ಮಹೀಂದ್ರ ಕ್ಸೈಲೋಗೆ ಮಾಸ್ಟರ್ ಬ್ರಾಂಡ್ 2012 ಪ್ರಶಸ್ತಿ
ದೇಶದ ಪ್ರಮುಖ ಕಾರು ತಯಾರಕ ಕಂಪನಿಯಾದ ಮಹೀಂದ್ರ ಆಂಡ್ ಮಹೀಂದ್ರ (M & M) ಕಂಪನಿಯು ಇತ್ತೀಚೆಗಷ್ಟೇ ನೂತನ ಕ್ಸೈಲೋ ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು. ಇದೀಗ ಈ ಮಲ್ಟಿ ಯುಟಿಲಿಟಿ ವೆಹಿಕಲ್ (ಎಂಯುವಿ) ಕಾರು ಪ್ರತಿಷ್ಠಿತ ಮಾಸ್ಟರ್ ಬ್ರಾಂಡ್ 2012 ಪ್ರಶಸ್ತಿ ಗೆದ್ದುಕೊಂಡಿದೆ.
ಆಟೋ ವಲಯದಲ್ಲಿನ ಮಾರುಕಟ್ಟೆ ಪ್ರಾಬಲ್ಯ, ದೀರ್ಘಾವಧಿ, ಗುಡ್‌ವಿಲ್, ಗ್ರಾಹಕರ ನಿಷ್ಠೆ ಹಾಗೂ ಸ್ವೀಕೃತಿಯನ್ನು ಪರಿಗಣಿಸಿ ಮಹೀಂದ್ರ ಕಂಪನಿಗೆ ಸಿಎಂಒ ಏಷಿಯಾ ಹಾಗೂ ವರ್ಲ್ಡ್ ಬ್ರಾಂಡ್ ಕಾಂಗ್ರೆಸ್ ಪ್ರಶಸ್ತಿ ನೀಡಿ ಗೌರವಿಸಿದೆ.
ಒಟ್ಟು 8000 ಬ್ರಾಂಡ್ ಕಾರುಗಳು ಪ್ರಶಸ್ತಿಗಾಗಿ ನಾಮನಿರ್ದೇಶನ ಪಡೆದಿದ್ದವು. ಈ ಪೈಕಿ 20 ಬ್ರಾಂಡ್ ಕಾರುಗಳಿಗೆ ಮಾತ್ರ 'ಮಾಸ್ಟರ್ ಬ್ರಾಂಡ್' ಪಟ್ಟ ನೀಡಲಾಗಿದೆ. ಇದು ಮೂರನೇ ಬಾರಿಗೆ ಸಿಎಂಒ ಏಷಿಯಾ ಹಾಗೂ ವರ್ಲ್ಡ್ ಬ್ರಾಂಡ್ ಕಾಂಗ್ರೆಸ್ ಪ್ರಶಸ್ತಿ ಆಯೋಜನೆಯಾಗುತ್ತಿದೆ.
ಮಹೀಂದ್ರ ಕ್ಸೈಲೋ ಆಕರ್ಷಕ ಲುಕ್ ಹೊಂದಿದ್ದು, ಉತ್ತಮ ರೋಡ್ ನಿರ್ವಹಣೆ ನೀಡುತ್ತಿದೆ. ಹೆಚ್ಚು ಆರಾಮದಾಯಕವಾದ ಕ್ಸೈಲೋ ಹೆಚ್ಚಿನ ಸುರಕ್ಷತೆಯನ್ನು ಖಾತ್ರಿಪಡಿಸುತ್ತಿದೆ. ಮಾರುಕಟ್ಟೆಯಲ್ಲಿ ಷೆವರ್ಲೆ ತವೆರಾ ಹಾಗೂ ಟೊಯೊಟಾ ಇನ್ನೋವಾಗೆ ಕ್ಸೈಲೋ ಪ್ರಬಲ ಪೈಪೋಟಿ ನೀಡುತ್ತಿದೆ.
ಕ್ಸೈಲೋ ಬಗಲಿಗೇರಿಸಿದ ಇತರ ಪ್ರಶಸ್ತಿಗಳ ಪಟ್ಟಿ:
ಇಟಿ ಜಿಗ್‌ವೀಲ್ಸ್ ಅವಾರ್ಡ್
ಓವರ್‌ಡ್ರೈವ್ ಸಿಎನ್‌ಬಿಸಿ ಟಿವಿ18 ಅವಾರ್ಡ್
ಎನ್‌ಡಿಟಿವಿ ಕಾರು ಆಂಡ್ ಬೈಕ್ ಅವಾರ್ಡ್
ಬಿಬಿಸಿ ಟಾಪ್ ಗೇರ್: ಫ್ಯಾಮಿಲಿ ಕಾರು ಆಫ್ ದಿ ಇಯರ್ ಅವಾರ್ಡ್
ಹಿಂದೂಸ್ತಾನ್ ಟೈಮ್ಸ್ ಗ್ರಾಹಕ ಸಂತೃಪ್ತಿ ಪ್ರಶಸ್ತಿ

ಮಹೀಂದ್ರ ಕ್ಸೈಲೋ ಎಂಯುವಿ
2009ನೇ ಇಸವಿಯಲ್ಲಿ ಲಾಂಚ್ ಆಗಿದ್ದ ಮಹಿಂದ್ರ ಕ್ಸೈಲೋ ಉತ್ತಮ ಮಾರುಕಟ್ಟೆಯನ್ನು ಉಳಿಸಿಕೊಂಡಿದೆ.

ಮಹೀಂದ್ರ ಕ್ಸೈಲೋ ಫ್ರಂಟ್ ಗ್ರಿಲ್
ಮಹೀಂದ್ರ ಕ್ಸೈಲೋ ಫ್ರಂಟ್ ಗ್ರಿಲ್ ಆಕರ್ಷಕ ವಿನ್ಯಾಸಕ್ಕೆ ಕಾರಣವಾಗಿದೆ.

ಮಹೀಂದ್ರ ಕ್ಸೈಲೋ ಇಂಟಿರಿಯರ್ ಲುಕ್
ಟಾಪ್ ಆಂಡ್ ವೆರಿಯಂಟ್ ಮಹೀಂದ್ರ ಕ್ಸೈಲೋ ಮನಮೋಹಕ ಇಂಟಿರಿಯರ್ ವಿನ್ಯಾಸ ಹೊಂದಿದೆ.

ಆಧುನಿಕ ಸೌಲಭ್ಯಗಳು
ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯಗಳನ್ನು ಮಹೀಂದ್ರ ಕ್ಸೈಲೋ ಎಂಯುವಿ ಕಾರಿನಲ್ಲಿ ಆಳವಡಿಸಲಾಗಿದೆ.

ಎಂಜಿನ್
ಮಹೀಂದ್ರ ವಿಶ್ವಾಸಾರ್ಹತೆಯ ಎಂಜಿನ್ ಹೊಂದಿದ್ದು, ಹೆಚ್ಚಿನ ಮೈಲೇಜ್ ಹೊಂದಿದೆ. 2.5 ಲೀಟರ್ ಡೀಸೆಲ್ ಎಂಜಿನ್ ಆಳವಡಿಸಲಾಗಿದೆ.

ದರ ಮಾಹಿತಿ
ವಿವಿಧ ವೆರಿಯಂಟ್‌ಗಳನ್ನು ಅವಲಂಬಿಸಿ ಮಹೀಂದ್ರ ಕ್ಸೈಲೋ ದರಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಅಂತೆಯೇ ಎಕ್ಸ್ ಶೋ ರೂಗಳಲ್ಲಿ 7ರಿಂದ 10 ಲಕ್ಷದ ವರೆಗೂ ದರ ದಾಖಲಾಗಿದೆ.


Click it and Unblock the Notifications








