1.99 ಲೀಟರ್ ಎಂಜಿನ್ ಆಯ್ಕೆಯೊಂದಿಗೆ ಸ್ಕಾರ್ಪಿಯೊ, ಎಕ್ಸ್‌ಯುವಿ500 ಲಾಂಚ್

Written By:

ಎಸ್‌ಯುವಿ ದೈತ್ಯ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಅತಿ ನೂತನ 1.99 ಲೀಟರ್ ಎಂಹಾಕ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ತನ್ನ ಜನಪ್ರಿಯ ಸ್ಕಾರ್ಪಿಯೊ ಮತ್ತು ಎಕ್ಸ್‌ಯುವಿ500 ಮಾದರಿಗಳನ್ನು ಪರಿಚಯಿಸಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 2000 ಸಿಸಿ ಗಿಂತಲೂ ಮೇಲ್ಪಟ್ಟ ಡೀಸೆಲ್ ಎಂಜಿನ್ ಕಾರುಗಳ ಓಡಾಟಕ್ಕೆ ಸುಪ್ರೀಂ ಕೋರ್ಟ್ ನಿಷೇಧ ಹೇರಿರುವ ಬೆನ್ನಲ್ಲೇ ಮಹೀಂದ್ರದಿಂದ ಇಂತಹದೊಂದು ನಿರ್ಧಾರ ಕಂಡುಬಂದಿದೆ.

To Follow DriveSpark On Facebook, Click The Like Button
ಮಹೀಂದ್ರ ಸ್ಕಾರ್ಪಿಯೊ

ಇದಕ್ಕೂ ಮೊದಲು ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕ್ರಮಕ್ಕೆ ಮುಂದಾಗಿರುವ ಸುಪ್ರೀಂ ಕೋರ್ಟ್ 2.0 ಲೀಟರ್ ಗಿಂತಲೂ ಮೇಲ್ಪಟ್ಟ ಡೀಸೆಲ್ ಕಾರುಗಳಿಗೆ ನಿರ್ಬಂಧ ಹೇರಿತ್ತು.

ನೂತನ ಸ್ಕಾರ್ಪಿಯೊ ಹಾಗೂ ಎಕ್ಸ್‌ಯುವಿ500 ಕ್ರೀಡಾ ಬಳಕೆಯ ವಾಹನವೀಗ 1.99 ಲೀಟರ್ ಎಂಹಾಕ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಾಗಲಿದೆ. ಈ ಪೈಕಿ ಸ್ಕಾರ್ಪಿಯೊ ಮಾದರಿಯು 120 ಹಾಗೂ ಎಕ್ಸ್‌ಯುವಿ500 ಕಾರು 140 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಮಹೀಂದ್ರ ಎಕ್ಸ್‌ಯುವಿ500

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಸ್ಕಾರ್ಪಿಯೊ: 9.5 ಲಕ್ಷ ರು.ಗಳಿಂದ 14.61 ಲಕ್ಷ ರು.

ಸ್ಕಾರ್ಪಿಯೊ: 9.5 ಲಕ್ಷ ರು.ಗಳಿಂದ 14.61 ಲಕ್ಷ ರು.

English summary
Mahindra Launches 1.99-litre Diesel Engine For Scorpio & XUV5OO
Story first published: Saturday, January 23, 2016, 16:40 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

X