿಕ ವರ್ಷದಲ್ಲಿ ಅಲ್ಲಿ ಕಂಪನಿಯು ಸುಮಾರು 1761 ವಾಹನಗಳನ್ನು ಮಾರಾಟ ಮಾಡಿದೆ. 2012ರ ಆರ್ಥಿಕ ವರ್ಷದಲ್ಲಿ ಇದು 2,558 ಯುನಿಟಿಗೆ ತಲುಪಿತ್ತು. ಅಂದರೆ ಶೇಕಡ 45ರಷ್ಟು ಏರಿಕೆ ದಾಖಲಿಸಿದೆ.

ಕಂಪನಿಯ ಬೊಲೆರೊ ಪಿಕಪ್, ಸ್ಕಾರ್ಪಿಯೊ ಪಿಕಪ್, ಜಿನಿಯೊ ಪಿಕಪ್, ಸ್ಕಾರ್ಪಿಯೊ ಎಸ್‌ಯುವಿ, ಕ್ಷೈಲೊ ಎಂಪಿವಿ, ಕ್ಷೈಲೊ ವ್ಯಾನ್ ಮತ್ತು ಥಾರ್ ಜೀಪುಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಇತ್ತೀಚೆಗೆ ಮಹೀಂದ್ರ ಎಕ್ಸ್‌ಯುವಿ 500 ಕೂಡ ಜಾಗತಿಕ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಗಮನಾರ್ಹ ಬೇಡಿಕೆ ಪಡೆದುಕೊಂಡಿದೆ.

ಆಫ್ರಿಕಾ ಮಾತ್ರವಲ್ಲದೆ ಉಳಿದ ದೇಶಗಳಲ್ಲಿಯೂ ಕಂಪನಿಯ ಉತ್ಪನ್ನಗಳು ಗಮನಾರ್ಹವಾಗಿ ಏರಿಕೆ ಕಂಡಿದೆ. ಇತ್ತೀಚೆಗೆ ಮಹೀಂದ್ರ ಎಕ್ಸ್ ಯುವಿ 500 ಕಾರು ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿದಿಎ. ಮುಂದಿನ ವರ್ಷ ಜಾಗತಿಕ ಮಾರುಕಟ್ಟೆಯಲ್ಲಿ ರಫ್ತು ವಹಿವಾಟು 10 ಸಾವಿರ ಯುನಿಟ್ ದಾಟುವ ನಿರೀಕ್ಷೆಯನ್ನು ಕಂಪನಿ ವ್ಯಕ್ತಪಡಿಸಿದೆ.

More from DriveSpark

Article Published On: Wednesday, July 11, 2012, 16:17 [IST]
English summary

 Indian SUV maker Mahindra has strengthened its global presence over the past two years with exponential growth recorded. The company's exports have grown in the Asia-Pacific region, Africa, South and Latin America and USA. The company's Auto exports grew by 70% while Tractor exports grew by 16% in the financial year ending March 2012.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+