ವಾಯ್ಸ್ ತಂತ್ರಜ್ಞಾನ: ಹೇಳಿದಂತೆ ಕೇಳುವ ಮಹೀಂದ್ರ ಎಕ್ಸ್ ಯುವಿ

ಇದೀಗ ಬಂದ ಸುದ್ದಿಯ ಪ್ರಕಾರ ನೂತನ ಎಕ್ಸ್ ಯುವಿ 5ಒಒ ಕಾರಿಗೆ ಕಂಪನಿಯು ವಾಯ್ಸ್ ಕಮಾಂಡ್ ತಂತ್ರಜ್ಞಾನ ಅಳವಡಿಸಲು ನಿರ್ಧರಿಸಿದೆಯಂತೆ. ಹೀಗಾಗಿ ಈ ಕಾರಿಗೆ ಧ್ವನಿ ಮೂಲಕ ನಿರ್ದೇಶನ ನೀಡಬಹುದು. ಈ ಆಸಕ್ತಿದಾಯಕ ಫೀಚರನ್ನು ಕೆಲವು ವರ್ಷಗಳ ಹಿಂದೆ ಸ್ಕಾರ್ಪಿಯೊ ಕಾರಿಗೆ ಅಳವಡಿಸಿ ಟೆಸ್ಟ್ ಮಾಡಲಾಗಿತ್ತು.
ಸ್ಕಾರ್ಪಿಯೊ ಕಾರಿಗೆ ಪರಿಕ್ಷಾರ್ಥವಾಗಿ ಅಳವಡಿಸಿದ ಈ ತಂತ್ರಜ್ಞಾನದ ಮೂಲಕ ಡೋರ್ ಕ್ಲೋಸ್ ಮಾಡಲು ಮತ್ತು ಸೀಟ್ ಬೆಲ್ಟ್ ಟೈಟ್ ಮಾಡಲು ಸಾಧ್ಯವಾಗಿತ್ತು. ಅಂದರೆ ನಾವು ಬಾಯಲ್ಲಿ ಹೇಳಿದ ಸಂಜ್ಞೆಗಳನ್ನು ಈ ತಂತ್ರಜ್ಞಾನ ಪಾಲಿಸುತ್ತದೆ.
ಮಹೀಂದ್ರ ಕ್ಷೈಲೊ ಕಾರಿಗೂ ಈ ವಾಯ್ಸ್ ಕಮಾಂಡ್ ತಂತ್ರಜ್ಞಾನ ಅಳವಡಿಸಲು ಕಂಪನಿ ನಿರ್ಧರಿಸಿದೆ. ಈ ಮೂಲಕ ಆಡಿಯೋ ಸಿಸ್ಟಮ್, ಹೆಡ್ ಲ್ಯಾಂಪ್, ವೈಪರ್ ಆನ್/ಆಫ್, ಮೊಬೈಲ್ ಫೋನ್ ಬಳಕೆ ಇತ್ಯಾದಿ ಕೆಲಸಗಳಿಗೆ ಇದು ಸಹಕರಿಸುತ್ತದೆ.
Mahindra XUV 500 ಕಾರಿಗೆ ಕಂಪನಿಯು ಪ್ರಸ್ತಾಪ ಮಾಡಿದ ವಾಯ್ಸ್ ಕಮಾಂಡ್ ಸಿಸ್ಟಮ್ ಹೆಚ್ಚು ಅಡ್ವಾನ್ಸಡ್ ಮತ್ತು ಸುಧಾರಿತ ತಂತ್ರಜ್ಞಾನವನ್ನು ಹೊಂದಿರುವ ನಿರೀಕ್ಷೆಯಿದೆ. ಆದರೆ ಈ ಫೀಚರು ಇರುವ ಕಾರುಗಳು ಪ್ರಸಕ್ತ ವರ್ಷದ ಅಕ್ಟೋಬರ್ ತಿಂಗಳ ನಂತರ ದೊರಕಲಿದೆ. ಅಲ್ಲಿವರೆಗೆ ಕೇವಲ ಜಿಪಿಎಸ್ ನ್ಯಾವಿಗೇಷನ್ ಸಿಸ್ಟಮ್ ಗೆ ಗ್ರಾಹಕರು ತೃಪ್ತಿಪಡಬೇಕಷ್ಟೇ! (ಕನ್ನಡ ಡ್ರೈವ್ ಸ್ಪಾರ್ಕ್ )


Click it and Unblock the Notifications








