ಕಡಿಮೆ ಬೆಲೆಯ ಮಹೀಂದ್ರ ಎಕ್ಸ್‌ಯುವಿ500 ಆಟೋಮ್ಯಾಟಿಕ್ ಕಾರು ಬಿಡುಗಡೆ
ಆಟೋಮ್ಯಾಟಿಕ್ ಕಾರುಗಳ ಮೇಲಿನ ದೇಶದ ಗ್ರಾಹಕರ ಅನುಕಂಪ ಮುಂದುವರಿತ್ತಲೇ ಇದೆ. ಇದನ್ನೇ ಗಮನದಲ್ಲಿಟ್ಟುಕೊಂಡಿರುವ ದೇಶದ ಮುಂಚೂಣಿಯ ಸಂಸ್ಥೆಗಳು ನಿರಂತರ ಅಂತರಾಳದಲ್ಲಿ ಆಟೋಮ್ಯಾಟಿಕ್ ಕಾರುಗಳನ್ನು ಬಿಡುಗಡೆ ಮಾಡುತ್ತಲೇ ಇದೆ.
ಇದಕ್ಕೆ ಮಗದೊಂದು ಸೇರ್ಪಡೆಯೆಂಬಂತೆ ದೇಶದ ನಂ.1 ಕ್ರೀಡಾ ಬಳಕೆಯ ವಾಹನ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ, ತನ್ನ ಜನಪ್ರಿಯ ಎಕ್ಸ್ ಯುವಿ500 ಕಾರಿನ ಮಿಡ್ ಡಬ್ಲ್ಯು6 ವೆರಿಯಂಟ್ ನಲ್ಲೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲು ನಿರ್ಧರಿಸಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಮಹೀಂದ್ರ ಎಕ್ಸ್ ಯುವಿ500 ಟಾಪ್ ಎಂಡ್ ವೆರಿಯಂಟ್ ಗಳಲ್ಲಿ ಈಗಾಗಲೇ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೀಡಲಾಗುತ್ತಿದೆ. ಈಗ ಮಧ್ಯಂತರ ವೆರಿಯಂಟ್ ನಲ್ಲೂ ನೀಡುವ ಮೂಲಕ ಹೆಚ್ಚಿನ ಸಂಖ್ಯೆಯ ಗ್ರಾಹಕರಿಗೆ ಕೈಗೆಟುಕುವಂತೆ ಮಾಡಿದೆ.

ಮಹೀಂದ್ರ ಈಗ ಬಿಡುಗಡೆ ಮಾಡಿರುವ ಎಕ್ಸ್ ಯುವಿ500 ಡಬ್ಲ್ಯು6 ಆಟೋಮ್ಯಾಟಿಕ್ ಕಾರಿನ ಮುಂಬೈ ಎಕ್ಸ್ ಶೋ ರೂಂ ಬೆಲೆ 14.29 ಲಕ್ಷ ರು.ಗಳಾಗಿರಲಿದೆ.

ಇದರ ಹೊರತಾಗಿ ಹೆಚ್ಚಿನ ಬದಲಾವಣೆಗಳು ಕಂಡುಬರುವುದಿಲ್ಲ. ಇದರಲ್ಲಿ ಸ್ಮಾರ್ಟ್ ಕೀ, ರಿವರ್ಸ್ ಕ್ಯಾಮೆರಾ, ಡೋರ್ ಅಜರ್ ವಾರ್ನಿಂಗ್ ಸಿಸ್ಟಂ ವ್ಯವಸ್ಥೆಗಳ ಕೊರತೆ ಕಾಡಲಿದೆ.

2.2 ಲೀಟರ್ ಫೋರ್ ಸಿಲಿಂಡರ್ ಎಂಹಾಕ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಡಬ್ಲ್ಯು6 ಮಾದರಿಯು 320 ಎನ್ ಎಂ ತಿರುಗುಬಲದಲ್ಲಿ ಗರಿಷ್ಠ 140 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಇನ್ನುಳಿದಂತೆ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್, ಹಿಲ್ ಹೋಲ್ಡ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ ಮುಂತಾದ ವ್ಯವಸ್ಥೆಗಳು ಲಭ್ಯವಾಗಲಿದೆ.

ಬೆಲೆಯನ್ನು ಗಮನಕ್ಕೆ ತೆಗೆದುಕೊಂಡಾಗ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಅತಿ ನೂತನ ಟೊಯೊಟಾ ಕ್ರೈಸ್ಟಾ ಮಹೀಂದ್ರ ಎಕ್ಸ್ ಯುವಿ500 ಕಾರಿಗೆ ಪ್ರತಿಸ್ಪರ್ಧಿಯಾಗಲಿದೆ. ಈ ಹಿನ್ನೆಲೆಯಲ್ಲಿ ಆಕ್ರಮಣಕಾರಿ ಮಾರಾಟ ನೀತಿ ಅನುಸರಿಸಲು ಮಹೀಂದ್ರ ಮುಂದಾಗಿದೆ.

ಇದರೊಂದಿಗೆ ಮಹೀಂದ್ರ ಎಕ್ಸ್‌ಯುವಿ500 ಆಟೋಮ್ಯಾಟಿಕ್ ವೆರಿಯಂಟ್ ಗಳ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಇದೀಗ ಡಬ್ಲ್ಯು6 ಫೋರ್ ವೀಲ್ ಡ್ರೈವ್, ಡಬ್ಲ್ಯು
8 ಫೋರ್ ವೀಲ್ ಡ್ರೈವ್, ಡಬ್ಲ್ಯು10 ಫೋರ್ ವೀಲ್ ಡ್ರೈವ್ ಮತ್ತು ಡಬ್ಲ್ಯು
10 ಆಲ್ ವೀಲ್ ಡ್ರೈವ್ ವ್ಯವಸ್ಥೆಗಳಲ್ಲಿ ಲಭ್ಯವಾಗಲಿದೆ.


Click it and Unblock the Notifications








