ಬೆಸ್ಟ್ ಕಾರುಗಳು: ಕೊಟ್ಟ ದುಡ್ಡಿಗೆ ಎಕ್ಸ್ ಯುವಿ ಮೋಸ ಮಾಡೋಲ್ಲ!

 Mahindra XUV 5oo Best Value for Money SUV
ಯಾವುದು ಬೆಸ್ಟ್ ಕಾರು? ವಿನ್ಯಾಸದಲ್ಲಿ ಬೆಸ್ಟ್ ಕಾರು ಯಾವುದು? ಮೈಲೇಜಲ್ಲಿ ಬೆಸ್ಟ್ ಯಾವುದು? ಯಾವ ಆವೃತ್ತಿ ಖರೀದಿಸಬಹುದು? ಮಧ್ಯಮಗಾತ್ರದ ಸಲೂನ್ ಕಾರಲ್ಲಿ ಯಾವುದು ಉತ್ತಮ? ಯಾವ ಐಷಾರಾಮಿ ಕಾರು ನಮಗಿಷ್ಟವಾಗಿದೆ? ಸ್ಪೋರ್ಟ್ ಯುಟಿಲಿಟಿಯಲ್ಲಿ ನಮ್ಮ ಆಯ್ಕೆ ಯಾವುದು? ಹೀಗೆ ಒಂದಿಷ್ಟು ಒಳ್ಳೆಯ ಕಾರುಗಳನ್ನು ನಾವು ಆಯ್ಕೆ ಮಾಡಿದ್ದೇವೆ.

ನಮಗಿಷ್ಟವಾದ ಕಾರು ನಿಮಗಿಷ್ಟವಾಗಬೇಕೆಂದಿಲ್ಲ. ಆದರೆ ಇಷ್ಟವಾದರೂ ಆಗಬಹುದು. ಇಲ್ಲೊಂದಿಷ್ಟು ನಮ್ಮಿಷ್ಟದ ಕಾರುಗಳನ್ನು ನೀಡುತ್ತಿದ್ದೇವೆ. ಅದು ನಿಮಗೂ ಇಷ್ಟವಾಗಬಹುದು ಎನ್ನುವ ನಿರೀಕ್ಷೆ ಕನ್ನಡ ಡ್ರೈವ್ ಸ್ಪಾರ್ಕಿನದು.

ಮಹೀಂದ್ರ ಎಕ್ಸ್ ಯುವಿ 5ಒಒ: ಕೊಟ್ಟ ದುಡ್ಡಿಗೆ ಮೋಸವಾಗಬಾರದು ಅನ್ನುವರಿಗೆ ಬೆಸ್ಟ್ ಕಾರು ಯಾವುದು? ಕನ್ನಡ ಡ್ರೈವ್ ಸ್ಪಾರ್ಕ್ ಪ್ರಕಾರ ಮಹೀಂದ್ರ ಎಕ್ಸ್ ಯುವಿ 5ಒಒ. ಆದರೆ ಸದ್ಯಕ್ಕೆ ಈ ಕಾರಿನ ಬುಕ್ಕಿಂಗ್ ಮಾಡೋದೇ ದೊಡ್ಡ ಸಮಸ್ಯೆ. ಗ್ರಾಹಕರ ಬೇಡಿಕೆಯನ್ನು ಸಮರ್ಥವಾಗಿ ಪೂರೈಸಲಾಗದೇ ಕಂಪನಿ ಪರದಾಡುತ್ತಿದೆ.

ಎಕ್ಸ್ ಯುವಿ 5ಒಒ ಫೀಚರುಗಳಿಗೆ, ವಿನ್ಯಾಸಕ್ಕೆ ಅದರ ದರ ಕಡಿಮೆ ಅನಿಸುತ್ತದೆ. ಎಸ್ ಕ್ಲಾಸ್ ಕಾರುಗಳಿಗೆ ಕಡಿಮೆಯಿಲ್ಲದಂತೆ ಮಹೀಂದ್ರ ಎಕ್ಸ್ ಯುವಿ 5ಒಒ ಕಾರಿದೆ. ಆದರೆ ಈ ಸೆಗ್ಮೆಂಟಿನ ಕಾರುಗಳ ದರಕ್ಕೆ ಹೋಲಿಸಿದರೆ ಎಕ್ಸ್ ಯುವಿ ತುಂಬಾ ಅಗ್ಗ. ಇದರ ದರ ಸುಮಾರು 12 ಲಕ್ಷ ರುಪಾಯಿ ಆಸುಪಾಸಿನಲ್ಲಿದೆ.

ಡಬ್ಲ್ಯು8 ಆವೃತ್ತಿಯಲ್ಲಿ ಕಲರ್ ಟಚ್ ಸ್ಕ್ರೀನ್ ಇದ್ದು, ಜಿಪಿಎಸ್ ಡೇಟಾ, ರೇಡಿಯೋ, ಎಯುಎಕ್ಸ್/ಯುಎಸ್ ಬಿ ಸೆಟ್ಟಿಂಗ್ ಇದೆ. ಇದರಲ್ಲಿ ವಾಯ್ಸ್ ಆಕ್ಟಿವೇಷನ್ ಕೂಡ ಇದೆ. ಟಾಪ್ ಆವೃತ್ತಿಯಲ್ಲಿ ಟೈರ್ ಪ್ರೆಷರ್ ಸೆನ್ಸಾರ್ ಕೂಡ ಇದೆ.

ಮಹೀಂದ್ರ ಎಕ್ಸ್ ಯುವಿ 5ಒಒ ಎಲ್ಲಾ ಆವೃತ್ತಿಗಳಲ್ಲೂ ಆಡಿಯೋ ಸಿಸ್ಟಮ್, ರೈನ್ ಸೆನ್ಸಿಂಗ್ ವೈಪರ್, ಲೈಟ್ ಸೆನ್ಸಿಂಗ್ ಹೆಡ್ ಲೈಟ್ಸ್, ಪಾರ್ಕಿಂಗ್ ಸೆನ್ಸಾರ್ ಮತ್ತು ಕ್ರೂಷ್ ಕಂಟ್ರೋಲ್ ಇತ್ಯಾದಿ ಫೀಚರುಗಳಿವೆ. ಎಕ್ಸ್ ಯುವಿ ಕಾರು ನೋಡಲು ಹಲವು ಲಕ್ಷ ರುಪಾಯಿಗಳ ಲಕ್ಷುರಿ ಕಾರಿನಂತೆ ಭಾಸವಾಗುತ್ತದೆ.

ಹೀಗಾಗಿ ಈ ಕಾರು ನಮ್ಮ ಪ್ರಕಾರ ವ್ಯಾಲ್ಯೂ ಫಾರ್ ಮನಿ. ಕೊಟ್ಟ ಹಣಕ್ಕೆ ಮೋಸವಿಲ್ಲದ ಕಾರಿದು. ಈ ಸರಣಿ ಲೇಖನದಲ್ಲಿ ಇನ್ನಷ್ಟು ಲೇಖನಗಳು ಮೂಡಿಬರಲಿವೆ. (ಮಹೀಂದ್ರ ಎಕ್ಸ್ ಯುವಿ 5ಒಒ ಕುರಿತು ಇನ್ನಷ್ಟು ಓದಿರಿ)

More from DriveSpark

Article Published On: Thursday, February 16, 2012, 12:05 [IST]
English summary
Mahindra XUV 5oo Value for Money SUV. The new XUV 500 will be available in three variants and the entry level model will be priced at RS.10.80 lakhs (ex showroom- Delhi).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+