ಡೋಂಟ್ ವರಿ, ಮಹೀಂದ್ರ XUV500 ಉತ್ಪಾದನೆ ಹೆಚ್ಚಾಗುತ್ತೆ..

ದೇಶದ ಎಸ್‌ಯುವಿ ಸ್ಪೆಷಲಿಸ್ಟ್ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ಶೀಘ್ರದಲ್ಲಿ XUV500 ಉತ್ಪಾದನೆ ಹೆಚ್ಚಿಸಲಿದೆ. ಕಂಪನಿಯು ಈಗ ಸುಮಾರು 3 ಸಾವಿರ ಎಕ್ಸ್ ಯುವಿ ಉತ್ಪಾದಿಸುತ್ತಿದ್ದು, ಇದನ್ನು 5 ಸಾವಿರ ಯುನಿಟಿಗೆ ಹೆಚ್ಚಿಸಲು ನಿರ್ಧರಿಸಿದೆ. ಹೀಗಾಗಿ ಮಹೀಂದ್ರ XUV500 ಕಾರು ಖರೀದಿಸಲು ಕಾದು ನಿಂತವರು ಕೊಂಚ ನಿರಾಳವಾಗಿರಬಹುದು.

ಇದರೊಂದಿಗೆ ಕಂಪನಿಯು XUV500ನ್ನು ಜಾಗತಿಕ ಮಾರುಕಟ್ಟೆಗೂ ಪರಿಚಯಿಸಲು ನಿರ್ಧಾರಿಸಿದೆ. ಅಂದ್ರೆ XUV500 ಆಸ್ಟ್ರೇಲಿಯಾ, ಚಿಲ್ಲಿ, ಇಟಲಿ ದೇಶಗಳಿಗೆ ಪ್ರಯಾಣ ಬೆಳೆಸಲಿದೆ. ದೇಶದಲ್ಲಿನ ಅತ್ಯಧಿಕ ಬೇಡಿಕೆಯಿಂದಾಗಿ ವಿದೇಶಿ ಮಾರುಕಟ್ಟೆಗೆ ರಫ್ತು ಮಾಡದಿರಲು ಈ ಹಿಂದೆ ನಿರ್ಧರಿಸಿತ್ತು. ಈಗ ಉತ್ಪಾದನೆ ಹೆಚ್ಚಿಸುವ ಮೂಲಕ ಎಕ್ಸ್‌ಯುವಿ ರಫ್ತು ಮಾಡಲು ನಿರ್ಧರಿಸಿದೆ.

ಮಹೀಂದ್ರ ಕಂಪನಿಯು ಎಕ್ಸ್‌ಯುವಿಯನ್ನು 2011ರ ಸೆಪ್ಟಂಬರ್ ತಿಂಗಳಲ್ಲಿ ಹೊರತಂದಿತ್ತು. ದೇಶದ ರಸ್ತೆಗಿಳಿದ ಮರುದಿನವೇ ಈ ಕಾರನ್ನು ದಕ್ಷಿಣ ಆಫ್ರಿಕಾಕ್ಕೂ ಪರಿಚಯಿಸಲಾಗಿತ್ತು. ಅದೇ ಸಮಯದಲ್ಲಿ ಉಳಿದ ದೇಶಗಳಿಗೂ ಪರಿಚಯಿಸುವ ಯೋಜನೆಯಿರುವುದಾಗಿ ಕಂಪನಿ ಪ್ರಕಟಿಸಿತ್ತು. ಆದರೆ ದೇಶದಲ್ಲಿ ಸಿಕ್ಕ ಅನಿರೀಕ್ಷಿತ ಬೇಡಿಕೆಯಿಂದಾಗಿ ಕಂಪನಿಯ ಜಾಗತಿಕ ಯೋಜನೆ ಉಲ್ಟಾ ಪಲ್ಟಾ ಆಗಿತ್ತು.

ದೇಶದಲ್ಲಿ ಈಗಾಗಲೇ ಕಂಪನಿಯ ನಿರೀಕ್ಷೆ ಮೀರಿ ಎಕ್ಸ್ ಯುವಿ ಬುಕ್ಕಿಂಗ್ ಆಗಿದ್ದು, ಸಮರ್ಪಕ ಸಮಯಕ್ಕೆ ಪೂರೈಸುವುದೇ ಕಂಪನಿಗೆ ಸಮಸ್ಯೆಯಾಗಿದೆ. ಕಂಪನಿಯು ಲಕ್ಕಿ ಡ್ರಾ ಮೂಲಕ ಎಕ್ಸ್ ಯುವಿ ಪಡೆಯುವ ಅವಕಾಶ ನೀಡಿತ್ತು. ಈ ಕಾರು ಪ್ರಸಕ್ತ ವರ್ಷದ ಮಾರ್ಚ್ ತಿಂಗಳಲ್ಲಿ ಸುಮಾರು 3,196 ಯುನಿಟ್ ಮಾರಾಟವಾಗಿತ್ತು. ಇದರ ಆರಂಭಿಕ ದರ 11.38 ಲಕ್ಷ ರು. ಇರುವುದು ಇದರ ಮಾರಾಟ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

More from DriveSpark

Article Published On: Monday, April 30, 2012, 15:57 [IST]
English summary
Mahindra & Mahindra will raise the production of the SUV XUV500 to 5,000 units from 3,000 now. Mahindra had slow downed exports of the XUV500, as it planned earlier, due to overwhelming response it received from the domestic market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+