ಪರಿವರ್ತಿತ ಮಹೀಂದ್ರ ಎಕ್ಸ್‌ಯುವಿ500 ಬೆಂಗಳೂರಿನಲ್ಲಿ ಪ್ರತ್ಯಕ್ಷ!

By Nagaraja

ನಾವು ಹಲವು ರೀತಿಯ ಪರಿವರ್ತಿತ ಕಾರು, ಬೈಕ್ ಗಳನ್ನು ನೋಡಿರುತ್ತೇವೆ. ಹಾಗಿರಬೇಕೆಂದರೆ ನಮ್ಮ ಬೆಂಗಳೂರಿನಲ್ಲಿ ವಿಶಿಷ್ಟವಾಗಿ ಮಾರ್ಪಾಡುಗೊಳಿಸಲಾದ ಮಹೀಂದ್ರ ಎಕ್ಸ್ ಯುವಿ500 ಕಾರು ಪ್ರತ್ಯಕ್ಷಗೊಂಡಿದೆ.

Also Read: ರಾಷ್ಟ್ರಪತಿ ಪ್ರಣಬ್ ಹಾಗೂ ವಿಶ್ವ ಪ್ರಥಮ ಪ್ರಜೆಗಳ ಕಾರುಗಳು

ಕೆಳಗಡೆ ಕೊಟ್ಟಿರುವ ಚಿತ್ರಗಳೇ ಸಾರುವಂತೆಯೇ ಮಹೀಂದ್ರ ಎಕ್ಸ್‌ಯುವಿ500 ಕಾರಿನಲ್ಲಿ ಹೆಚ್ಚಿನ ಪ್ರಮಾಣದ ಬದಲಾವಣೆಗಳನ್ನು ತರಲಾಗಿದೆ. ಅಷ್ಟಕ್ಕೂ ಇದು ರಸ್ತೆ ಸಂಚಾರಕ್ಕೆ ಯೋಗ್ಯವೇ ಎಂಬುದು ಪ್ರಶ್ನೆಯಾಗಿ ಕಾಡುತ್ತಿದೆ.

ಪರಿವರ್ತಿತ ಮಹೀಂದ್ರ ಎಕ್ಸ್‌ಯುವಿ500 ಬೆಂಗಳೂರಿನಲ್ಲಿ ಪ್ರತ್ಯಕ್ಷ!

ಬೆಂಗಳೂರು ತಳಹದಿಯ ಹಾಡ್ ಜೋನ್ ರೇಸಿಂಗ್ ಟೆಕ್ನಾಲಜಿಯ ಆಫ್ ರೋಡ್ ಉತ್ಸಾಹಿ ಜುಬೈರ್ ಅಬ್ದುಲಾ ಎಂಬವರಿಗೆ ಸೇರಿದ ಎಕ್ಸ್‌ಯುವಿ500 ಕಾರು ಇದಾಗಿದೆ.

ಪರಿವರ್ತಿತ ಮಹೀಂದ್ರ ಎಕ್ಸ್‌ಯುವಿ500 ಬೆಂಗಳೂರಿನಲ್ಲಿ ಪ್ರತ್ಯಕ್ಷ!

ಎಂಒಸಿ ಕಸ್ಟಮ್ ಕಾರು ಶೋದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ ಈ ಕಾರಿನ ಗರಿಷ್ಠ ಸಂಖ್ಯೆಯ ಆಫರ್ ರೋಡ್ ಆಕ್ಸೆಸರಿಗಳನ್ನು ಬಳಕೆ ಮಾಡಲಾಗಿದ್ದು, XUV500 INtrepid ಎಂದು ಗುರುತಿಸಲ್ಪಟ್ಟಿದೆ.

ಪರಿವರ್ತಿತ ಮಹೀಂದ್ರ ಎಕ್ಸ್‌ಯುವಿ500 ಬೆಂಗಳೂರಿನಲ್ಲಿ ಪ್ರತ್ಯಕ್ಷ!

ಕಪ್ಪು ವರ್ಣದ ಕಾರಿನ ಹೊರಮೈಯಿಂದ ಹಿಡಿದು ಒಳಮೈ ವರೆಗೂ ಹೆಚ್ಚಿನ ಪ್ರಮಾಣದ ಪರಿವರ್ತನೆಯನ್ನು ತರಲಾಗಿದೆ. ಸಂಪೂರ್ಣವಾಗಿ ಬದಲಾಯಿಸಲಾದ ಪರಿಷ್ಕೃತ ಫ್ರಂಟ್ ಗ್ರಿಲ್ ಹಾಗೂ ಮ್ಯಾಟ್ ಬ್ಲ್ಯಾಕ್ ಬಣ್ಣವನ್ನು ಬಳಿಯಲಾಗಿದೆ.

ಪರಿವರ್ತಿತ ಮಹೀಂದ್ರ ಎಕ್ಸ್‌ಯುವಿ500 ಬೆಂಗಳೂರಿನಲ್ಲಿ ಪ್ರತ್ಯಕ್ಷ!

ಎಲ್ ಇಡಿ ಲೈಟ್ ಬಾರ್, ಎಲ್ ಇಡಿ ಸ್ಪಾಟ್ ಲೈಟ್, ಮುಂಭಾಗದ ಬೊನೆಟ್ ಮೇಲೆ ಹೊರಗಿನ ರಿಯರ್ ವ್ಯೂ ಮಿರರ್, ಕಾಸ್ಮೆಟಿಕ್ ರೂಫ್ ಲೈನ್, ಹೈ ಲಿಫ್ಟ್ ಜಾಕ್, ಜೆರ್ರಿ ಕ್ಯಾನ್, ಎಫ್1 ತರಹದ ಬ್ರೇಕ್/ಸ್ಟಾಪ್ ಲ್ಯಾಂಪ್, ಆಫ ರೋಡ್ ಚಕ್ರಗಳು ಇದರಲ್ಲಿದೆ.

ಪರಿವರ್ತಿತ ಮಹೀಂದ್ರ ಎಕ್ಸ್‌ಯುವಿ500 ಬೆಂಗಳೂರಿನಲ್ಲಿ ಪ್ರತ್ಯಕ್ಷ!

ದೊಡ್ಡದಾದ ಚಕ್ರಗಳು ನಿಮ್ಮ ಗಮನ ಸೆಳೆಯಲಿದೆ. ಇದಕ್ಕೆ ತಕ್ಕುದಾಗಿ ಕೆಂಪು ರಿಮ್ ಜೋಡಣೆ ಮಾಡಲಾಗಿದೆ. ಹೀಗೆ ಕಪ್ಪು-ಕೆಂಪು ವರ್ಣದ ಮಿಶ್ರಣವು ಕಾರಿನ ಎಲ್ಲ ಕಡೆಯೂ ಪ್ರತಿಬಿಂಬಿಸುತ್ತದೆ.

ಪರಿವರ್ತಿತ ಮಹೀಂದ್ರ ಎಕ್ಸ್‌ಯುವಿ500 ಬೆಂಗಳೂರಿನಲ್ಲಿ ಪ್ರತ್ಯಕ್ಷ!

ಅಷ್ಟಕ್ಕೂ ಇಷ್ಟೆಲ್ಲ ಬದಲಾವಣೆಗಳನ್ನು ತರಲು ಬರೋಬ್ಬರಿ 12 ಲಕ್ಷ ರುಪಾಯಿಗಳನ್ನು ವ್ಯಯ ಮಾಡಲಾಗಿದೆ.

ಪರಿವರ್ತಿತ ಮಹೀಂದ್ರ ಎಕ್ಸ್‌ಯುವಿ500 ಬೆಂಗಳೂರಿನಲ್ಲಿ ಪ್ರತ್ಯಕ್ಷ!

ಹಾಗಿದ್ದರೆ ಪ್ರಸ್ತುತ ಮಹೀಂದ್ರ ಎಕ್ಸ್‌ಯುವಿ500 ನಿಮಗೂ ಇಷ್ಟವಾದ್ದಲ್ಲಿ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಉಲ್ಲೇಖಿಸಲು ಮರೆಯದಿರಿ...

ಇವನ್ನೂ ಓದಿ...

ವಿಶ್ವಪ್ರಸಿದ್ಧ ರಾಜಮನೆತನದ ಕಾರುಗಳು

Most Read Articles

Kannada
English summary
Heavily Modified Mahindra XUV500 from Bengaluru
Story first published: Monday, February 22, 2016, 17:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X